ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸದಂತೆ ಒತ್ತಾಯ

KannadaprabhaNewsNetwork |  
Published : Sep 27, 2025, 12:00 AM IST
ಸ | Kannada Prabha

ಸಾರಾಂಶ

ಎಸ್ಟಿ ಸಮುದಾಯದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಬದಲು ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನರ ನಡೆಸುತ್ತಿರುವುದು ಖಂಡನೀಯ.

ಹಗರಿಬೊಮ್ಮನಹಳ್ಳಿ: ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವ ರಾಜ್ಯ ಸರ್ಕಾರದ ಯತ್ನವನ್ನು ಕೈ ಬಿಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಈ ಕುರಿತು ಸಮಾಜದ ಪುರಸಭೆ ಸದಸ್ಯ ಜೋಗಿ ಹನುಮಮತಪ್ಪ ಮಾತನಾಡಿ, ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದಡಿ ಎಸ್ಟಿ ಸಮುದಾಯದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಬದಲು ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನರ ನಡೆಸುತ್ತಿರುವುದು ಖಂಡನೀಯ. ಕೂಡಲೆ ಅನ್ಯ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವ ಯತ್ನವನ್ನು ಕೈ ಬಿಡಬೇಕು. ಎಸ್ಟಿ ಸಮುದಾಯ ಹಲವು ವರ್ಷಗಳಿಂದ ಶೋಷಣೆಗೆ ಒಳಗಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ದುಸ್ಥಿತಿಯಲ್ಲಿರುವ ಸಮಾಜದ ಹಕ್ಕುಗಳನ್ನು ಕಸಿದು ಅನ್ಯರ ಪಾಲಾಗಿಸುವುದು ಸೂಕ್ತವಲ್ಲ ಎಂದರು.

ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಿದರು. ವಾಲ್ಮೀಕಿ ಮಹಾಸಭಾದ ತಾಲೂಕು ಅಧ್ಯಕ್ಷ ಪವಾಡಿ ಹನುಮಂತಪ್ಪ ಮಾತನಾಡಿದರು. ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ, ಆರ್‌ಎಸ್‌ಎಸ್‌ಎನ್ ಅಧ್ಯಕ್ಷ ದಾಮ್ಮನವರ ಬಸವರಾಜ, ನಿಕಟಪೂರ್ವ ಅಧ್ಯಕ್ಷ ಟಿ.ವೆಂಕೋಬಪ್ಪ, ಮಹಾಸಭಾದ ಮಾಜಿ ಅಧ್ಯಕ್ಷ ಡಿಶ್ ಮಂಜುನಾಥ, ಗ್ರಾಪಂ ಮಾಜಿ ಸದಸ್ಯ ಸೆರೆಗಾರ ಹುಚ್ಚಪ್ಪ, ತಾಲೂಕು ಗೌರವಾಧ್ಯಕ್ಷ ಕೆ.ಎಸ್.ಹುಡುಚಪ್ಪ, ಮುಖಂಡರಾದ ರೋಗಾಣಿ ಪ್ರಕಾಶ, ಲೋಕಪ್ಪನಹೊಲ ಸತೀಶ್, ಕಡ್ಲಬಾಳು ಶರಣಪ್ಪ, ಜೆ.ಯೋಗಾನಂದ, ಹಂಪಾಪಟ್ಟಣ ಮಹೇಂದ್ರ, ಬಂಟ್ರು ಕುಬೇರ, ಕೆ.ಚಂದ್ರಶೇಖರ, ಬೆಳ್ಳಕ್ಕಿ ರಾಮಪ್ಪ, ಬಲ್ಲಾಹುಣ್ಸಿ ನಾಗರಾಜ, ಕೃಷ್ಣ, ಬಡಲಡಕಿ ಕೃಷ್ಣ, ಹೇಮೇಶ, ಕರಿಯಪ್ಪ, ತಳವಾರ ಅಂಜಿನಪ್ಪ, ದಶಮಾಪುರ ಮಂಜುನಾಥ, ಬೆಣ್ಣಿಕಲ್ಲು ಹನುಮಂತಪ್ಪ, ಬಾಳಪ್ಪ, ಕಾಗಿ ಪ್ರಹ್ಲಾದ್, ಅಂಬಣ್ಣ ಇದ್ದರು.

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಪದಾಧಿಕಾರಿಗಳು ಕುರುಬ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸದಂತೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ