ತಾಂತ್ರಿಕ ಹುದ್ದೆ ವೇತನ ಶ್ರೇಣಿಗೆ ಗ್ರಾಮ ಆಡಳಿತ ಅಧಿಕಾರಿಗಳ ಆಗ್ರಹ

KannadaprabhaNewsNetwork |  
Published : Sep 27, 2024, 01:28 AM IST
26ಕೆಪಿಆರ್ಸಿಆರ್02:  | Kannada Prabha

ಸಾರಾಂಶ

Demand of Village Administrative Officers for Technical Post Pay Scale

ರಾಯಚೂರಿನ ತಹಸೀಲ್ದಾರ್‌, ಲಿಂಗಸುಗೂರಿನ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಹೋರಾಟ

ಕನ್ನಡಪ್ರಭ ವಾರ್ತೆ ರಾಯಚೂರು/ಲಿಂಗಸುಗೂರು

ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ವೇತನ ನೀಡಬೇಕು, ಕಂದಾಯ ಇಲಾಖೆ ಸೇವೆಗಳು ಗಣಕೀಕತಗೊಂಡಿದ್ದು ಗ್ರಾಮ ಆಡಳಿತ ಅಧಿಕಾರಿಗಳಿಗೆ ಗಣಕಯಂತ್ರ ನೀಡಬೇಕು ಎಂಬುದೂ ಸೇರಿ ನಾನಾ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಆರಂಭಿಸಿದರು.

ರಾಯಚೂರು ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಅದೇ ರೀತಿ ಲಿಂಗಸುಗೂರು ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಮುಂದೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.

ಸರ್ಕಾರ ಕಂದಾಯ ಇಲಾಖೆಯ ಸಂಯೋಜನೆ, ಇ-ಆಫೀಸ್, ಆಧಾರ ಸೀಡ್, ಲ್ಯಾಂಡ್ ಬೀಟ್, ಬಗರ್ ಹುಕುಂ, ಹಕ್ಕು ಪತ್ರ, ನಮೂನೆ 1-15, ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ, ಸಂರಕ್ಷಣೆ (ಬೆಳೆ ಕಟಾವು ಮೊಬೈಲ್ ಆಪ್), ನವೋದಯ, ಗರುಡ, ಭೂಮಿ, ಎಲೆಕ್ಟ್-1, ವೋಟರ್ ಹೆಲ್ಪಲೈನ್, ಬೆಳೆ ಸಮೀಕ್ಷೆ, ಬೆಳೆ ಸಮೀಕ್ಷೆಯ ಅನುಮೋದನೆ ವೆಬ್ ಆಪ್, ಪಿ.ಎಂ ಕಿಸಾನ್ ವೆಬ್, ಕೃಷಿ ಗಣಿತಿ, ನೀರಾವರಿ ಗಣಿತಿ, ದಿಶಾಂಕ್ ಈಗಾಗಲೆ ವೆಬ್ ತಂತ್ರಾಂಶಗಳಲ್ಲಿ ಅಳವಡಿಸಲಾಗಿದೆ. ಇದರಿಂದ ಗ್ರಾಮ ಆಡಳಿತ ಅಧಿಕಾರಿಗಳಿಗೆ ತಾಂತ್ರಿಕೆ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು, ಗ್ರಾಮ ಆಡಳಿ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, 12, 25 ಜಿಬಿ ಸಾಮರ್ಥ್ಯದ ಮೊಬೈಲ್, ಸಿಮ್, ಡೇಟಾ, ಗೂಗಲ್ ಕ್ರೊಮ್ ಬುಕ್, ಪ್ರಿಂಟರ್ ಸೇರಿ ಸೌಲತ್ತು ನೀಡಬೇಕು ಎಂಬುದು ಸೇರಿದಂತೆ ಸೇವೆ ಸಂಬಂಧಿಸಿದ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

ರಾಯಚೂರಿನ ಹೋರಾಟದಲ್ಲಿ ಸಂಘದ ತಾಲೂಕಾಧ್ಯಕ್ಷ ಸುರೇಂದ್ರ ಕುಮಾರ ಪಾಟೀಲ್, ಮಂಜುನಾಥ, ಮೆಹಬೂಬ್, ನಲ್ಲಾರೆಡ್ಡಿ,ಹಸನ್, ಮನ್ಸೂರು, ಶ್ರೀನಿವಾಸ, ನಾಗರತ್ನ, ನೀಲವೇಣಿ, ಸುನೀತಾ, ಸ್ವೇತಾ, ಭಾರತಿ, ಯಂಕಮ್ಮ, ವಿಜಯಲಕ್ಷ್ಮೀ ಸೇರಿ ಇತರರು ಇದ್ದರು.

ಲಿಂಗಸುಗೂರಿನ ಪ್ರತಿಭಟನಾ ಧರಣಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಅಮರೇಶ ರಾಠೋಡ, ತಾಲೂಕು ಅಧ್ಯಕ್ಷ ವಿನಯ ಕುಮಾರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಬಸವರಾಜ, ದೇವಣ್ಣ ಪೂಜಾರಿ, ಮಲ್ಲಿಕಾರ್ಜುನ ಕಟ್ಟಿಮನಿ, ಯೇಸಪ್ಪ, ಮಹಿಬೂಬ್, ರಮೇಶ, ನಸೀಮಾಬೇಗಂ, ದೃವ ದೇಶಪಾಂಡೆ, ಮಹೇಶ ಕುಮಾರ, ಪುಷ್ಪಲತಾ, ದೀಪಿಕಾ, ಧರ್ಮಸಿಂಗ್ ಸೇರಿದಂತೆ ಇತರರು ಇದ್ದರು.

----------------------

26ಕೆಪಿಆರ್ಸಿಆರ್02

ರಾಯಚೂರು ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಸಮಿತಿಯಿಂದ ಪ್ರತಿಭನಾ ಧರಣಿ ನಡೆಸಲಾಯತು.

26ಕೆಪಿಎಲ್ಎನ್ಜಿ01 :

ಲಿಂಗಸುಗೂರು ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ