ದುರುಳರಿಗೆ ಕಠಿಣ ಶಿಕ್ಷೆಗೆ ಆಗ್ರಹ

KannadaprabhaNewsNetwork |  
Published : Apr 26, 2024, 12:49 AM IST
ವಿಜಯಪುರದಲ್ಲಿ ಮಹಿಳೆಯರನ ಮೇಲೆ ಅತ್ಯಾಚಾರ ಹಾಗು ಕೂಲೆ ಆಗುತ್ತಿರುವದನ್ನು ಖಂಡಿಸಿ ಮಹಿಳೆಯರು ಪಂಜಿನ ಮೆರವಣಿಗೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಮಾಡುವ ದುಷ್ಟರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು, ಮಹಿಳೆಯರು, ಮುಖಂಡರು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಒತ್ತಾಯ ಮಾಡಿದರು.

ವಿಜಯಪುರ: ರಾಜ್ಯದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಮಾಡುವ ದುಷ್ಟರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆ ಪದಾಧಿಕಾರಿಗಳು, ಮಹಿಳೆಯರು, ಮುಖಂಡರು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಒತ್ತಾಯ ಮಾಡಿದರು.

ನಗರದಲ್ಲಿ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ನಗರ ಸ್ಲಂ ಅಭಿವೃದ್ಧಿ ಸವಿತಿ ಒಕ್ಕೂಟ, ನಗರ ಗೃಹ ಕಾರ್ಮಿಕರ ಯೂನಿಯನ್‌, ನಗರ ಅಸಂಘಟಿತ ಯುವತಿಯರ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಅಂಬೇಡ್ಕರ ವೃತ್ತದಿಂದ ಗಾಂಧಿ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಸುವ ಮೂಲಕ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದರು.

ಹೋರಾಟಗಾರ್ತಿ ನಿರ್ಮಲಾ ಹೂಸಮನಿ ಮಾತನಾಡಿದರು. ಮುಖಂಡ ಶ್ರೀನಾಥ ಪೂಜಾರಿ ಮಾತನಾಡಿ, ಹೆಣ್ಣು ಮಕ್ಕಳೆಂದರೆ ದುರುಗಳರಿಗೆ ಆಟದ ವಸ್ತುಗಳಾಗಿದ್ದಾರೆ. ಯಾರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾರೆ ಅಂತವರನ್ನು ಗುರುತಿಸಿ ಕಠಿಣ ಶಿಕ್ಷೆ ಒಳಪಡಿಸಿದರೆ ಮುಂದಿನ ದಿನಗಳಲ್ಲಿ ಅತ್ಯಾಚಾರ ಕೃತ್ಯಕ್ಕೆ ಹೋಗುವುದಿಲ್ಲ. ಅಲ್ಲದೇ ಇಂತವರನ್ನು ಸಾರ್ವಜನಿಕವಾಗಿ ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು. ಮುಖಂಡರಾದ ಅಕ್ರಮ ಮಾಶ್ಯಾಳಕರ, ಸಿ.ಎ.ಘಂಟೆಪ್ಪಗೂಳ, ಅಬ್ದುಲ್ ಕದಿರ, ಗಾಂಧಿ, ರಾಜೇಶ್ವರಿ ಮಠಪತಿ, ಮಿನಾಕ್ಷಿ ಕಾಲೆಬಾಗ, ಶೋಭಾ ಗಾಯಕವಾಡ, ಯಲ್ಲವ್ವ ಗಡೇಕರ, ಶಬೀರ ಕಾಗಜಕೊಟಿ, ವಿಜಯ ಕುಮಾರ, ಕುಸಮಾ ಬಡಿಗೇರ, ಖತಿಜಾ ಹೆಬ್ಬಾಳ, ಜಿ.ಜಿ. ಗಾಂಧಿ, ಬಾಳುಜಿ ಮುಂತಾದವರು ಇದ್ದರು.---

ಪೋಟೋ

ವಿಜಯಪುರ ನಗರದಲ್ಲಿ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ, ನಗರ ಸ್ಲಂ ಅಭಿವೃದ್ಧಿ ಸವಿತಿ ಒಕ್ಕೂಟ, ನಗರ ಗೃಹ ಕಾರ್ಮಿಕರ ಯೂನಿಯನ್‌, ನಗರ ಅಸಂಘಟಿತ ಯುವತಿಯರ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಅಂಬೇಡ್ಕರ ವೃತ್ತದಿಂದ ಗಾಂಧಿ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ