ಸುರಪುರ ಘಟಕ ನಿಯಂತ್ರಣಾಧಿಕಾರಿಗೆ ಎಎಪಿ ಮನವಿ
ಈ ವೇಳೆ ಮಾತನಾಡಿದ ಎಎಪಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ, ನಾಲತವಾಡದವರೆಗೂ ಬರುವ ಬಸ್‌ಗಳು 100 ಮೀಟರ್ ದೂರದಲ್ಲಿರುವ ಕಮಲಾಪುರಕ್ಕೆ ಬರುವುದಿಲ್ಲ. ಇದರಿಂದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಗ್ರಾಮದಿಂದ 1 ಕಿ.ಮೀ.ವರೆಗೆ ನಡೆದುಕೊಂಡು ಹೋಗಿ ಎಣ್ಣೆವಡಗೇರಾದಿಂದ ಬಸ್ ಹತ್ತುವ ಪರಿಸ್ಥಿತಿಯಿದೆ ಎಂದು ದೂರಿದರು.
ಗ್ರಾಮದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ನಾಲತವಾಡ, ಮುದ್ದೇಬಿಹಾಳ, ನಾರಾಯಣಪುರ ಗ್ರಾಮಗಳಿಂದ ಪಟ್ಟಣಕ್ಕೆ ಹೋಗಿ ಬರುತ್ತಾರೆ. ಸರಿಯಾದ ಸಮಯಕ್ಕೆ ಬಸ್‌ಯಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಗ್ರಾಮದ ಮಹಿಳೆಯರು, ವೃದ್ಧರು ಒಂದು ಕಿ.ಮೀ.ವರೆಗೆ ನಡೆದುಕೊಂಡು ಹೋಗುವುದು ಯಾವ ನ್ಯಾಯ? ಹುಣಸಗಿ-ನಾಲತವಾಡ ಬಸ್ಸುಗಳು ಕಮಲಾಪುರ ಗ್ರಾಮದವರೆಗೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಹುಣಸಗಿಯಿಂದ ನಾಲತವಾಡವರೆಗೆ ಚಲಿಸುವ ಬಸ್ ಬೆಳಗ್ಗೆ 7:20 ರಿಂದ 10:30 ಗಂಟೆವರೆಗೆ ಹಾಗೂ ಮಧ್ಯಾಹ್ನ 1:30 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಕಮಲಾಪುರ ಗ್ರಾಮದವರೆಗೆ ಎಲ್ಲ ಬಸ್ಸುಗಳು ಸಂಚರಿಸಬೇಕು. ಇಲ್ಲದಿದ್ದರೆ ರಸ್ತೆ ತಡೆದು ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಎಎಪಿಯ ಜಿಲ್ಲಾ ಮುಖಂಡ ಸೋಮನಗೌಡ, ಸಾಮಾಜಿಕ ಜಾಲತಾಣದ ಪರಶುರಾಮ, ಸುಭಾಶ್ಚಂದ್ರ ತೇಲ್ಕರ್ ಹಾಗೂ ವಿದ್ಯಾರ್ಥಿಗಳಿದ್ದರು.