ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಸಿ

KannadaprabhaNewsNetwork |  
Published : Dec 27, 2024, 12:46 AM IST
ಫೋಟೋ:26ಕೆಪಿಎಸ್ಎನ್ಡಿ1 | Kannada Prabha

ಸಾರಾಂಶ

ಸಿಂಧನೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು

ಕನ್ನಡಪ್ರಭ ವಾರ್ತೆ ಸಿಂಧನೂರು

ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಎಪಿಎಂಸಿ ಗಣೇಶ ದೇವಸ್ಥಾನದಿಂದ ಮಿನಿ ವಿಧಾನಸೌಧ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಮಾದಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮರಿಯಪ್ಪ ಜಾಲಿಹಾಳ, ಸಿಪಿಐಎಂಎಲ್ ಮಾಸ್ಲೈನ್ ರಾಜ್ಯ ಸಂಚಾಲಕ ಡಿ.ಎಚ್.ಪೂಜಾರ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಅಶೋಕ ನಂಜಲದಿನ್ನಿ, ಶೇಖರಪ್ಪ ಧುಮತಿ ವಕೀಲ, ನಿರುಪಾದೆಪ್ಪ ಗುಡಿಹಾಳ ವಕೀಲ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪಿ.ರುದ್ರಪ್ಪ ಕುರುಕುಂದಾ, ಛಲವಾದಿ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಡಾ.ರಾಮಣ್ಣ ಗೋನವಾರ, ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ವಿಶ್ವನಾಥ ಗೋನಾಳ, ನಾಯಕ ಸಮಾಜದ ಅರುಣ್‌ಕುಮಾರ ಯಾಪಲಪರ್ವಿ, ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ಸಂಚಾಲಕ ಮೌನೇಶ ಜಾಲವಾಡಗಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ಗೃಹ ಸಚಿವ ಅಮಿತ್ ಶಾ ತಕ್ಷಣವೇ ರಾಜೀನಾಮೆ ನೀಡಿ, ಬಹಿರಂಗ ಕ್ಷಮೆ ಯಾಚಿಸಬೇಕು. ಇವರ ಮೇಲೆ ರಾಷ್ಟ್ರದ್ರೋಹ ಕೃತ್ಯದಡಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಶರಣಪ್ಪ ಮರಳಿ, ಮಂಜುನಾಥ ಅವರು ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರಗೆ ಮನವಿ ಪತ್ರ ಸಲ್ಲಿಸಿದರು.

ಸದಸ್ಯರಾದ ಬಾಬಾರ್‌ ಪಾಷಾ ಜಾಗೀರದಾರ್, ಟಿ.ಹುಸೇನಸಾಬ, ಬಾಷುಮಿಯಾ, ವೆಂಕನಗೌಡ ಗದ್ರಟಗಿ, ನಾಗರಾಜ ಪೂಜಾರ್, ಬಸವರಾಜ ಬಾದರ್ಲಿ, ನರಸಪ್ಪ ಕಟ್ಟಿಮನಿ, ಮಹಾಂಕಾಳೆಪ್ಪ ಮಲ್ಲಾಪುರ, ರಾಮಣ್ಣ ಹಿರೇಬೇರಿಗಿ, ಸಮ್ಮದ್ ಚೌದ್ರಿ, ಅರುಣ್‌ಕುಮಾರ ಬೇರಿಗಿ, ಶಂಕರ್, ಮಹಾದೇವಪ್ಪ, ಬಿ.ಲಿಂಗಪ್ಪ, ಎಸ್.ದೇವೇಂದ್ರಗೌಡ, ಬಸವಂತರಾಯಗೌಡ, ಆರ್.ಬೋನ್ವೆಂಚರ್, ಮರಿಯಪ್ಪ, ಆರ್.ಅಂಬ್ರೂಸ್, ರಾಮಣ್ಣ, ಕೆ.ಜಿಲಾನಿಪಾಷಾ, ಅಲ್ಲಮಪ್ರಭು, ವೀರಭದ್ರಗೌಡ, ಬಾಲಸ್ವಾಮಿ ವಕೀಲ, ಸಾಲೋಮನ್, ಹಾಜಿಸಾಬ, ಯಂಕಪ್ಪ ಕೆಂಗಲ್, ಅಮರೇಶ, ನಾರಾಯಣ, ಬಸವರಾಜ, ತಾಯಪ್ಪ, ಮೌಲಪ್ಪ, ಶರಣಪ್ಪ, ಅಶೋಕ ಸೇರಿ ಅನೇಕರಿದ್ದರು.

PREV

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು