ದಲಿತ ಕುಟುಂಬದ ಮನೆ ಧ್ವಂಸಗೊಳಿಸಿದ ಆರೋಪಿಗಳ ಬಂಧಿಸಲು ಆಗ್ರಹ

KannadaprabhaNewsNetwork |  
Published : Sep 22, 2026, 02:30 AM IST
ಈ ಸಂದರ್ಭದಲ್ಲಿ * ಪುನೀತ್ ಮರಾಠ, ಶಾಮ್ ದೇಶಭಾಗ್, ರಾಜೇಶ್ ಕಲಘಟಗಿ, ಅಮಿತ್ ಜೋಗುಳೇಕ‌ರ್, . ಶ್ರೀಮತಿ ವಾಣಿ ಶಿರಾಲಿ, ರೇಖಾ, ಶಿವಮ್ಮ, ನಾಗರತ್ನ ಸೇರಿದಂತೆ ಅನೇಕರಿದ್ದರು | Kannada Prabha

ಸಾರಾಂಶ

ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಸ್ಸಿ,ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾನೂನಿನಡಿ ಆರೋಪಿಗಳಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.

ಶಿರಸಿ: ತಾಲೂಕಿನ ಗೌಡಳ್ಳಿಯಲ್ಲಿ ದಲಿತ ಕುಟುಂಬದ ಮನೆಯನ್ನು ಧ್ವಂಸಗೊಳಿಸಿದ ಆರೋಪಿಗಳನ್ನು ತಕ್ಷಣ ಪೊಲೀಸರು ಬಂಧಿಸಬೇಕೆಂದು ಭೀಮಗರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ್ ಮಿಂಟಿ ಆಗ್ರಹಿಸಿದರು.ಸೋಮವಾರ ನಗರದ ಎಸಿ ಆಫೀಸ್ ಮುಂಭಾಗ ಪೊಲೀಸರ ನಡೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಅಡಿಯಲ್ಲಿ(ಡಿಸಿಆರ್ ಇ) ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಎಸಿ ಚಂದ್ರಶೇಖರ ಆರ್.ಜಿ. ಅವರಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದರು.10 ವರ್ಷ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಗಂಭೀರ ಸೆಕ್ಷನ್‌ಗಳಡಿ ಎಫ್ ಐಆರ್ ದಾಖಲಾಗಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸದೇ ನಿರ್ಲಕ್ಷ್ಯ ವಹಿಸಿರುವುದು ದಲಿತರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.ತಾಲೂಕಿನ ಗೌಡಳ್ಳಿ ಗ್ರಾಮದ ದಲಿತ ಸತ್ಯನಾರಾಯಣ ಬೋರ್ಕರ್ ಅವರ ಕುಟುಂಬ ವಾಸವಿದ್ದ ಏಕೈಕ ವಸತಿ ಮನೆಗಳನ್ನು ಬೇರೆ ಸಮುದಾಯಕ್ಕೆ ಸೇರಿದ ಬಿಷಪ್ ಹಾಗೂ ಅವರ ಬೆಂಬಲಿಗರು ಜೆಸಿಬಿ ಯಂತ್ರ ಬಳಸಿ ಅಕ್ರಮವಾಗಿ ದಲಿತ ಕುಟುಂಬ ವಾಸವಿದ್ದ ಮನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ದೌರ್ಜನ್ಯ ಎಸಗಿರುವ ಘಟನೆಗೆ ಸಂಬಂಧಿಸಿದಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಯಾವುದೇ ಕ್ರಮ ಆಗಿಲ್ಲ ಎಂದರು.ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಸ್ಸಿ,ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾನೂನಿನಡಿ ಆರೋಪಿಗಳಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು.ಅಲ್ಲದೆ ಎಫ್‌ಐಆರ್ ದಾಖಲಾಗಿ ತಿಂಗಳುಗಳೇ ಕಳೆದರೂ ಪೊಲೀಸ್ ಇಲಾಖೆ ಹಾಗೂ ತನಿಖಾಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆಯೇ ವಿನಾ ಆರೋಪಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಇದುವರೆಗೂ ಕೈಗೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು.ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಯಾವುದೇ ರೀತಿಯ ತಡೆಯಾಜ್ಞೆ ಇಲ್ಲದಿದ್ದರೂ ಡಿಸಿಆರ್ ಇ ಪೊಲೀಸರು ಆರೋಪಿಗಳನ್ನು ಬಂಧಿಸದೇ ರಕ್ಷಿಸುತ್ತಿದ್ದಾರೆ. ಇದರಿಂದಾಗಿ ಪ್ರಭಾವಿ ಆರೋಪಿಗಳು ಯಾವುದೇ ಭಯವಿಲ್ಲದೇ ಆರಾಮವಾಗಿ ಓಡಾಡಿಕೊಂಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಪುನೀತ್ ಮರಾಠ, ಶಾಮ್ ದೇಶಭಾಗ್, ರಾಜೇಶ್ ಕಲಘಟಗಿ, ಅಮಿತ್ ಜೋಗುಳೇಕ‌ರ್, ವಾಣಿ ಶಿರಾಲಿ, ರೇಖಾ, ಶಿವಮ್ಮ, ನಾಗರತ್ನ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌಲ್ಯಯುತ ಶಿಕ್ಷಣದ ಅನುಷ್ಠಾನ ಬಹಳ ಮುಖ್ಯ: ಮುಪ್ಪಿನ ಬಸವಲಿಂಗ ಶ್ರೀ
ತುಪ್ಪಕ್ಕಿದೆ ಸಾವಿರ ಬಾರಿ ಬಿಸಿ ಮಾಡಿದರೂ ಕೆಡದ ಶಕ್ತಿ: ರಾಘವೇಶ್ವರ ಶ್ರೀಗಳು