ಬಕ್ರೀದ್ ಹಬ್ಬಗಳಲ್ಲಿ ಜಾನುವಾರು ಹತ್ಯೆ ನಿಷೇಧಿಸಲು ಒತ್ತಾಯ.

KannadaprabhaNewsNetwork |  
Published : Jun 13, 2024, 12:46 AM IST
ಬಕ್ರೀದ್ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಬಕ್ರೀದ್ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧಿಸ ಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆಗೆ ಬುಧವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಕ್ರೀದ್ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧಿಸ ಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆಗೆ ಬುಧವಾರ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಪರಿಷತ್ ಮುಖಂಡರು, ದೇಶ ಹಾಗೂ ರಾಜ್ಯದ ಕಾನೂನಿನ್ವಯ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿರುವ ಕಾರಣ ಬಕ್ರೀದ್ ಸೇರಿದಂತೆ ಇನ್ನಿತರೆ ಹಬ್ಬದ ವೇಳೆ ಜಾನುವಾರು ಹತ್ಯೆ ನಿಷೇಧಗೊಳಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅಕ್ರಮ ಜಾನುವಾರು ಸಾಗಾಟವಾಗದಂತೆ ಗಮನಹರಿಸಬೇಕು. ಅಲ್ಲದೇ ಬಕ್ರೀದ್‌ ವರೆಗೂ ನಾಕಾಬಂಧಿ ಹಾಕಬೇಕು. ಕಿವಿಯೋಲೆ ಇಲ್ಲದ ಜಾನುವಾರುಗಳನ್ನು ಸಾರ್ವಜನಿಕ ಜಾಗ ದಲ್ಲಿ ಒಂದೆಡೆ ಇರದಂತೆ, ಮೇಯಲು ಬಿಡದಂತೆ, ಸಾರ್ವಜನಿಕರಿಗೆ ಎಚ್ಚರಿಕೆಯನ್ನು ಮಾಧ್ಯಮದ ಮೂಲಕ ಪ್ರಚಾರಪಡಿಸಬೇಕು ಎಂದರು. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಜಾನುವಾರು ಕಾಯ್ದೆ ಪ್ರಕರಣ ದಾಖಲಿಸಬೇಕು. ಅಲ್ಲದೇ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆ ಹಿಂದೆ ನಡೆದ ಸ್ಥಳವನ್ನು ನಿಗಾವಹಿಸಿ ಪ್ರಾರ್ಥನಾ, ಮಂದಿರಗಳಲ್ಲಿ ಜಾನುವಾರು ಶೇಖರಿಸಿಡದಂತೆ ಸೂಚಿಸಬೇಕು ಎಂದರು. ಈ ಸಂದರ್ಭದಲ್ಲಿ ಪರಿಷತ್ ಕಾರ್ಯದರ್ಶಿ ರಂಗನಾಥ್, ಜಿಲ್ಲಾ ಸಹ ಸಂಯೋಜಕ ಶ್ಯಾಮ್ ವಿ.ಗೌಡ, ನಗರ ಸಂಯೋಜಕ ಸುನೀಲ್ ಆಚಾರ್ಯ, ಧರ್ಮಪ್ರಸಾರ ಪ್ರಮುಖ ಪ್ರದೀಪ್, ಗೋರಕ್ಷ ಪ್ರಮುಖ ಕಿರಣ್, ಮಠ ಮಂದಿರ ಪ್ರಮುಖ್ ಆಟೋ ಶಿವಣ್ಣ ಹಾಜರಿದ್ದರು.

12 ಕೆಸಿಕೆಎಂ 5ಬಕ್ರೀದ್ ಮತ್ತಿತರ ಹಬ್ಬಗಳ ಸಂದರ್ಭದಲ್ಲಿ ಜಾನುವಾರು ಮತ್ತು ಇತರೆ ಪ್ರಾಣಿಗಳ ಹತ್ಯೆ ನಿಷೇಧಿಸ ಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆಗೆ ಬುಧವಾರ ಮನವಿ ಸಲ್ಲಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ