ಬ್ಯಾಡಗಿ: ಆನ್‌ಲೈನ್ ಔಷಧಿ ಮಾರಾಟ ನಿಷೇಧಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಖಿಲ ಭಾರತ ಔಷಧಿ ಮಾರಾಟಗಾರರ ಸಂಘ ದೇಶವ್ಯಾಪಿ ಕರೆ ನೀಡಿದ್ದ ಮುಷ್ಕರಕ್ಕೆ ಬ್ಯಾಡಗಿ ತಾಲೂಕು ಔಷಧಿ ವ್ಯಾಪಾ ರಿಗಳ ಸಂಘ ಬೆಂಬಲ ಸೂಚಿದ್ದಲ್ಲದೇ ಔಷಧಿ ಮಾರಾಟ ಸ್ಥಗಿತಗೊಳಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹೊಣೆಗಾರಿಕೆ ಮರೆತ ಸರ್ಕಾರಗಳು
ಈ ವೇಳೆ ಮಾತನಾಡಿದ ಅಧ್ಯಕ್ಷ ಶಿವರಾಜ ಚೂರಿ, ಆದರೆ ಅಧಿಕೃತ ಲೈಸೆನ್ಸ್ ಪಡೆದ ಡ್ರಗ್ಗಿಷ್ಟಗಳಿಲ್ಲದೇ ಮತ್ತು ವೈದ್ಯರ ಚೀಟಿ ಇಲ್ಲದೇ ರೋಗಿಗಳಿಗೆ ಮಾತ್ರ ಔಷಧಿ ಕೊಡುವಂತಿಲ್ಲ ಅದರಲ್ಲೂ ರೊಗಿಗಳಿಗೆ ತಿಳಿಯುವಂತೆ ಬರೆದಿರುವ ಚೀಟಿಗಳಿಗೆ ಮಾನ್ಯತೆ ನೀಡಿರುವ ಸರ್ಕಾರ ಕಾನೂನು ಮಾಡಿದೆ ಹೀಗಿದ್ದರೂ ತಮ್ಮದೇ ಕಾನೂನು ಉಲ್ಲಂಘಿಸಿ ನಡೆಯುವ ಆನ್‌ಲೈನ್ ಔಷಧಿ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಿರುವುದು ದುರದೃಷ್ಟಕರ ಎಂದರು.ಬಾಧ್ಯಸ್ಥಿಕೆ ಯಾರದು?: ಡಾ.ಎ.ಎಂ.ಸೌದಾಗರ ಮಾತನಾಡಿ, ಆನ್‌ಲೈನ್ ಔಷಧಿಗಳ ಮಾರಾಟಕ್ಕೆ ಯಾವುದೇ ಲಂಗು-ಲಗಾಮುಗಳಿಲ್ಲ, ಇಲ್ಲಿ ಪಡೆದ ಔಷಧಿ ಅಧಿಕೃತ ಹೌದು ಇಲ್ಲವೇ ಎಂಬುದನ್ನು ನಿರ್ಧರಿಸುವರ‍್ಯಾರು? ಆನ್‌ಲೈನ್ ಪಡೆದಂತಹ ಔಷಧಿಗಳನ್ನು ಪಡೆದ ರೋಗಿಯು ಮರಣ ಹೊಂದಿದಲ್ಲಿ ಅದರ ಬಾಧ್ಯಸ್ಥಿಕೆ ಯಾರು ತೆಗೆದು ಕೊಳ್ಳಲಿದ್ದಾರೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸುವಂತೆ ಆಗ್ರಹಿಸಿದರು.
ವಂಚನೆ ಹೆಚ್ಚಳ ಸಾಧ್ಯತೆ: ಅರವಿಂದ ಮುದ್ದಣ್ಣನವರ ಮಾತನಾಡಿ, ಆನ್‌ಲೈನ್ ಮೂಲಕ ಔಷಧಿ ವಿತರಣೆ ಹೆಚ್ಚಾದರೆ ನಕಲಿ ಹಾಗೂ ಅವಧಿ ಮೀರಿದ ಔಷಧಿ ತಲುಪುವ ಅಪಾಯವೂ ಹೆಚ್ಚಾಗುತ್ತದೆ ಎಂದರು. ಸತೀಶ ಅಂಗಡಿ, ನಿಜಾಮ ಖಾಜಿ, ಕುಮಾರ ಹಿರೇಮಠ, ಶಿವಕುಮಾರ ತೋಟದ, ಹರೀಶ ನಾಯ್ಕರ, ಭರಮರೆಡ್ಡಿ ಅಜ್ಜಮ್ಮನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಔಷಧ ವ್ಯಾಪಾರಸ್ಥರ ಸಂಘದಿಂದ ಪ್ರತಿಭಟನೆ
ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯನ್ನುಂಟು ಮಾಡುವ ಅಕ್ರಮ ಆನ್‌ಲೈನ್ ಔಷಧಿಗಳ ಮಾರಾಟದ ಬಗ್ಗೆ ತಕ್ಷಣದ ಹಸ್ತಕ್ಷೇಪಕ್ಕಾಗಿ ವಿನಂತಿ ಮತ್ತು ಔಷಧ ತಜ್ಞರ ಜೀವನೋಪಾಯಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯು ಚೆನ್ನಮ್ಮ ಸರ್ಕಲ್‌ನಿಂದ ಆರಂಭವಾಗಿ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದಿಂದ ಹಾಯ್ದು ತಹಸೀಲ್ದಾರ್ ಕಚೇರಿಗೆ ಸೇರಿತು.