- ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶ್ವ ಮುಸ್ಲಿಂ ಪರಿಷತ್‌ನ ಸುಭಾನ್ ಖಾನ್ ಆಗ್ರಹ । ಜಿಲ್ಲಾಡಳಿತಕ್ಕೆ ಮನವಿ - - -
ದಾವಣಗೆರೆ ಮಹಾನಗರ, ಜಿಲ್ಲೆಯ ವ್ಯಾಪ್ತಿಯ ಗೋಮಾಂಸದ ಅಂಗಡಿಗಳನ್ನು ಬಂದ್ ಮಾಡಿಸುವಂತೆ ವಿಶ್ವ ಮುಸ್ಲಿಂ ಪರಿಷತ್ ರಾಜ್ಯ ಘಟಕದಿಂದ ನಗರದಲ್ಲಿ ಮಂಗಳವಾರ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರನ್ನು ಭೇಟಿ ಮಾಡಿದ ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ, ರಾಜ್ಯಾಧ್ಯಕ್ಷ ಸುಭಾನ್ ಖಾನ್ ನೇತೃತ್ವದ ನಿಯೋಗವು ದಾವಣಗೆರೆಯ ಗೋಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಅರ್ಪಿಸಿದರು.ಸುಭಾನ್ ಖಾನ್ ಮಾತನಾಡಿ, ಕಾನೂನು ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದೆ. ದಾವಣಗೆರೆಯ ಆಜಾದ್ ನಗರ, ಬಾಷಾ ನಗರ, ಕೆಟಿಜೆ ನಗರದ ವ್ಯಾಪ್ತಿಯಲ್ಲಿ ಗೋಮಾಂಸ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ವಿಶ್ವ ಮುಸ್ಲಿಂ ಪರಿಷತ್‌ನಿಂದ ಮೇ ತಿಂಗಳಲ್ಲಿ ಸುದ್ದಿಗೋಷ್ಠಿ ನಡೆಸಿ, ಗೋವು, ದನ, ಕರುಗಳನ್ನು ಕೊಲ್ಲಬೇಡಿ, ಹತ್ಯೆ ಮಾಡಬೇಡಿ, ವಧೆ ಮಾಡಬೇಡಿ ಎಂಬುದಾಗಿ ಮನವಿ ಮಾಡಿಕೊಂಡಿದ್ದೆವು. ಆದರೆ, ಗೋ ಮಾಂಸ ಅಂಗಡಿಗಳ ಮಾಲೀಕರು ವಿಶ್ವ ಮುಸ್ಲಿಂ ಪರಿಷತ್ ಮನವಿಗೆ ಸ್ಪಂದಿಸಿಲ್ಲ, ಕಿವಿಗೊಟ್ಟಿಲ್ಲ ಎಂದರು.
ಕಾನೂನು ಗಾಳಿಗೆ ತೂರಿ, ಪಾಲಿಕೆಯಿಂದ ಯಾವುದೇ ಲೈಸೆನ್ಸ್ ಇಲ್ಲದೇ ಗೋಮಾಂಸದ ಅಂಗಡಿ ತೆರೆದು, ಗೋಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ. ಗೂಂಡಾಗಿರಿ ಮಾಡಿಕೊಂಡು, ಗೋಮಾಂಸದ ಅಂಗಡಿಯನ್ನು ತೆರೆದು, ವ್ಯವಹರಿಸುತ್ತಿದ್ದಾರೆ. ರಾಣೆಬೆನ್ನೂರು, ಹಾವೇರಿ ಇತರೆ ಕಡೆಗಳಿಂದ ಗೋವುಗಳನ್ನು ಖರೀದಿಸಿ, ತಂದು ಗೋಮಾಂಸ ದಂಧೆ ಮಾಡುತ್ತಿದ್ದಾರೆ. ಗೋವುಗಳನ್ನು ಅಕ್ರಮವಾಗಿ ದಾವಣಗೆರೆಗೆ ಸಾಗಿಸುವ ವೇಳೆ ಹಿಂದೂ ಪರ ಸಂಘಟನೆಗಳು ಅಂತಹ ಗೋವುಗಳು ತುಂಬಿದ ವಾಹನಗಳನ್ನು ಅಡ್ಡ ಹಾಕಿ, ತಡೆದು, ಚಾಲಕನಿಗೆ ಥಳಿಸುವುದು, ಹಲ್ಲೆ ಮಾಡುವುದು ಸಾಮಾನ್ಯವಾಗಿರುತ್ತದೆ. ಗೋವುಗಳನ್ನು ಸಾಗಿಸುವ ವಾಹನಗಳ ಚಾಲಕರಿಗೂ ಹೆಂಡತಿ, ಮಕ್ಕಳು, ಪಾಲಕರು ಇರುತ್ತಾರೆ. ಅಂತಹವರಿಗೂ ಇನ್ನಿಲ್ಲದ ತೊಂದರೆ ಆಗುತ್ತದೆ. ಆಕಸ್ಮಾತ್ ಚಾಲಕರು ಹೊಡೆತ ತಾಳಲಾರದೇ ಸಾವನ್ನಪ್ಪಿದರೆ ಯಾರು ಹೊಣೆ ಎಂದು ಸುಭಾನ್ ಖಾನ್ ಪ್ರಶ್ನಿಸಿದರು.
ಈ ಸಂದರ್ಭ ಪರಿಷತ್ ನ ಮಹಮ್ಮದ್ ಯೂಸೂಫ್, ಅಲ್ಲಾಬಕ್ಷಿ, ನೂರುಲ್ಲಾ, ಶೇಕ್ ಅಹಮ್ಮದ್, ಫರ್ವೇಜ್, ಎಂ.ಎಸ್.ಅಬ್ದುಲ್ಲಾ, ಎಂ.ಮಂಜುನಾಥ, ನೂರ್ ಅಹಮ್ಮದ್ ಇತರರು ಇದ್ದರು.
(ಬಾಕ್ಸ್)
- ಸುಭಾನ್ ಖಾನ್, ಸಂಸ್ಥಾಪಕ ಅಧ್ಯಕ್ಷ, ವಿಶ್ವ ಮುಸ್ಲಿಂ ಪರಿಷತ್.
-9ಕೆಡಿವಿಜಿ1: