ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಜೆಜಿ ಹಳ್ಳಿಯ ಗಣೇಶ ದೇವಸ್ಥಾನದ ಆವರಣದಲ್ಲಿ ಬುಧವಾರ ಜೆಜಿ ಹಳ್ಳಿ ಮತ್ತು ಕರಿಯಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜೆಜಿ ಹಳ್ಳಿ ಹೋಬಳಿಯಲ್ಲಿ 246 ದಿನಗಳ ವಿವಿಧ ಮಾದರಿಯ ನಿರಂತರ ಹೋರಾಟ ಮಾಡಿದ ಫಲವಾಗಿ ಇಂದು ಸರ್ಕಾರ ವಾಟರ್ ಅಲೋಕೇಶನ್ ಮಾಡಿ ಅನುಮೋದನೆ ನೀಡಿ ಟೆಂಡರ್ ಕರೆದು ವರ್ಕ್ ಆರ್ಡರ್ ಸಹ ಕೊಡಲಾಗಿದೆ. ಆದರೆ ಇದುವರೆಗೂ ಕಾಮಗಾರಿ ಪ್ರಾರಂಭಿಸದೆ ವಿಳಂಬ ಮಾಡಲಾಗುತ್ತಿದೆ. ಬರುವ ಬೇಸಿಗೆ ಒಳಗೆ ಜಲಾಶಯದಿಂದ 16 ಕೆರೆಗಳಿಗೆ ನೀರು ತುಂಬಿಸದೆ ಹೋದರೆ ಈ ಭಾಗದ ಎಲ್ಲಾ ಮರಗಳು ಫಸಲುಗಳು ಒಣಗಿ ಹೋಗುವ ಜೊತೆಗೆ ಜನಜಾನುವಾರುಗಳಿಗೂ ಕುಡಿಯುವ ನೀರು ಸಿಗದಂತಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಕಾಮಗಾರಿ ಪ್ರಾರಂಭಿಸಿ ಇನ್ನೂ ಮೂರ್ನಾಲ್ಕು ತಿಂಗಳೊಳಗಾಗಿ ನೀರು ಹರಿಸುವ ಜೊತೆಗೆ ವಾಣಿವಿಲಾಸ ಜಲಾಶಯಕ್ಕೆ ಪ್ರತಿ ವರ್ಷ 10 ಟಿಎಂಸಿ ನೀರು ಮೀಸಲು ಇಡಬೇಕು.ಕಸಬಾ ಹಾಗೂ ಐಮಂಗಲ ಹೋಬಳಿ ಭಾಗದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಕೆರೆಗಳಿಗೆ ನೀರು ತುಂಬಿಸಬೇಕು. ಧರ್ಮಪುರ ಹೋಬಳಿಯ ವಿವಿಧ ಕೆರೆಗಳಿಗೆ ಏತ ನೀರಾವರಿ ಮಾಡಿದ್ದು ಈ ಕೆರೆಗಳಿಗೆ ವಾಟರ್ ಅಲೋಕೇಶನ್ ಮಾಡಬೇಕು ಮತ್ತು ಇನ್ನೂ ಉಳಿದ ಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ಮಾಡಿ ನೀರು ತುಂಬಿಸಬೇಕು. ಮುಖ್ಯವಾಗಿ ವಾಣಿವಿಲಾಸ ಜಲಾಶಯದಿಂದ ಯಾವುದೇ ಭಾಗಕ್ಕೂ ವಾಟರ್ ಅಲೊಕೇಶನ್ ಮಾಡಬಾರದು. ನಗರದಲ್ಲಿರುವ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡಬೇಕು. ನಮ್ಮ ಎಲ್ಲಾ ಒತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಬರಲಿರುವ ಉಪ ಚುನಾವಣೆಯಲ್ಲಿ ನೋಟಾಕ್ಕೆ ಮತ ಹಾಕಲು ರೈತರು ತೀರ್ಮಾನಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.