ಕಬ್ಬು ಬೆಳೆಗಾರರು, ರೈತರಿಂದ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಕನ್ನಡಪ್ರಭ ವಾರ್ತೆ ಹಳಿಯಾಳ
ಮುಂಗಾರು ಮಳೆಯ ಕೊರತೆಯಿಂದ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿನ ಮೂರು ತಾಲೂಕಿನ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಜೂನ್ ತಿಂಗಳಿನಿಂದ ಈವರೆಗೆ ಹಳಿಯಾಳ ತಾಲೂಕಿನಲ್ಲಿ ಶೇ.52ರಷ್ಟು ಮಾತ್ರ ಮಳೆಯಾಗಿದ್ದರೇ, ದಾಂಡೇಲಿ ತಾಲೂಕಿನಲ್ಲಿ ಕೇವಲ ಶೇ.42ರಷ್ಟು ಮಳೆಯಾಗಿದೆ. ಈ ಮಧ್ಯೆ ಕಳೆದ 20 ದಿನಗಳಿಂದ ಮಳೆಯ ಸಂಪೂರ್ಣವಾಗಿ ಕೈಕೊಟ್ಟಿರುವ ಪರಿಣಾಮ ಬಿಸಿಲಿನ ವಾತಾವರಣ ನಿರ್ಮಾಣವಾಗಿ ಭತ್ತ, ಗೋವಿನಜೋಳ ಮತ್ತು ಇತರ ವಿವಿಧ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಹಳಿಯಾಳ ತಾಲೂಕಿನಲ್ಲಿ ಬೆಳೆದಂತಹ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುವ ಪರಿಸ್ಥಿತಿಯು ಬಂದೊಂದಿಗಿದೆ.
ರಾಜ್ಯ ಸರ್ಕಾರ ಈ ಭಾಗದ ಬರದ ತೀವ್ರತೆ ಮನಗಂಡು ತಕ್ಷಣ ಹಳಿಯಾಳವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯಂತೆ ಪ್ರತಿ ಎಕರೆಗೆ ₹25 ಸಾವಿರ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಬೇಕು. ರೈತರ ಎಲ್ಲಾ ರೀತಿಯ ಕೃಷಿ ಸಾಲ ಮನ್ನಾ ಮಾಡಬೇಕು, ಜೊತೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಕಾಳಿನದಿ ನೀರಾವರಿ ಯೋಜನೆ ಪ್ರಾರಂಭಿಸಿ:
ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಂಕರ ಕಾಜಗಾರ, ಪ್ರಮುಖರಾದ ಎಂ.ವಿ. ಘಾಡಿ, ಸುರೇಶ ಶಿವಣ್ಣನವರ, ರಾಮದಾಸ ಬೆಳಗಾಂವಕರ, ಬಳಿರಾಮ ಮೋರಿ, ಮಂಜುಳಾ ಗೌಡ, ನಕುಲ್ ಕೆಂಚಣ್ಣನವರ, ಸಾತೋರಿ ಗೋಡೆಮನಿ, ನಾರಾಯಣ ಘಾಡೇಕರ, ಗುಂಡು ಲಕ್ಕನಗೌಡ್ರ, ವಿರೂಪಾಕ್ಷ ಪಾಟೀಲ, ಸುರೇಶ ಗಡಕರ, ಈಶ್ವರ ಜರೇಕರ ಹಾಗೂ ಇತರರು ಇದ್ದರು.