ಮಾಜಿ ಸಚಿವ ಬಿ.ಆರ್‌.ಯಾವಗಲ್ಲರನ್ನು ಪಕ್ಷದಿಂದ ಉಚ್ಚಾಟಿಸಲು ಆಗ್ರಹ

KannadaprabhaNewsNetwork |  
Published : Nov 04, 2025, 02:45 AM IST
ಸುದ್ದಿಗೋಷ್ಠಿಯಲ್ಲಿ ಡಾ. ಸಂಗಮೇಶ ಕೊಳ್ಳಿಯವರ ಮಾತನಾಡಿದರು. | Kannada Prabha

ಸಾರಾಂಶ

ಬಿ.ಆರ್. ಯಾವಗಲ್ಲ ಅವರು 80 ವಯಸ್ಸಿನ ಹಿರಿಯರು. ಮೊಮ್ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಗೌರವದಿಂದ ಇರಬೇಕು. ಇವರ ವರ್ತನೆಯಿಂದ ಪಕ್ಷದ ಹಿರಿಯ ಕಾರ್ಯಕರ್ತರು ಬೇಸತ್ತಿದ್ದಾರೆ ಎಂದು ಡಾ. ಸಂಗಮೇಶ ಕೊಳ್ಳಿಯವರ ತಿಳಿಸಿದರು.

ನರಗುಂದ: ನರಗುಂದ ಮತಕ್ಷೇತ್ರದಲ್ಲಿ ಬಹಳ ದಿನಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿರುವ ಹಿರಿಯರೇ ಅಪ್ಪ- ಮಕ್ಕಳಿಂದ (ಬಿ.ಆರ್. ಯಾವಗಲ್ಲ ಹಾಗೂ ಅವರ ಪುತ್ರರು) ಬೇಸತ್ತು ಪಕ್ಷವನ್ನು ಬಿಡುತ್ತಿದ್ದಾರೆ. ಈ ಮೂವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರನ್ನು ಶೀಘ್ರದಲ್ಲಿ ಭೇಟಿ ಮಾಡಿ ಆಗ್ರಹಿಸಲಾಗುವು ಎಂದು ಕಾಂಗ್ರೆಸ್ ಮಾಧ್ಯಮ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯರಾದ ಬಿ.ಆರ್. ಯಾವಗಲ್ಲ ಅವರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾದರೆ ಅವರ ಮಕ್ಕಳಲ್ಲಿ ಪ್ರವೀಣ ಯಾವಗಲ್ಲ ಬ್ಲಾಕ್ ಅಧ್ಯಕ್ಷರು, ಮತ್ತೊಬ್ಬ ವಿವೇಕ ಯಾವಗಲ್ಲ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಹೀಗೆ ಪಕ್ಷದ ಪ್ರಮುಖ ಹುದ್ದೆಗಳು ಅಪ್ಪ -ಮಕ್ಕಳ ಪಾಲಾಗಿವೆ ಎಂದು ಕಿಡಿಕಾರಿದರು.

ಬಿ.ಆರ್. ಯಾವಗಲ್ಲ ಅವರು 80 ವಯಸ್ಸಿನ ಹಿರಿಯರು. ಮೊಮ್ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಗೌರವದಿಂದ ಇರಬೇಕು. ಇವರ ವರ್ತನೆಯಿಂದ ಪಕ್ಷದ ಹಿರಿಯ ಕಾರ್ಯಕರ್ತರು ಬೇಸತ್ತಿದ್ದಾರೆ. ಮತ್ತು ಪಕ್ಷ ಬಿಡುತ್ತಿದ್ದಾರೆ ಎಂದು ವಿಷಾಧಿಸಿದರು.ಇತ್ತೀಚೆಗೆ ಪುರಸಭೆ ನೂತನ ಕಟ್ಟಡ ಮತ್ತು ಕಾಯಿಪಲ್ಲೆ ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಮಂತ್ರಿಗಳು ಶಿಷ್ಟಾಚಾರದ ಪ್ರಕಾರ ಕರೆಯಬೇಕಾದವರನ್ನು ಕರೆದು ಹಾಜರಾಗಿದ್ದಾರೆ. ಯಾವಗಲ್ಲ ಅವರು ಮೂಲ ಕಾಂಗ್ರೆಸ್ಸಿನವರೇ ಅಲ್ಲ. ಬೇರೆಯವರ ಬಗ್ಗೆ ಮಾತನಾಡುವ ಮೊದಲು ತಮ್ಮ ಇತಿಹಾಸವನ್ನು ನೋಡಿಕೊಳ್ಳಬೇಕು. ಪಕ್ಷಕ್ಕೆ ಅವರದೇನೂ ಕೊಡುಗೆ ಇಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ್ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದನ್ನು ಮುಂದುವರಿಸಿದರೆ ಕೂಡಲೇ ಪಕ್ಷದಿಂದ ಉಚ್ಚಾಟಿಸಬೇಕೆಂದು ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ದಶರಥ ಗಾಣಿಗೇರ ಹಾಗೂ ಪ್ರಕಾಶ ಕೇರಿ ಅವರ ನೇತೃತ್ವದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಠ್ಠಲ ಶಿಂಧೆ, ಶಿವಾನಂದ ಬನಹಟ್ಟಿ, ಬಸವರಡ್ಡಿ ರಾಯರಡ್ಡಿ, ತಿಪ್ಪನಗೌಡ ಕಲ್ಲನಗೌಡ್ರ, ವಿಠ್ಠಲ ಶಿಂಧೆ, ಜಗದೀಶ ತೋಟರೆಡ್ಡಿ, ಶಿವಾನಂದ ಬನಹಟ್ಟಿ, ಬಸನಗೌಡ ಕರಿಗೌಡ್ರ, ಬಸನಗೌಡ ಪಾಟೀಲ, ಶ್ರೀಶೈಲ ಸವದಿ, ಫಾರೂಕ್ ಮಜೀದಮನಿ, ಹನುಮರಡ್ಡಿ ಹಳಕಟ್ಟಿ, ಶಿವಾನಂದ ಮಾದರ, ಮಂಜುನಾಥಗೌಡ ಚಿನ್ನಪ್ಪಗೌಡ್ರ, ಈಶ್ವರಗೌಡ ಕೆಂಚನಗೌಡ್ರ, ಮಾಲತೇಶಗೌಡ ಪಾಟೀಲ, ಮೋದಿನಸಾಬ ಮುಳಗುಂದ ಇತರರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ