ಶಿಕ್ಷಕರನ್ನು ಬಿಎಲ್ ಓ ಕಾರ್ಯದಿಂದ ಮುಕ್ತಗೊಳಿಸಲು ಆಗ್ರಹ

KannadaprabhaNewsNetwork |  
Published : Jun 28, 2025, 12:18 AM IST
ಪೊಟೋ-ಲಕ್ಷ್ಮೇಶ್ವರ ತಾಲೂಕಿನ ಶಿಕ್ಷಕರು ಬಿಎಲ್‌ಓ ಕಾರ್ಯದಿಂದ ಮುಕ್ತಿಗೊಳಿಸುವಂತೆ ಸರ್ಕಾರಕ್ಕೆ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಬಿಎಲ್ಓಿ ಕಾರ್ಯದಿಂದ ಶಿಕ್ಷಕರನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಗ್ರೇಡ್ 2 ತಹಸೀಲ್ದಾರ್‌ ಮಂಜುನಾಥ ಅಮಾಸಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಲಕ್ಷ್ಮೇಶ್ವರ: ಬಿಎಲ್‍ಓ ಕಾರ್ಯದಿಂದ ಶಿಕ್ಷಕರನ್ನು ಕೈಬಿಡಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಗ್ರೇಡ್ 2 ತಹಸೀಲ್ದಾರ್‌ ಮಂಜುನಾಥ ಅಮಾಸಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ಲಕ್ಷ್ಮೇಶ್ವರ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ ಮತ್ತು ಕಾರ್ಯದರ್ಶಿ ಚಂದ್ರಕಾಂತ ನೇಕಾರ ಮಾತನಾಡಿ, ಕಂದಾಯ ಇಲಾಖೆ ನೀಡುವ ಚುನಾವಣೆ ಮತ್ತು ಇತರೆ ಕಾರ್ಯಗಳನ್ನು ಶಿಕ್ಷಕರು ಚಾಚು ತಪ್ಪದೇ ಮಾಡುತ್ತಿದ್ದಾರೆ. ಆದರೆ ಈಗ ಶಿಕ್ಷಕರಿಗೆ ಶಿಕ್ಷಣ ಇಲಾಖೆಯ ಕೆಲಸದ ಒತ್ತಡ ಹೆಚ್ಚಾಗಿದೆ. ಶಾಲೆಗಳು ಆರಂಭಗೊಂಡಿದ್ದು ಶಿಕ್ಷಕರು ಇದರಲ್ಲಿ ಪರಿಣಾಮಕಾರಿಯಾಗಿ ತೊಡಗಿಕೊಳ್ಳಬೇಕಿದೆ. ಲಕ್ಷ್ಮೇಶ್ವರ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದು. ಇತರೆ ಇಲಾಖೆಯ ಕೆಲಸಗಳಿಂದ ಬೋಧನೆಗೆ ಸಮಯವೇ ಸಿಗುತ್ತಿಲ್ಲ. ಇದು ಮಕ್ಕಳ ಪಾಠದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಸಭೆಗಳಿಗೆ ಹಾಜರಾಗುವುದು, ಮತದಾರರ ಚೀಟಿಗೆ ಆಧಾರ ಲಿಂಕ್ ಮಾಡುವುದು, ಮತದಾರರ ಸೇರ್ಪಡೆ, ತೆಗೆದು ಹಾಕುವಿಕೆ, ತಿದ್ದುಪಡಿ ಇತರ ಬಹಳಷ್ಟು ಕೆಲಸಗಳಿರುವುದರಿಂದ ಒತ್ತಡಕ್ಕೆ ಸಿಲುಕುವಂತಾಗಿದೆ. ಬೋಧನೆ ಮತ್ತು ಬಿಎಲ್‍ಓ ಎರಡು ಕೆಲಸ ಸಮರ್ಪಕವಾಗಿ ಮಾಡಲಾಗುತ್ತಿಲ್ಲ. ಕಾರಣ ಶಿಕ್ಷಕರನ್ನು ಈ ಕೆಲಸದಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಿದರು.ಈ ವೇಳೆ ತಾಲೂಕಿನ ಸರ್ವ ಸಂಘಗಳ ಗೌರವಾಧ್ಯಕ್ಷ ಬಸವರಾಜ ಕುಂಬಾರ, ಸಂಘದ ಖಜಾಂಚಿ ಬಿ.ಬಿ.ಯತ್ತಿನಹಳ್ಳಿ, ಎನ್ ಪಿ ಎಸ್ ಸಂಘದ ಉಪಾಧ್ಯಕ್ಷ ಶ್ರೀಕಾಂತ ನಂದೆಣ್ಣವರ, ಕ ರಾ ಸ ನೌಕರರ ಸಂಘದ ಲಕ್ಷ್ಮೇಶ್ವರ ತಾಲೂಕು ಪ್ರಧಾನ ಕಾರ್ಯದರ್ಶಿ ಎಮ್.ಎ. ನದಾಫ, ಸಂಘದ ಸಂಘಟನಾ ಕಾರ್ಯದರ್ಶಿ ಗೀತಾ ಹಳ್ಯಾಳ, ಕ ರಾ ಸ ನೌ ಸಂಘದ ನಿರ್ದೇಶಕ ಬಿ.ಎಮ್.ಯರಗುಪ್ಪಿ, ಸತೀಶ್ ಬೊಮಲೆ, ಉಮೇಶ ನೇಕಾರ, ಪಿ ಸಿ ಕಾಳಶೆಟ್ಟಿ, ಡಿ.ಎಲ್.ಪಾಟೀಲ, ಎಸ್.ಎನ್. ಕ್ಷತ್ರಿಯ, ಎಸ್.ಎಮ್. ತಾಯಮ್ಮನವರ, ಪಿ.ಪಿ. ಹಿರೇಮಠ, ಎಸ್.ವಿ. ಸೋಗಿ, ಎಲ್.ಆರ್. ಮಲಸಮುದ್ರ, ಎನ್.ಎಸ್. ಬಂಕಾಪೂರ, ಜೆ.ವಿ. ಪಾಟೀಲ, ಎಮ್.ಪಿ. ಹರ್ಲಾಪೂರ,.ಎಸ್.ಎಸ್. ಪಾಟೀಲ, ವಿ.ಎಸ್. ಹಿರೇಮಠ, ಪಿ.ಎಮ್. ಆಡ್ನೂರ, ರಾಜೇಶ್ವರಿ ಅಡರಕಟ್ಟಿ, ಸಿ.ಎಫ್.ಪಾಟೀಲ, ಶ್ರೀನಿವಾಸ ಮತ್ತೂರ ಹಾಗೂ ತಾಲೂಕಿನ ಶಿಕ್ಷಕರು ಹಾಜರಿದ್ದು ಮನವಿ ಸಲ್ಲಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌