ಡಂಬಳದಲ್ಲಿ ಕರ್ಚಿಕಾಯಿಗೆ ಬಲು ಬೇಡಿಕೆ

KannadaprabhaNewsNetwork |  
Published : Jun 28, 2025, 12:18 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಗುರುವಾರದ ಸಂತೆಯಲ್ಲಿ ಕರ್ಚಿಕಾಯಿ ಮಾರಾಟ ಮಾಡುತ್ತಿರುವುದು. | Kannada Prabha

ಸಾರಾಂಶ

ಮನುಷ್ಯನ ದೇಹಕ್ಕೆ ಹಲವು ಪೋಷಕಾಂಶಗಳ ಮತ್ತು ಔಷಧೀಯ ಗುಣ ಹೊಂದಿರುವ, ಕಪ್ಪುಮಣ್ಣಿನಲ್ಲಿ ‌ ಬೆಳೆಯುವ ಕರ್ಚಿಕಾಯಿಗೆ ಪಟ್ಟಣದ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಬಂದಿದ್ದು, ಒಂದು ಕೆಜಿಗೆ ₹150-200ರ ವರೆಗೆ ಮಾರಾಟವಾಗುತ್ತಿದೆ.

ಡಂಬಳ: ಮನುಷ್ಯನ ದೇಹಕ್ಕೆ ಹಲವು ಪೋಷಕಾಂಶಗಳ ಮತ್ತು ಔಷಧೀಯ ಗುಣ ಹೊಂದಿರುವ, ಕಪ್ಪುಮಣ್ಣಿನಲ್ಲಿ ‌ ಬೆಳೆಯುವ ಕರ್ಚಿಕಾಯಿಗೆ ಪಟ್ಟಣದ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಬಂದಿದ್ದು, ಒಂದು ಕೆಜಿಗೆ ₹150-200ರ ವರೆಗೆ ಮಾರಾಟವಾಗುತ್ತಿದೆ.

ಈ ಕರ್ಚಿಕಾಯಿ ಬೆಳೆಯಲು ಬೀಜಗಳ ಬಿತ್ತನೆ ಮಾಡಬೇಕಾಗಿಲ್ಲ, ಜತೆಗೆ ಆರೈಕೆ ಮಾಡಬೇಕಾಗಿಲ್ಲ.

ಇದು ಮಳೆಯಾದಾಗ ನೈಸರ್ಗಿಕವಾಗಿ ಹಬ್ಬುವ ಬಳ್ಳಿಯಲ್ಲಿ ಬಿಡುವ ಹಸಿರುಬಣ್ಣದ ಸಣ್ಣ ಗಾತ್ರವನ್ನು ಹೊಂದಿರುವ ಕಾಯಿಯಾಗಿದ್ದು, ಇದರಲ್ಲಿ ಅನೇಕ ಔಷಧೀಯ ಹಾಗೂ ಪೋಷಕಾಂಶ ಗುಣಗಳು ಇವೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ.ಸಾಮಾನ್ಯವಾಗಿ ಗ್ರಾಮೀಣ ಭಾಗದ ಮಹಿಳೆಯರು ಕೃಷಿ ಚಟುವಟಿಕೆಗೆ ಹೋದಾಗ ಸಿಗುವ ಈ ಕರ್ಚಿಕಾಯಿಯನ್ನು ಮನೆಬಳಕೆಗೆ ತರುತ್ತಾರೆ. ಇನ್ನು ಕೆಲವು ಮಹಿಳೆಯರು ತಂದು ಮಾರಾಟ ಮಾಡಿ ಸಣ್ಣಪ್ರಮಾಣದ ಆದಾಯ ಗಳಿಸುತ್ತಾರೆ. ಕೆಲವು ಮಹಿಳೆಯರು ಪೇಟೆಗೆ ತಂದು ಅವರೇ ಮಾರಾಟ ಮಾಡಿ ಹೋದರೆ, ಇನ್ನೂ ಕೆಲವರು ಪಟ್ಟಣದ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ. ಕರ್ಚಿಕಾಯಿ ವ್ಯಾಪಾರದಿಂದ ಉತ್ತಮ ಆದಾಯ ಗಳಿಸಿದ ಮಹಿಳೆಯರೂ ಇದ್ದಾರೆ. ಬೇಡಿಕೆ ಹೆಚ್ಚಿರುವುದರಿಂದ ವ್ಯಾಪಾರಸ್ಥರು ಈ ಮಹಿಳೆಯರಿಂದ ಖರೀದಿಸಲು ಆಸಕ್ತಿ ತೋರುತ್ತಾರೆ.

ಕರ್ಚಿಕಾಯಿಯಲ್ಲಿ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ, ಕಬ್ಬಿಣಾಂಶ, ಪೊಟ್ಯಾಸಿಯಮ್, ವಿಟಮಿನ್ ಸಿ, ಫೈಬರ್‌ ಮತ್ತು ಸತು ಮುಂತಾದ ಪೋಷಕಾಂಶಗಳಿವೆ. ರೋಗ ನಿರೋಧಕ ಶಕ್ತಿಯನ್ನು ಕರ್ಚಿಕಾಯಿ ಹೆಚ್ಚಿಸುತ್ತದೆ. ಸಕ್ಕರೆ ಕಾಯಿಲೆ ಇರುವವರು, ರಕ್ತದೊತ್ತಡ ಇರುವವರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಸೇವಿಸುತ್ತಾರೆ.

ಮುಂಡರಗಿ ತಾಲೂಕಿನ ಸಂತೆ ಮಾರುಕಟ್ಟೆಯಲ್ಲಿ, ಡಂಬಳ ಗ್ರಾಮದ ಮುಖ್ಯ ಬಜಾರಿನಲ್ಲಿ, ಗ್ರಾಮೀಣ ಭಾಗದ ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ತಳ್ಳುಗಾಡಿಗಳಲ್ಲಿ ಈಗ ಕರ್ಚಿಕಾಯಿ ಮಾರಾಟ ಮಾಡಲಾಗುತ್ತಿದೆ.

ಕರ್ಚಿಕಾಯಿಯೂ ಅನೇಕ ಔಷಧೀಯ ಗುಣ ಹೊಂದಿದ್ದು, ಹೆಚ್ಚಾಗಿ ಯರಿ ಭೂಮಿಯಲ್ಲಿ ಬೆಳೆಯುವಂಥದ್ದಾಗಿದೆ. ಇದನ್ನು ಗ್ರಾಮೀಣ ಭಾಗದ ಮಹಿಳೆಯರು ಕಿತ್ತುತಂದು ಮಾರಾಟ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉಪಯೋಗಕಾರಿ ಎಂದು ಗ್ರಾಮಸ್ಥರಾದ ಕಳಸಪ್ಪ ಗೊರವರ, ಮಂಜುನಾಥ ಬಿಸನಹಳ್ಳಿ ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌