ಹೊಸಪೇಟೆ: ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಮಾಜ ಒತ್ತಾಯಿಸಿದೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಟಿ ಮೀಸಲಾತಿ ಜಾರಿ ಕುರಿತು ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಸಮುದಾಯದ ಎಲ್ಲ ಶಾಸಕರನ್ನು ಒಳಗೊಂಡ ಹೋರಾಟವನ್ನು ಹೊಸಪೇಟೆಯಿಂದಲೇ ಆರಂಭಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಜಂಬಾನಳ್ಳಿ ರಾಮಣ್ಣ, ಕಿಚಿಡಿ ವಸಂತ, ನಗರಸಭೆ ಮಾಜಿ ಸದಸ್ಯ ದುರುಗಪ್ಪ ಪೂಜಾರಿ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ, ಉಪಾಧ್ಯಕ್ಷ ಕಿನ್ನಾಳ ಹನುಮಂತ, ತಾರಿಹಳ್ಳಿ ವೆಂಕಟೇಶ್, ಬಂಡೆ ರಂಗಪ್ಪ, ಬ್ಯಾಂಕ್ ಚಂದ್ರಪ್ಪ, ಜಂಬಾನಳ್ಳಿ ವಸಂತ, ಜಂಬಾನಳ್ಳಿ ಸತ್ಯನಾರಾಯಣ, ವೆಂಕಟೇಶ್, ದುಶ್ಯಂತ, ಗುಜ್ಜಲ್ ನಿಂಗಪ್ಪ, ಸಿಂದಿಗೇರಿ ದೇವೇಂದ್ರಪ್ಪ, ಎಸ್.ಎಸ್. ಚಂದ್ರಶೇಖರ್, ನಾಗರಾಜ, ಸೋಮನಾಥ, ವಸಂತಕುಮಾರ್, ಕಣ್ಣಿ ಶ್ರೀಕಂಠ, ನಗರಸಭೆ ಸದಸ್ಯ ತಾರಿಹಳ್ಳಿ ಜಂಬುನಾಥ ಉಪಸ್ಥಿತರಿದ್ದರು.ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಹೊಸಪೇಟೆ ತಾಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಸರ್ಕಾರಕ್ಕೆ ಆಗ್ರಹಿಸಲಾಯಿತು.