ಗ್ರಾಮೀಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಆಗ್ರಹ

KannadaprabhaNewsNetwork |  
Published : Oct 27, 2026, 02:45 AM IST
ಪೋಟೊ26ಕೆಎಸಟಿ7ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಬಿಜೆಪಿ ಗ್ರಾಮೀಣ ಭಾಗದ ಮುಖಂಡರ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಪಂ ಹಾಗೂ ತಾಪಂ ಚುನಾವಣೆ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಕುಷ್ಟಗಿ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆ ಚುರುಕಾಗಿದೆ. ಚಳಗೇರಿ ಜಿಪಂ ಹಾಗೂ ಸಂಬಂಧಿಸಿದ ತಾಪಂ ಕ್ಷೇತ್ರಗಳಲ್ಲಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಸಭೆ ನಡೆಸಿದರು.

ಕುಷ್ಟಗಿ: ಜಿಪಂ ಹಾಗೂ ತಾಪಂ ಚುನಾವಣೆ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಕುಷ್ಟಗಿ ತಾಲೂಕಿನಲ್ಲಿ ರಾಜಕೀಯ ಚಟುವಟಿಕೆ ಚುರುಕಾಗಿದೆ. ಚಳಗೇರಿ ಜಿಪಂ ಹಾಗೂ ಸಂಬಂಧಿಸಿದ ತಾಪಂ ಕ್ಷೇತ್ರಗಳಲ್ಲಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಮುಖಂಡರು ದೋಟಿಹಾಳ ಗ್ರಾಮದಲ್ಲಿ ಸಭೆ ನಡೆಸಿದರು.

ದೋಟಿಹಾಳದ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ನಡೆದ ಸಭೆಯಲ್ಲಿ ಮುಂಬರುವ ಚುನಾವಣೆಯ ಟಿಕೆಟ್ ಹಂಚಿಕೆ ಕುರಿತು ಚರ್ಚಿಸಲಾಯಿತು. ಚಳಗೇರಿ ಜಿಪಂ ಕ್ಷೇತ್ರಕ್ಕೆ ನಗರ ಪ್ರದೇಶದ ಅಭ್ಯರ್ಥಿಗಳಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಮುಖಂಡರು ಸಭೆ ನಡೆಸಿ, ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡುವಂತೆ ಪಕ್ಷದ ನಾಯಕರನ್ನು ಒತ್ತಾಯಿಸಲು ನಿರ್ಧರಿಸಿದರು.

ನಗರವಾಸಿಗಳಿಗೆ ಪುರಸಭೆ ಹಾಗೂ ಪಪಂ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶಗಳಿವೆ. ಆದರೆ ಗ್ರಾಮೀಣ ಭಾಗದವರಿಗೆ ಗ್ರಾಪಂ ಚುನಾವಣೆ ಹೊರತುಪಡಿಸಿ ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ಸ್ಪರ್ಧಿಸಲು ಮಾತ್ರ ಅವಕಾಶಗಳಿವೆ. ಹೀಗಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಗ್ರಾಮೀಣ ಭಾಗದ ಅಭ್ಯರ್ಥಿಗಳು ಸ್ಥಳೀಯ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಗ್ರಾಮಗಳ ಸಮಸ್ಯೆಗಳನ್ನು ಅರಿತಿರುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲು ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ಮುಂಬರುವ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸ್ಥಳೀಯ ಅಭ್ಯರ್ಥಿಗಳ ಆಯ್ಕೆಗೆ ಆದ್ಯತೆ ನೀಡಬೇಕು. ಅಭ್ಯರ್ಥಿ ಆಯ್ಕೆಯ ಸಂದರ್ಭದಲ್ಲಿ ಒಮ್ಮತ ಕಾಯ್ದುಕೊಂಡು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂಬ ಚರ್ಚೆ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆದವು.‌

ಈ ಸಭೆಯಲ್ಲಿ ಹಿರಿಯ ವಕೀಲ, ಜಿಪಂ ಮಾಜಿ ಸದಸ್ಯ ಫಕೀರಪ್ಪ ಚಳಗೇರಿ, ಲಾಡಸಾಬ ಕೊಳ್ಳಿ, ಮಹಾಲಿಂಗಪ್ಪ ದೋಟಿಹಾಳ, ಸಂಗಪ್ಪ ಮಾಸ್ತರ ಚಳಗೇರಿ ಹಾಗೂ ದೋಟಿಹಾಳ ತಾಪಂ, ಕ್ಯಾದಿಗುಪ್ಪ ತಾಪಂ ವ್ಯಾಪ್ತಿಯ ಮುಖಂಡರು ಇದ್ದರು.

ಬೇಡಿಕೆ: ಕುಷ್ಟಗಿ ತಾಲೂಕಿನ ಚಳಗೇರಿ ಜಿಪಂ ಕ್ಷೇತ್ರ ಹಾಗೂ ತಾಪಂ ಕ್ಷೇತ್ರಗಳಿಗೆ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲು ಈ ಸಭೆ ನಡೆಸಲಾಗಿದ್ದು, ಬಿಜೆಪಿ ನಾಯಕರು ಗ್ರಾಮೀಣ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಬೇಕು ಎಂದು ಬಿಜೆಪಿ ಮುಖಂಡ ಲಾಡಸಾಬ ಕೊಳ್ಳಿ ದೋಟಿಹಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಿ ತೀರ ಕಲುಷಿತ ಆತಂಕಕಾರಿ: ಶಾಂತ ಮಲ್ಲಿಕಾರ್ಜುನ ಶ್ರೀ
ಕಡಲತಡಿಯಿಂದ ಕಾಶ್ಮೀರಕ್ಕೆ ಆಟೋ ಜೈತ್ರ ಯಾತ್ರೆ!