ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೊಗೊಳ್ಳಲಾಯಿತು. ಅಲ್ಲದೆ ಅಹಿಂದ ಸಮುದಾಯಗಳ ನಾಯಕತ್ವದ ದೃಷ್ಟಿಯಿಂದ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪ್ರಬಲ ಖಾತೆ ನೀಡಬೇಕು. ಇತ್ತೀಚೆಗೆ ಅಹಿಂದ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯ ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಹೋರಾಟ ಮುಂದುವರೆಯಬೇಕಾದರೆ ಯತೀಂದ್ರ ಸಿದ್ದರಾಮಯ್ಯ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದರು.
ಅಹಿಂದ ಮತಗಳನ್ನು ಕಡೆಗಣಿಸಿದ ಪಕ್ಷಗಳು ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಸ್ವಾತಂತ್ರ್ಯದ ನಂತರವೂ ಅಹಿಂದ ಸಮುದಾಯಕ್ಕೆ ಸಮಾನ ಅವಕಾಶ, ಸ್ಥಾನ ಸಿಕ್ಕಿಲ್ಲ. ಮುಂಬರುವ ಚುನಾವಣೆ?ಯಲ್ಲಿ ಕಾಂಗ್ರೆಸ್ ಅಹಿಂದ ಮತಗಳು ಬೇಕು ಎಂದರೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದರು.ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಶೋಷಿತ ಸಮುದಾಯಗಳಿಗೆ ಅಘಾತ ತಂದೊಡ್ಡಿದೆ. ಸ್ವಜನ ಪಕ್ಷಪಾರ, ಸ್ವಜಾತಿಯ ವ್ಯಾಮೋಹದಲ್ಲಿ ಸಿದ್ದರಾಮಯ್ಯ ಅವರು ಎಂದಿಗೂ ಆಡಳಿತ ನಡೆಸಿಲ್ಲ ಎಂದರು.
ವಿಶ್ವಕರ್ಮ ಸಮುದಾಯದ ಮೊಗಣ್ಣಾಚಾರ್ ಮಾತನಾಡಿ, ರಾಜ್ಯದಲ್ಲಿ ನಾಲ್ಕು ಕೋಟಿ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ನಂಬಿದ್ದಾರೆ. ಸೂಕ್ಷ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಎಂಬ ನಿರೀಕ್ಷೆಯಿಂದ ಅವರ ಮೇಲಿನ ವಿಶ್ವಾಸ ಕಾರಣ ಎಂದರು.