ಜೆಎಂಎಫ್‌ಸಿ ನ್ಯಾಯಾಲಯ ಕಾಯಂಗೊಳಿಸಲು ಆಗ್ರಹ

KannadaprabhaNewsNetwork |  
Published : Oct 13, 2025, 02:02 AM IST
ಸಂಚಾರಿ ದಿವಾಣಿ ಮತ್ತು ಜೆ.ಎಂ.ಎಫ.ಸಿ ನ್ಯಾಯಾಲಯವನ್ನು ಖಾಯಂ ಗೋಳಿಸುವಂತೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ  ಹೆಚ್.ಕೆ ಪಾಟೀಲ್‌ಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಟ್ಟೀಹಳ್ಳಿ ಪಟ್ಟಣದ ಸಂಚಾರಿ ದಿವಾಣಿ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಲಯವನ್ನು ಕಾಯಂಗೊಳಿಸುವಂತೆ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಅವರಿಗೆ ರಟ್ಟೀಹಳ್ಳಿ ನ್ಯಾಯವಾದಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು.

ರಟ್ಟೀಹಳ್ಳಿ: ಪಟ್ಟಣದ ಸಂಚಾರಿ ದಿವಾಣಿ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಲಯವನ್ನು ಕಾಯಂಗೊಳಿಸುವಂತೆ ಮತ್ತು ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಅವರಿಗೆ ರಟ್ಟೀಹಳ್ಳಿ ನ್ಯಾಯವಾದಿಗಳ ಸಂಘದಿಂದ ಮನವಿ ಸಲ್ಲಿಸಲಾಯಿತು.

ಪ್ರಸ್ತುತ ನ್ಯಾಯಾಲಯದಲ್ಲಿ 2024ರ ಡಿ.15ರಿಂದ ಉಚ್ಚ ನ್ಯಾಯಾಲಯ ಹಾಗೂ ಸರಕಾರದ ಆದೇಶದ ಮೇರೆಗೆ ವಾರದಲ್ಲಿ ಸೋಮವಾರ, ಮಂಗಳವಾರ ಹಾಗೂ ಬುಧವಾರಗಳಂದು ಹಿರೇಕೆರೂರಿನ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ರಟ್ಟೀಹಳ್ಳಿಯಲ್ಲಿ ಕೋರ್ಟ್‌ ಕಲಾಪಗಳನ್ನು ನಡೆಸುತ್ತಿದ್ದು, ಕಾರಣ ತಾಲೂಕಿನ ಪಕ್ಷಗಾರರಿಗೆ, ವಕೀಲರುಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಆದಷ್ಟು ಬೇಗ ಕಾಯಂ ಕೋರ್ಟ್‌ ಮಾಡಬೇಕು ಎಂದು ವಕೀಲರ ಸಂಘದ ಅಧ್ಯಕ್ಷರು ಸದಸ್ಯರು ಸಚಿವರಿಗೆ ಮನವಿ ಮಾಡಿದರು.ಅಲ್ಲದೆ ಕಂದಾಯ ಇಲಾಖೆಯಿಂದ ನೂತನ ಕೋರ್ಟ್‌ ಹಾಗೂ ನ್ಯಾಯಾಧೀಶರ ವಸತಿಗಳನ್ನು ನಿರ್ಮಾಣ ಮಾಡಲು 3.30 ಎಕರೆ ಜಾಗೆ ಮಂಜೂರಾಗಿದ್ದು, ಅಲ್ಲಿ ನೂತನ ಕೋರ್ಟ್‌ ಕಟ್ಟಡಕ್ಕೆ ಹಾಗೂ ನ್ಯಾಯಾಧೀಶರ ವಸತಿ ಕಟ್ಟಡಕ್ಕೆ ಆದಷ್ಟು ಬೇಗ ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಸಲ್ಲಿಸಿದರು. ನಂತರ ಸಚಿವರು ಮನವಿ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದಲ್ಲಿನ ಕೋರ್ಟ್‌ ಕಲಾಪಗಳು ವಾರದಲ್ಲಿ 3 ದಿನ ನಡೆಯುತ್ತಿದ್ದು, ಇದನ್ನು ಕಾಯಂ ಕೋರ್ಟ್‌ ಮಾಡುವ ನಿಟ್ಟಿನಲ್ಲಿ 2-3 ದಿನದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಮತ್ತು ನೂತನ ಕೋರ್ಟ್‌ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿಗಾಗಿ ಅನುದಾನದ ಬೇಡಿಕೆಯನ್ನಿಟ್ಟಿದ್ದು ಅದಕ್ಕೆ ದೊಡ್ಡ ಮಟ್ಟದ ಅನುದಾನದ ಅವಶ್ಯಕತೆ ಇದ್ದು ಮುಂಬರುವ ಬಜೇಟ್‍ನಲ್ಲಿ ಬೇಡಿಕೆಯನ್ನಿಟ್ಟು ಅನುದಾನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನೀಸುತ್ತೇನೆ ಎಂದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಎಚ್. ಬನ್ನಿಕೋಡ, ಉಪಾಧ್ಯಕ್ಷ ಎಸ್.ವಿ. ತೊಗರ್ಸಿ, ಪ್ರಧಾನ ಕಾರ್ಯದರ್ಶಿ ಮಾರುತಿ ಜೋಕನಾಳ, ಸಹಕಾರ್ಯದರ್ಶಿ ಎಸ್.ಎಸ್. ಪಾಟೀಲ್, ಪಿಡಿ ಬಸನಗೌಡ್ರ, ಪಿ.ಬಿ. ಗುಬ್ಬಿ, ವ್ಹಿ.ಆರ್. ದ್ರೌಪಕ್ಕಳವರ, ಫಕೀರೇಶ ತುಮ್ಮಿನಕಟ್ಟಿ, ಬಿ.ಸಿ. ಪಾಟೀಲ್, ಎಲ್.ಆರ್. ಪಾಟೀಲ್, ಪ್ರಕಾಶ, ಮುಲ್ಲಾ ವಕೀಲ, ಆನಂದಸ್ವಾಮಿ ಗಡ್ಡದೇವರಮಠ ಮುಂತಾದವರು ಇದ್ದರು.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ