ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹ

KannadaprabhaNewsNetwork |  
Published : Dec 07, 2025, 02:15 AM IST
ಬಿಜೆಪಿ  | Kannada Prabha

ಸಾರಾಂಶ

ಸರ್ಕಾರವು ನಿಷ್ಕ್ರಿಯಗೊಂಡಿದ್ದು, ಗ್ಯಾರಂಟಿಗಳ ನೆಪದ ಮೂಲಕ ರೈತರನ್ನು, ಸಾರ್ವಜನಿಕರನ್ನು ವಂಚನೆ ಮಾಡಿರುವುದಲ್ಲದೆ ಮೆಕ್ಕೆಜೋಳ, ಮಾವು, ರಾಗಿ ಹಾಗೂ ಕಬ್ಬು ಬೆಳೆಗಾರರಿಗೆ ಯಾವುದೇ ಸೂಕ್ತ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡುವಲ್ಲಿ ವಿಫಲವಾಗಿದ್ದು, ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಧಿಕಾರಿದ ಹಂಚಿಕೆ ವಿಚಾರದಲ್ಲೆ ಮುಳುಗಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಭತ್ತ ಮತ್ತು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕು, ಖರೀದಿ ಕೇಂದ್ರ ಸ್ಥಾಪನೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಶನಿವಾರ ನಗರದಲ್ಲಿ ಬಿಜೆಪಿ ಪ್ರತಿಭಟನಾ ರ‍್ಯಾಲಿ ನಡೆಸಿತು.

ನಗರದ ಆಜಾದ್ ಚೌಕದಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿ ಪಿಸಿಆರ್ ಕಾಂಪ್ಲೆಕ್ಸ್, ಬೆಂಗಳೂರು ವೃತ್ತ ಹಾಗೂ ತಾಲ್ಲೂಕು ಕಚೇರಿ ವೃತ್ತಗಳ ಮೂಲಕ ಸಾಗಿಬಂದಿತು. ಪ್ರತಿಭಟನೆಯುದ್ದಕ್ಕೂ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರಗಳನ್ನು ಕೂಗಿದರಲ್ಲದೆ, ಸರ್ಕಾರದ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿದರು.

ಸರ್ಕಾರದ ಆಡಳಿತ ನಿಷ್ಕ್ರಿಯ

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಸರ್ಕಾರವು ನಿಷ್ಕ್ರಿಯಗೊಂಡಿದ್ದು, ಗ್ಯಾರಂಟಿಗಳ ನೆಪದ ಮೂಲಕ ರೈತರನ್ನು, ಸಾರ್ವಜನಿಕರನ್ನು ವಂಚನೆ ಮಾಡಿರುವುದಲ್ಲದೆ ಮೆಕ್ಕೆಜೋಳ, ಮಾವು, ರಾಗಿ ಹಾಗೂ ಕಬ್ಬು ಬೆಳೆಗಾರರಿಗೆ ಯಾವುದೇ ಸೂಕ್ತ ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರಗಳನ್ನು ಸ್ಥಾಪನೆ ಮಾಡುವಲ್ಲಿ ವಿಫಲವಾಗಿದ್ದು, ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಧಿಕಾರಿದ ಹಂಚಿಕೆ ವಿಚಾರದಲ್ಲೆ ಮುಳುಗಿ ಹೋಗಿದ್ದು ರೈತರ ಕಷ್ಟಸುಖಗಳಲ್ಲಿ ಸ್ಪಂದಿಸುವ ಗುಣವಿಲ್ಲದಂತಹ ಸರ್ಕಾರವಾಗಿದೆ. ಈ ಸರ್ಕಾರ ತೊಲಗಬೇಕು ಎಂದರು.

ಸಿಎಂ ಕುರ್ಚಿಗಾಗಿ ಕಿತ್ತಾಟ

ಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್ ಮಾತನಾಡಿ ಕೇವಲ ಅಧಿಕಾರದ ಉದ್ದೇಶದಿಂದ ರಚನೆಯಾದ ಕಾಂಗ್ರೆಸ್ ಸರ್ಕಾರವಾಗಿದ್ದು ಸಾರ್ವಜನಿಕರು, ರೈತರು, ಬಡಬಗ್ಗರು ಸೇರಿದಂತೆ ಎಲ್ಲಾ ವರ್ಗದ ಜನತೆಯ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಕುರ್ಚಿಗಾಗಿ ಕಿತ್ತಾಡುತ್ತಿದ್ದು, ಅತ್ಯಧಿಕ ಪ್ರಮಾಣದ ಭ್ರಷ್ಟಚಾರ ಮತ್ತು ಲಂಚಗುಳಿತನ ತುಂಬಿದ ಸರ್ಕಾರ ಕರ್ನಾಟಕ ರಾಜ್ಯದಲ್ಲಿದ್ದು ಮುಂದಿನ ಚುನಾವಣೆಯಲ್ಲಿ ಇಂತಹ ಭ್ರಷ್ಟರಿಗೆ ತಕ್ಕಶಾಸ್ತಿ ಮಾಡಬೇಕು ಎಂದರು.

ರೈತರು ತಾವು ಬೆಳೆದ ಬೆಳೆ ಕೈಗೆಟುಕುವ ಸಮಯಕ್ಕೆ ಸರಿಯಾಗಿ ಬೆಲೆ ಕುಸಿತವಾಗುತ್ತಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ೨ ಸಾವಿರ ರೂ ನಂತೆ ವಾರ್ಷಿಕ ೪ ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡುತ್ತಿತ್ತು, ಆದರೆ ಕಾಂಗ್ರೇಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಮೇಲೆ ರೈತರ ಖಾತೆಗೆ ಹಣ ಜಮೆ ಮಾಡುವುದನ್ನು ನಿಲ್ಲಿಸಿದೆ. ರೈತರ ಜಮೀನಿಗೆ ಅಳವಡಿಸಲಾಗುತ್ತಿದ್ದ ಟ್ರಾನ್ಸ್ಫಾರ್‌ಗೆ ೩.೫ಲಕ್ಷ ವಿಧಿಸುತ್ತಿದ್ದು ಈ ಹಿಂದೆ ಕೇವಲ ೨೫ಸಾವಿರ ರೂಗಳಿಗೆ ಲಭ್ಯವಾಗುತ್ತಿದ್ದು ಈ ಒಂದು ವಿಚಾರವೇ ಸರ್ಕಾರ ರೈತರ ಸುಲಿಗೆ ಮಾಡುತ್ತಿದೆಯೆಂದು ತಿಳಿಯುತ್ತದೆಂದರು.

ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪಿಸಿ

ರೈತರ ಸಂಕಷ್ಟಗಳನ್ನು ದೂರಾಗಿಸಲು ಮತ್ತು ರೈತರು ಬೆಳೆದ ಬೆಳೆಗೆ ಬೆಂಬಲಬೆಲೆ ಘೋಷಣೆ ಮಾಡುವಂತೆ ಹಾಗೂ ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ಸ್ಥಾಪನೆ ಮಾಡುವಂತೆ ಪ್ರತಿಭಟನಾ ನಿರತರು ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮತ್ತು ಬಿಜೆಪಿ ಮುಖಂಡ ದೇವನಹಳ್ಳಿ ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಪತ್ರವನ್ನು ತಹಸೀಲ್ದಾರ್ ಸುದರ್ಶನ್ ಯಾದವ್‌ರಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾಡಿಕೆರೆ ಅರುಣ್‌ಬಾಬು, ಕೆ.ಎಂ.ಕೆ ಪುತ್ರ ರಾಜಶೇಖರರೆಡ್ಡಿ, ರಾಜಶೇಖರ್ ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಬನಹಳ್ಳಿ ಬಿ.ಜಿ. ಮಂಜುನಾಥ್, ನಿಕಟಪೂರ್ವ ನಗರ ಘಟಕ ಅಧ್ಯಕ್ಷ ಮಹೇಶ್ ಬೈ, ಗ್ರಾಮಾಂತರ ಅಧ್ಯಕ್ಷ ರಾಜಣ್ಣ, ಬಿಜೆಪಿ ನಗರ ಘಟಕ ಅಧ್ಯಕ್ಷ ಗೋವಿಂದರಾಜ್, ಪ್ರ.ಕಾರ್ಯದರ್ಶಿ ಗೋಕುಲ್ ಶ್ರೀನಿವಾಸ್, ಗಾಜಲು ಶಿವ, ಜಿಲ್ಲಾ ಎಸ್ಸಿ ಘಟಕದ ಅದ್ಯಕ್ಷ ದೇವರಾಜ್, ಗ್ರಾಮಾಂತರ ಪ್ರ.ಕಾರ್ಯದರ್ಶಿ ಸುರೇಶ್, ಮಣಿಕಂಠ, ಡಾಬಾ ಮಂಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಶೃತಿ, ಹೊಸೂರು ಹೆಚ್.ಸಿ ಆಂಜಪ್ಪ, ಪ್ರಕಾಶ್ ಶ್ವೇತಾ, ಪಂಕಜಾ, ದಿವ್ಯಾ, ಮಮತ, ನಂದಕುಮಾರಿ, ಸೌಭಾಗ್ಯ, ಸೀಕಲ್ ನಾಗರಾಜ್, ಶಿವಕುಮಾರ್, ವೇದಾವತಿ, ಕಛೇರಿ ಆನಂದ್ ವಿವಿಧ ರೈತ ಸಂಘದ ಮುಖಂಡರುಗಳು, ರೈತರು, ಕಾರ್ಯಕರ್ತರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ