ಬ್ಯಾಡಗಿ: ತಾಲೂಕಿನ ತಿಮ್ಮಾಪುರ ಗ್ರಾಮಕ್ಕೆ ಸಾರಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸಾರಿಗೆ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ ಸಲ್ಲಿಸಿದರು.ಕರವೇ ಸ್ವಾಭಿಮಾನಿ ಸೇನೆ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ದಾನಪ್ಪನವರ ಮಾತನಾಡಿ, ತಾಲೂಕು ಕೇಂದ್ರದಿಂದ 30 ಕಿಮೀ ವ್ಯಾಪ್ತಿಯ ತಿಮ್ಮಾಪುರ ಗ್ರಾಮ ಹರಿಹರ- ಸಮ್ಮಸಗಿ ರಸ್ತೆಯಿಂದ 2 ಕಿಮೀ ದೂರವಿದೆ. ಹಾವೇರಿ- ಚಿಕ್ಕಬಾಸೂರು ಚಿಕ್ಕೆರೂರು ಮಾರ್ಗದ ರಸ್ತೆಯಿಂದ 3 ಕಿಮೀ ದೂರವಿದ್ದು, 2 ಸಾವಿರ ಜನಸಂಖ್ಯೆಯ ಗ್ರಾಮಕ್ಕೆ ಬಂದು ಹೋಗಲು ಒಂದು ಸಾರಿಗೆ ಬಸ್ಸಗಳಿಲ್ಲ. ಪಕ್ಕದ ಸೂಡಂಬಿ, ಗುಡ್ಡದಮಲ್ಲಾಪುರ, ಹಂಸಭಾವಿ ಕಡೆಗೆ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪ್ರತಿನಿತ್ಯ ಗೋಳಾಡುವಂತಾಗಿದೆ.
ಹಾವೇರಿ: ಅಪರಿಚಿತ ವ್ಯಕ್ತಿಗಳು ಲಿಂಕ್‌ವೊಂದನ್ನು ಮೊಬೈಲ್‌ಗೆ ಕಳಿಸಿ ಕ್ಲಿಕ್ ಮಾಡಿದರೆ ಲಾಭಾಂಶ ಕೊಡುವುದಾಗಿ ನಂಬಿಸಿ ನಕಲಿ ಟ್ರೇಡಿಂಗ್ ಆ್ಯಪ್‌ಗೆ ಸುಮಾರು ₹75 ಲಕ್ಷ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡಲಾಗಿದೆ.
ರಾಣಿಬೆನ್ನೂರಿನ ಗೌರಿಶಂಕರ ನಗರದ ನಿವಾಸಿ ಅಕೌಂಟೆಂಟ್ ರಾಕೇಶ ವಿಶ್ವನಾಥಸಾ ಇರಕಲ್ ಎಂಬವರೇ ಮೋಸ ಹೋಗಿರುವ ವ್ಯಕ್ತಿ. ಅಪರಿಚಿತ ವ್ಯಕ್ತಿಗಳಾದ ನೇಮ್‌ಕುಮಾರ ಹಾಗೂ ಸ್ನೇಹಾ ಶಾರದಾ ಎಂಬವರ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿತರು ದೂರುದಾರನಿಗೆ ಕರೆ ಮಾಡಿ ಪರಿಚಯ ಮಾಡಿಕೊಂಡು ಹಣವನ್ನು ಇನ್ವೆಸ್ಟ್ ಮಾಡಿದರೆ ಹೆಚ್ಚಿನ ಲಾಭ ಕೊಡುವುದಾಗಿ ಹೇಳಿ ನಂಬಿಸಿ ₹75,42,000 ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.