ಫಲಾನುಭವಿಗಳಿಗೆ ಆಶ್ರಯ ಮನೆ, ನಿವೇಶನ ನೀಡಲು ಆಗ್ರಹ

KannadaprabhaNewsNetwork | Published : May 29, 2024 1:01 AM

ಸಾರಾಂಶ

ಶಾಸಕರು ಈ ಜಿ ೨ ಯೋಜನೆಯನ್ನು ತಂದಿದ್ದು, ತಮ್ಮ ಅವಧಿಯಲ್ಲಿಯೇ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ದಾಂಡೇಲಿ: ನಗರದ ಆಶ್ರಯ ಮನೆಗಳು ಹಾಗೂ ಗೃಹ ಮಂಡಳಿ ನಿವೇಶನಗಳನ್ನು ಫಲಾನುಭವಿಗಳಿಗೆ ನೀಡಬೇಕೆಂದು ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯವರು ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಿದರು.ಮನವಿಯಲ್ಲಿ ಜಿ+೨ ೧೧೦೦ ಮನೆಗಳಿಗಾಗಿ ಮತ್ತು ಗೃಹ ಮಂಡಳಿಯವರು ೩೪೦೦ ಫಲಾನುಭವಿಗಳಿಂದ ೨೦೧೩ರಲ್ಲಿ ಅರ್ಜಿ ಪಡೆದುಕೊಂಡಿದ್ದು, ಇಲ್ಲಿಯವರೆಗೆ ಈ ಎರಡು ಪ್ರಕರಣಗಳು ಯಾವುದೇ ರೀತಿಯ ಕ್ರಮವನ್ನು ಜರುಗಿಸದೆ ಫಲಾನುಭವಿಗಳಿಗೆ ಅನ್ಯಾಯವಾಗಿರುವುದನ್ನು ಖಂಡಿಸಿ ಕಳೆದ ಹಲವಾರು ವರ್ಷಗಳಿಂದ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಈ ಕುರಿತು ಸತತ ಮನವಿಗಳನ್ನು ನೀಡುತ್ತ, ಹೋರಾಟ, ಪ್ರತಿಭಟನೆ ನಡೆಸುತ್ತಾ ಬಂದಿದೆ. ಈಗ ಜಿ+೨ ೧೧೦೦ ಮನೆಗಳಲ್ಲಿ ೧೪೪ ಮನೆಗಳನ್ನು ಬರುವ ಜೂ. ೮ರಂದು ಫಲಾನುಭವಿಗಳಿಗೆ ವಿತರಿಸುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಗೃಹ ಮಂಡಳಿಗಾಗಿ ನಗರಸಭೆಯಿಂದ ಕಾದಿಟ್ಟ ೧೦ ಎಕರೆ ಭೂಮಿಯನ್ನು ಈಗಾಗಲೇ ಭೂಮಿ ಹಸ್ತಾಂತರಿಸುವ ಕುರಿತು ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ.

ಶಾಸಕರು ಈ ಜಿ+೨ ಯೋಜನೆಯನ್ನು ತಂದಿದ್ದು, ತಮ್ಮ ಅವಧಿಯಲ್ಲಿಯೇ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಅದರ ಮಧ್ಯ ಸಹ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಫಲಾನುಭವಿಗಳನ್ನು ಬೇರೆ ಕಡೆ ಸೆಳೆಯಲು ಕುತಂತ್ರ ನಡೆಸುತ್ತಿದ್ದಾರೆ. ಹೋರಾಟದ ಯಶಸ್ಸು ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರ ಮತ್ತು ಅಧಿಕಾರಿಗಳ ಮಧ್ಯ ಗೊಂದಲ ಸೃಷ್ಟಿಸುವ ಕುತಂತ್ರ ನಡೆಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಂಖಾನ, ಕಾರ್ಯದರ್ಶಿ ಆರ್.ವಿ. ಗಡೆಪ್ಪನವರ, ಉಪಾಧ್ಯಕ್ಷ ಅಶೋಕ ಪಾಟೀಲ, ಮಹಮ್ಮದ ಗೌಸ ಬೆಟಿಗೇರಿ, ಮುಜೀಬಾ ಜಬ್ಬಿ, ಶಹಜಾದಿ ಕುಲಶಾಪುರ, ಶಿವಾನಂದ್ ಮುರುಗೋಡ, ಫೈರೋಜ ಶೇಖ, ಪ್ರೇಮಲತಾ ಜೋಕಡಾ, ಜಯಲಕ್ಷ್ಮಿ ಜಿಂಗಾಡೆ, ಮಲ್ಲಪ್ಪ ಮಾಗಡಿ, ಸಿವಿಯರ್ರೊಡರಿಕ್ಸ ರಿಚರ್ಡ್‌ ಮತ್ತು ಸಮಿತಿಯ ಅನೇಕ ಸದಸ್ಯರು ಉಪಸ್ಥಿತರಿದ್ದರು.

Share this article