ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸರ್ಕಾರ ಈ ಹಿಂದೆ ಸದಸ್ಯರಿಗೆ 2008 ರಿಂದ 5000 ರು. ಸಹಾಯ ಧನ ನೀಡುವ ಅಂತ್ಯ ಸಂಸ್ಕಾರ ಯೋಜನೆಯನ್ನು ಹೊಂದಿತ್ತು. ಆದರೆ ರಾಜ್ಯ ಸರ್ಕಾರ 2021ರ ಸೆಪ್ಟೆಂಬರ್‌ನಿಂದ ರದ್ದುಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡಲೇ ಇದನ್ನು ಮರು ಜಾರಿಗೊಳಿಸಿ, ಈ ಹಿಂದೆ ನೀಡುತ್ತಿದ್ದ 5000 ರು. ಸಹಾಯಧನದ ಬದಲು 10 ಸಾವಿರ ರು. ಸಹಾಯ ಧನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಅಂತ್ಯ ಸಂಸ್ಕಾರ ಯೋಜನೆ ಕೇವಲ ಕರ್ನಾಟಕ ಸರ್ಕಾರದಿಂದಲೇ 2006ರಿಂದ ಜಾರಿಗೊಳಿಸಲಾಗಿತ್ತು. ಈ ಜೀವಪರ ಹಾಗೂ ಜನಪರ ಅಂತ್ಯ ಸಂಸ್ಕಾರ ಯೋಜನೆಯನ್ನು ಅವೈಜ್ಞಾನಿಕವಾಗಿ ಹಾಗೂ ಮನುಷ್ಯ ವಿರೋಧಿಯಾಗಿ ರದ್ದುಗೊಳಿಸಿ ಬಡವರ ಸಾವಿನ ಜೊತೆ ಸರ್ಕಾರ ಹಾಗೂ ಅಧಿಕಾರಿಗಳು ದೌರ್ಜನ್ಯವೆಸಗಿದರು. ಬಿಪಿಎಲ್ ಕಾರ್ಡ್ ಹೊಂದಿರತಕ್ಕ ಬಡ ಕುಟುಂಬದ ಯಾವುದೇ ಧರ್ಮ ಅಥವಾ ಜಾತಿಗೆ ಸಂಬಂಧಪಟ್ಟ ವ್ಯಕ್ತಿ ಯಾವುದೇ ಕಾರಣದಿಂದ ಮೃತರಾದರೂ ರಾಜ್ಯ ಸರ್ಕಾರ ಅಂತ್ಯ ಸಂಸ್ಕಾರ ಯೋಜನೆಯಲ್ಲಿ 2006 ರಿಂದ 2021ರವರೆಗೆ 5 ಸಾವಿರ ರು. ಸಹಾಯ ಧನವನ್ನು ಮೃತರ ಅಂತ್ಯ ಕ್ರಿಯೆ ನಡೆಸುವ ವಾರಸುದಾರರಿಗೆ ನೀಡಿ ಹೃದಯವಂತಿಕೆಯನ್ನು ಮೆರೆಯಲಾಗುತ್ತಿತ್ತು.ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ರದ್ದುಗೊಳಿಸಿರುವ ಈ ಅಂತ್ಯ ಸಂಸ್ಕಾರ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಈ ಹಿಂದೆ ನೀಡುತ್ತಿದ್ದ 5 ಸಾವಿರ ರು. ಸಹಾಯ ಧನವನ್ನು 10 ಸಾವಿರ ರು.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.