ಕನ್ನಡಪ್ರಭ ವಾರ್ತೆ ರಾಮನಗರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಕನಹಳ್ಳಿಯ 215ರ ಸಂಖ್ಯೆ ಮತಗಟ್ಟೆಯನ್ನು 217 ಮತ್ತು 218ರ ಸಂಖ್ಯೆಯ ಮತಗಟ್ಟೆಗಳೆಂದು ವಿಭಜನೆ ಮಾಡಲಾಗಿದೆ. ಇದರಲ್ಲಿ ಒಂದೇ ಕುಟುಂಬದ ಮತಗಳು ಬೇರೆ ಬೇರೆ ಮತಗಟ್ಟೆಗಳಿಗೆ ವರ್ಗಾವಣೆಯಾಗಿ ಮತದಾರರಿಗೆ ತೊಂದರೆಯಾಗಿದೆ ಎಂದರು.
ಈ ಎರಡು ಮತಗಟ್ಟೆಗಳಲ್ಲಿ ತಂದೆ ತಾಯಿಯ ಹೆಸರು ಒಂದು ಮತಗಟ್ಟೆಯಲ್ಲಿದ್ದರೆ, ಅವರ ಮಕ್ಕಳ ಹೆಸರು ಮತ್ತೊಂದು ಮತಗಟ್ಟೆಯ ಮತದಾರರ ಪಟ್ಟಿಯಲ್ಲಿದೆ. 217ರ ಮತಗಟ್ಟೆಯಲ್ಲಿರುವ ಸುಮಾರು 184ಮತದಾರರು 218ರ ಸಂಖ್ಯೆಯ ಮತಗಟ್ಟೆಗೆ ವರ್ಗಾವಣೆ ಆಗಬೇಕಾಗಿದ್ದು, 218ರ ಸಂಖ್ಯೆಯ ಮತಗಟ್ಟೆಯಲ್ಲಿರುವ 220 ಮತದಾರರನ್ನು 217ರ ಸಂಖ್ಯೆಯ ಮತಗಟ್ಟೆಗೆ ವರ್ಗಾಯಿಸಬೇಕಿದೆ ಎಂದರು.ಚುನಾವಣಾ ಆಯೋಗದ ನಿಯಮಾವಳಿಗಳ ಪ್ರಕಾರ ಅಂಕನಹಳ್ಳಿ ಗ್ರಾಮದ 215ರ ಸಂಖ್ಯೆಯ ಮತಗಟ್ಟೆಯನ್ನು 217 ಮತ್ತು 218ರ ಸಂಖ್ಯೆಯ ಮತಗಟ್ಟೆಗಳೆಂದು ವಿಭಜಿಸಲಾಗಿದ್ದು, ಇದಕ್ಕೆ ತಮ್ಮದೇನು ಅಭ್ಯಂತರವಿಲ್ಲ. ಆದರೆ, ಒಂದು ಕುಟುಂಬದ ಸದಸ್ಯರ ಮತದಾರರ ಹೆಸರು ಎರಡೂ ಮತಗಟ್ಟೆಗಳ ಮತದಾರರ ಪಟ್ಟಿಯಲ್ಲಿ ಅದಲು ಬದಲಾಗಿರುವುದನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮೊದಲು ಅಂಕನಹಳ್ಳಿ 215ರ ಸಂಖ್ಯೆಯ ಮತಗಟ್ಟೆಯಲ್ಲಿ 1385 ಇದ್ದ ಮತದಾರರ ಸಂಖ್ಯೆ, ಎಸ್ ಐಆರ್ ಪ್ರಕ್ರಿಯೆ ನಂತರ 1250 ಮತದಾರರಾಗಿದ್ದಾರೆ. ಇದರಲ್ಲಿ 217ರ ಸಂಖ್ಯೆಯ ಮತಗಟ್ಟೆಗೆ 620 ಮತದಾರರು ಹಾಗೂ 218ರ ಸಂಖ್ಯೆಯ ಮತಗಟ್ಟೆಗೆ 612 ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಅನೇಕ ಕುಟುಂಬದ ಮತಗಳು ಬೇರೆ ಬೇರೆ ಮತಗಟ್ಟೆಗಳಿಗೆ ವರ್ಗಾವಣೆಯಾಗಿದ್ದು, ಆ ಮತಗಳನ್ನು ಒಂದೇ ಮತಗಟ್ಟೆಯ ಮತದಾರರ ಪಟ್ಟಿಗೆ ತಂದು ಲೋಪದೋಷ ಸರಿಪಡಿಸುವಂತೆ ಗ್ರಾಮಸಭೆಯಲ್ಲಿಯೂ ಚರ್ಚೆ ಮಾಡಿದ್ದೇವೆ.
ಈಗ ರಚನೆಯಾಗಿರುವ 217ರ ಸಂಖ್ಯೆಯ ಮತಗಟ್ಟೆಗೆ ಶಾರದಾ ಹಾಗೂ 218ರ ಸಂಖ್ಯೆಯ ಮತಗಟ್ಟೆಗೆ ಸಂಜೀವಯ್ಯ ಅವರನ್ನು ಮತಗಟ್ಟೆ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. 217 ಸಂಖ್ಯೆ ಮತಗಟ್ಟೆಯಲ್ಲಿ 184ರ ಪೈಕಿ 120 ಮತದಾರರಿಂದ ಫಾರಂ 8 ಅನ್ನು ಬಿಎಲ್ ಒ ಸ್ವೀಕರಿಸಿದ್ದಾರೆ. ಆದರೆ, 218ರ ಸಂಖ್ಯೆಯ ಮತಗಟ್ಟೆ ಬಿಎಲ್ ಒ ಸಂಜೀವಯ್ಯ ಇಲ್ಲಿವರೆಗೂ ಗ್ರಾಮಕ್ಕೆ ಬಂದೇ ಇಲ್ಲ. ಸುಮಾರು 80ಕ್ಕೂ ಹೆಚ್ಚು ನಮೂನೆ 8ರ ಅರ್ಜಿಗಳು ಬಾಕಿ ಉಳಿದಿವೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮದ ಮುಖಂಡರಾದ ಗೋಪಿ, ಕರಿಯಪ್ಪ, ಶಿವರಾಜು, ನಾರಾಯಣಶೆಟ್ಟಿ, ರಾಜಣ್ಣ ಇದ್ದರು.-------------
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಅಶ್ವತ್ಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.