ಕನ್ನಡಪ್ರಭ ವಾರ್ತೆ, ಹನೂರು
ತಾಲೂಕಿನ ರಾಮನಗುಡ್ಡ ಕೆರೆಗೆ ಜನವರಿ 16ರಂದು ಶಾಸಕ ಎಂ.ಆರ್. ಮಂಜುನಾಥ್ ಕಾವೇರಿ ನದಿಯಿಂದ ಪೈಪ್ ಲೈನ್ ಮೂಲಕ ಬೂದು ಬಾಳು ಗ್ರಾಮದ ಬಳಿ ಚಾಲನೆ ನೀಡಿ ಗ್ರಾಮದಿಂದ ಎರಡೂವರೆ ಕಿಲೋಮೀಟರ್ 24 ಚೆಕ್ ಡ್ಯಾಮ್ ಗಳು ತುಂಬಿ ರಾಮನಗುಡ್ಡ ಕೆರೆಗೆ ನೀರು ಹರಿದು ಬಂದು ಶೇಕಡ 40ರಷ್ಟು ಕೆರೆಯಲ್ಲಿ ನೀರು ಸಂಗ್ರಹವಾಗಿದೆ.
ಮಹಾಶಿವರಾತ್ರಿ ಹಬ್ಬಕ್ಕೆ ಕೆರೆಯ ನೀರನ್ನು ನಾಲೆಯ ಮೂಲಕ ನೀರು ಬಿಟ್ಟು ರೈತರ, ಜನ ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ರೈತರು ಶಾಸಕ ಎಂಆರ್ ಮಂಜುನಾಥ್ ಅವರನ್ನು ನೀರು ಬಿಡಲು ಮನವಿ ಮಾಡಿದ್ದಾರೆ.ಈ ಹಿನ್ನೆಲೆ ನಾಲಾ ಸ್ವಚ್ಛತೆಗೆ ರೈತರೇ ಸ್ವತಹ ಸ್ವಯಂ ಪ್ರೇರಣೆಯಿಂದ ರಾಮನಗುಡ್ಡ ಕೆರೆ ತಳಭಾಗದಲ್ಲಿ ಬರುವ 40 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿರುವ ನಾಲೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದು ಈ ಭಾಗದ ಯಡರಹಳ್ಳಿ ದೊಡ್ಡಿ, ಚಿಂಚಳ್ಳಿ, ಮಣಗಳ್ಳಿ ಹಾಗೂ ತೋಮಿಯಾರ್ ಪಾಳ್ಯ, ಬೈರನತ್ತ, ಹಣಗಳ್ಳಿ ದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ನಾಲೆಯಲ್ಲಿ ನೀರು ಹರಿದರೆ ಅನುಕೂಲದಾಯಕವಾಗಲಿದೆ.