ಕನ್ನಡಪ್ರಭ ವಾರ್ತೆ ಸವದತ್ತಿ
ಲಿಂಗಾಯತ ಪಂಚಮಸಾಲಿ ಜಾಗೃತಿ ವೇದಿಕೆ ಅಧ್ಯಕ್ಷ ಅಲ್ಲಮಪ್ರಭು ಪ್ರಭುನವರ ಮಾತನಾಡಿ, ಪಟ್ಟಣದಲ್ಲಿರುವ ಅನೇಕ ಧಾರ್ಮಿಕ ಕಟ್ಟಡಗಳ ಸುತ್ತ ಮುತ್ತ ಸ್ವಚ್ಛತೆ ಇಲ್ಲದಾಗಿದ್ದು, ಅಲ್ಲಿ ಯಾವುದೇ ನಿರ್ಬಂಧವಿಲ್ಲದೆ ಮದ್ಯ ಮತ್ತು ಮಾಂಸಾಹಾರ ಮಾರಾಟವಾಗುತ್ತಿರುವುದರಿಂದ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಕುಂದು ಬರುತ್ತಿದೆ. ತಕ್ಷಣ ಈ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕೆಂದರು.
ಶರಣ ಸಂಗಮದ ಬಸವರಾಜ ಪುಟ್ಟಿ, ಮಲ್ಲಿಕಾರ್ಜುನ ಬೀಳಗಿ ಮಾತನಾಡಿ, ಜಗಜ್ಯೋತಿ ಬಸವೇಶ್ವರ ವೃತ್ತದ ಅಕ್ಕಪಕ್ಕದಲ್ಲಿ ನಿರಂತರವಾಗಿ ಮಾಂಸಾಹಾರ, ಧೂಮಪಾನ, ಗುಟ್ಕಾ ಮತ್ತು ಪ್ರಾಣಿಬಲಿಯಂತಹ ಚಟುವಟಿಕೆ ನಡೆಯುತ್ತಿದ್ದು, ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕೆಂದರು.ಕರಿಕಟ್ಟಿ ಕ್ರಾಸ್ ಹತ್ತಿರದ ಬಸವೇಶ್ವರ ವೃತ್ತದಿಂದ ಬೈಕ್ ರ‍್ಯಾಲಿಯ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ಗ್ರೇಡ್-೨ ತಹಸೀಲ್ದಾರ ಹಾಗೂ ಪುರಸಭೆ ಮುಖ್ಯಾಧಿಕಾರಿ ಮನವಿ ಸಲ್ಲಿಸಲಾಯಿತು.
ಬಸವರಾಜ ಕಪ್ಪಣ್ಣವರ, ರಾಜಶೇಖರ ನಿಡವಣಿ, ಅಶ್ವತ ವೈದ್ಯ, ಉಮೇಶ ಕೋರಿಕೊಪ್ಪ, ನಿಂಗಪ್ಪ ಮೀಶಿ, ನೀಲಪ್ಪ ಅಣ್ಣಿಗೇರಿ, ಶಿವಾನಂದ ಶಿಂತ್ರಿ, ಶ್ರೀಕಾಂತ ಹಟ್ಟಿಹೊಳಿ, ಈರಣ್ಣ ಪಟ್ಟಣಶೆಟ್ಟಿ, ನಾಗಪ್ಪ ಪ್ರಭುನವರ, ಯಲ್ಲಪ್ಪ ಮಡಿವಾಳರ ಇತರರು ಉಪಸ್ಥಿತರಿದ್ದರು.