ಸತ್ಯನಾರಾಯಣ ಕ್ಯಾಂಪಿಗೆ ಬಸ್ ಬಿಡಲು ಒತ್ತಾಯ

KannadaprabhaNewsNetwork |  
Published : Nov 30, 2026, 02:30 AM IST
29- ಕೆ ಪಿ ಎಸ್ ಎನ್ ಡಿ1 | Kannada Prabha

ಸಾರಾಂಶ

ತಾಲೂಕಿನ ಸತ್ಯನಾರಾಯಣ ಕ್ಯಾಂಪ್ಗೆ ಸರ್ಕಾರಿ ಬಸ್ ಸೇವೆ ಆರಂಭಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಬಸ್ ನಿಲ್ದಾಣದಲ್ಲಿ ಭಾನುವಾರ ಪಟ್ಟು ಹಿಡಿದು ಕುಳಿತ ಪ್ರಸಂಗ ಜರುಗಿತು.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕಿನ ಸತ್ಯನಾರಾಯಣ ಕ್ಯಾಂಪ್ಗೆ ಸರ್ಕಾರಿ ಬಸ್ ಸೇವೆ ಆರಂಭಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಬಸ್ ನಿಲ್ದಾಣದಲ್ಲಿ ಭಾನುವಾರ ಪಟ್ಟು ಹಿಡಿದು ಕುಳಿತ ಪ್ರಸಂಗ ಜರುಗಿತು.

ಸತ್ಯನಾರಾಯಣ ಕ್ಯಾಂಪ್ನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬಸ್ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಸ್ ಸೇವೆ ಆರಂಭಿ ಸುವಂತೆ ಸಾರಿಗೆ ಇಲಾಖೆಯ ಜಿಲ್ಲಾ ಅಧಿಕಾರಿ ಐ.ಎ. ಕಂದಗಲ್ ಅವರಿಗೆ ಸೂಚಿಸಿದ ಬಾದರ್ಲಿ, ಬಸ್ ಬಿಡುವವರೆಗೆ ನಾನು ಇಲ್ಲಿಂದ ಎದ್ದೇಳುವುದಿಲ್ಲ. ಜನರ ಸಮಸ್ಯೆ ಬಗೆಹರಿಯುವವರೆಗೆ ಹೋರಾಟ ಮುಂದುವರಿಸುತ್ತೇನೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಈ ಸಮಸ್ಯೆಯನ್ನು ತಂದಿದ್ದು, ಬಸ್ ಸೇವೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಆದರೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಜನರಿಗೆ ತೊಂದರೆ ನೀಡಬಾರದು ಎಂದು ಕಿವಿಮಾತು ಹೇಳಿದರು.

ಶಾಸಕ ಹಂಪನಗೌಡ ಬಾದರ್ಲಿ ವಿರುದ್ಧ ವಾಗ್ದಾಳಿ - ಸಿಂಧನೂರು ಕ್ಷೇತ್ರದಿಂದ ಐದು ಬಾರಿ ಶಾಸಕರಾದವರಿಗೆ ಜನರ ಬಸ್ ಸಮಸ್ಯೆ ಗೊತ್ತಿಲ್ಲವೇ? ಕೆಲವರ ವೈಯಕ್ತಿಕ ಹಿತಾಸಕ್ತಿಗಾಗಿ ನೂರಾರು ಗ್ರಾಮಸ್ಥರಿಗೆ ತೊಂದರೆ ನೀಡುವುದು ಎಷ್ಟು ಸರಿ? ಅಧಿಕಾರಿಗಳ ಮೇಲೆ ಭಯದ ವಾತಾವರಣ ನಿರ್ಮಿಸುವುದು ಸರಿಯಲ್ಲ ಎಂದರು.

ಸಿಂಧನೂರು ಅಭಿವೃದ್ಧಿ ವಿಚಾರದಲ್ಲಿ ತಾನು ರಾಜಕಾರಣ ಮಾಡುವುದಿಲ್ಲ. ಶಾಸಕ ಸ್ಥಾನ ಯಾರಿಗೂ ಶಾಶ್ವತವಲ್ಲ. ಯಾರನ್ನು ಶಾಸಕರನ್ನಾಗಿ ಆಯ್ಕೆ ಮಾಡ ಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಎಲ್ಲ ಜನಪ್ರತಿನಿಧಿಗಳ ಕರ್ತವ್ಯ ಎಂದು ಹೇಳಿದರು. ಬಸ್ ಆರಂಭ-ಬಸನಗೌಡ ಬಾದರ್ಲಿ ಅವರ ಒತ್ತಡ ಹಾಗೂ ಗ್ರಾಮಸ್ಥರ ಪಟ್ಟು ಮುಂದುವರಿದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಕೊನೆಗೂ ಮಧ್ಯಾಹ್ನ 4 ಗಂಟೆಗೆ ಸತ್ಯನಾರಾಯಣ ಕ್ಯಾಂಪ್ಗೆ ಸರ್ಕಾರಿ ಬಸ್ ಸಂಚಾರ ಆರಂಭಿಸಿದರು. ತಮ್ಮ ಗ್ರಾಮಕ್ಕೆ ಬಸ್ ಸೇವೆ ಆರಂಭವಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯ ಕಲ್ಲಿನ ರಥದ ಮೂಲ ಗೋಪುರ ಮರಸೃಷ್ಟಿ
ಆಂಧ್ರದ 4 ಟಿಎಂಸಿ ನೀರು ರಾಜ್ಯದ ಬೆಳೆಗಳಿಗೆ ಒದಗಿಸಲು ಎಚ್ಡಿಕೆಗೆ ಮನವಿ