ಗದಗ: ಜಿಲ್ಲೆಯ ರೈತರು ಬೆಳೆದ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ರೈತ ಹಿತಾಭಿವೃದ್ಧಿ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ವಿಪರೀತ ಮಳೆಯಾಗಿ ಮುಂಗಾರು ಬೆಳೆಗಳಾದ ಹೆಸರು ಹಾಗೂ ಉದ್ದು ಸಂಪೂರ್ಣ ಕೆಟ್ಟು ಹಾಳಾಗಿದ್ದು, ರೈತರ ಆದಾಯವೆ ಇಲ್ಲದಂತಾಗಿದೆ. ಕಾರಣ ಇನ್ನುಳಿದ ಬೆಳೆ ಗೋವಿನ ಜೋಳವು ಇನ್ನು ಕೆಲವೇ ದಿನಗಳಲ್ಲಿ ಕಟಾವಿಗೆ ಬರುತ್ತದೆ. ಹೀಗಾಗಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಗೋವಿನ ಜೋಳ(ಮೇಕ್ಕೆಜೋಳ) ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.ಈ ವೇಳೆ ಸಂಘದ ಅಧ್ಯಕ್ಷ ಕರಬಸಯ್ಯ ನಾಲ್ವತವಾಡಮಠ, ಪರಮೇಶ್ವರಪ್ಪ ಪ. ಜಂಗ್ಲಿ, ಬಸಪ್ಪ ಕಲಬಂಡಿ, ಬಸವರಾಜ ಕವಳಿಕಾಯಿ, ವಿರುಪಾಕ್ಷಪ್ಪ ಅಕ್ಕಿ, ಕಳಕಪ್ಪ ರೇವಡಿ, ಪರಪ್ಪ ಕಮತರ, ಈಶ್ವರಪ್ಪ ಗುಜಮಾಗಡಿ, ಮುತ್ತಪ್ಪ ಜಡಿ, ಮಂಜುನಾಥ ಕೋಳಿವಾಡ, ಶಿವಾನಂದ ಹೂಗಾರ, ರುದ್ರಯ್ಯ ಹಿರೇಮಠ ಸೇರಿದಂತೆ ರೈತರು ಇದ್ದರು.ಕೊಟ್ಪಾ ಕಾಯ್ದೆ ಉಲ್ಲಂಘನೆ: ಅಧಿಕಾರಿಗಳ ದಾಳಿಗದಗ: ಜಿಲ್ಲೆಯೆ ವಿವಿಧೆಡೆ ತಂಬಾಕು ತಂಬಾಕು ಉತ್ಪನ್ನಗಳ ನಿಯಂತ್ರಣಕ್ಕಾಗಿ ದಾಳಿ ನಡೆಸಿ ನಿಯಂತ್ರಣ ಕೊಟ್ಪಾ ಕಾಯ್ದೆ ಉಲ್ಲಂಘನೆ ಕುರಿತು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿ 8 ಪ್ರಕರಣ ದಾಖಲಿಸಿ ₹4500 ದಂಡ ವಿಧಿಸಲಾಯಿತು.ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಥೋಡ್ ಅವರ ಮಾರ್ಗದರ್ಶನದಲ್ಲಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ದಾಳಿ ಮಾಡಲಾಯಿತು.ಈ ವೇಳೆ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ, ವೈ.ಸಿ. ದೊಡ್ಡಮನಿ, ಎಎಸ್ಐ ಪ್ರಕಾಶ ಕರ್ಜಗಿ, ಎಫ್.ಬಿ. ಹೂಗಾರ, ಬಸಮ್ಮ ಚಿತ್ತರಗಿ, ಜಿ.ಬಿ. ಬಣಗಾರ, ಕೆ.ಎಂ. ಕುಲಕರ್ಣಿ ಸೇರಿದಂತೆ ಇತರರು ಇದ್ದರು.