ಕನ್ನಡಪ್ರಭ ವಾರ್ತೆ, ಗುಂಡ್ಲುಪೇಟೆ
ಗುಂಡ್ಲುಪೇಟೆ-ನಂಜನಗೂಡು ಮಾರ್ಗದ ಅರೇಪುರ ಗೇಟ್ ನಲ್ಲಿ ಬೆಳಗಿನ ಸಮಯದಲ್ಲಿ ಸಾರಿಗೆ ಬಸ್ ನಿಲ್ಲಿಸಿದರೆ ಶಾಲಾ, ಕಾಲೇಜಿಗೆ ಹೋಗುವ ಅರೇಪುರ, ರಂಗೂಪುರ, ಹೊರೆಯಾಲ, ಚನ್ನವಡೆಯನಪುರ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಘಟಕ ವ್ಯವಸ್ಥಾಪಕ ತ್ಯಾಗರಾಜ್ ಎಲ್ಲಾ ಸಾರಿಗೆ ಬಸ್ ಗಳನ್ನು ನಿಲ್ಲಿಸಲು ಆಗುವುದಿಲ್ಲ. ಪರ್ಯಾಯವಾಗಿ ಷಟಲ್ ಬಸ್ ಗಳನ್ನು ಹೆಚ್ಚುವರಿಯಾಗಿ ಬಿಡಲು ಆಗುವುದಿಲ್ಲ ಎಂದು ಹೇಳಿದ್ದಾರೆ.ಗುಂಡ್ಲುಪೇಟೆಯಿಂದ ನಂಜನಗೂಡು ತನಕ ಎಲ್ಲಾ ಗ್ರಾಮಗಳ ಗೇಟ್ ಗಳಲ್ಲಿ (ಬೆಂಡಗಳ್ಳಿ,ಮಳವಳ್ಳಿ, ಅರೇಪುರ ಹೊರತು ಪಡಿಸಿ) ಸಾರಿಗೆ ಬಸ್ ನಿಲ್ಲುತ್ತಿವೆ ಹಾಗಾಗಿ ಅರೇಪುರ ಗೇಟ್ ನಲ್ಲಿ ಸಾರಿಗೆ ಬಸ್ ಸ್ಟಾಪ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಘಟಕ ವ್ಯವಸ್ಥಾಪಕರು ಬೆಳಗಿನ ಸಮಯದಲ್ಲಾದರೂ ಎಲ್ಲಾ ಬಸ್ ಗಳನ್ನು ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.