ಜೂಜಾಟ ದಂಧಗೆ ಕಡಿವಾಣ ಹಾಕದಿದ್ದರೆ ಹೋರಾಟ

KannadaprabhaNewsNetwork |  
Published : Sep 03, 2025, 01:00 AM IST
ಮಾಜಿ  | Kannada Prabha

ಸಾರಾಂಶ

ಲ್ಲೆಯಲ್ಲಿ ಅನಧಿಕೃತವಾಗಿ ಜೂಜಾಟದ ಕ್ಲಬ್‌ಗಳು ನಡೆಯುತ್ತಿದ್ದು, ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಡಾ ಮಾಜಿ ಅಧ್ಯಕ್ಷ ಜಿ.ನಿಜಗುಣ ರಾಜು ಆರೋಪಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜಿಲ್ಲೆಯಲ್ಲಿ ಅನಧಿಕೃತವಾಗಿ ಜೂಜಾಟದ ಕ್ಲಬ್‌ಗಳು ನಡೆಯುತ್ತಿದ್ದು, ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಡಾ ಮಾಜಿ ಅಧ್ಯಕ್ಷ ಜಿ.ನಿಜಗುಣ ರಾಜು ಆರೋಪಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಸ್ಪೀಟ್ ಕ್ಲಬ್‌ಗಳು ಹೆಚ್ಚಾಗಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸಹಕಾರವಿದೆ. ಇಸ್ಪೀಟ್ ಕ್ಲಬ್‌ಗಳ ಕಡಿವಾಣಕ್ಕೆ ಮುಂದಾಗದೇ ಶಾಮೀಲ್ ಆಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿ ೩ ಇದ್ದ ಕ್ಲಬ್‌ಗಳು ೧೧ ಆಗಿವೆ, ಪಕ್ಕದ ಜಿಲ್ಲೆ ಮೈಸೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಲಬ್‌ಗಳಿಗೆ ನಿಷೇಧ ಹೇರಿದ್ದಾರೆ. ಆದರೆ ಈ ಜಿಲ್ಲೆಯಲ್ಲಿ ಇದಕ್ಕೆ ಕಡಿವಾಣ ಹಾಕುವ ಬದಲು ಪೊಲೀಸ್ ಇಲಾಖೆಯೇ ಅನುಮತಿ ನೀಡಿ ಸಹಕರಿಸುತ್ತಿರುವುದು ಇಲ್ಲಿನ ಕಾನೂನು ಸುವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಕುಟುಂಬಗಳು ಬೀದಿಗೆ ಬರುವಂತಹ ಸನ್ನಿವೇಶ ಸೃಷ್ಠಿಯಾಗಿದೆ. ಇಸ್ಪಿಟ್ ಚಟಕ್ಕೆ ಬಲಿಯಾಗಿ ಹಣವನ್ನು ಕಳೆದು ಕೊಳ್ಳುತ್ತಿದ್ದಾರೆ ಇದರಿಂದ ಕಳ್ಳತನ, ದರೋಡೆ, ಕೊಲೆಯಂತಹ ಕೃತ್ಯಗಳು ಹೆಚ್ಚಾಗುತ್ತಿದ್ದು, ಪೊಲೀಸರೇ ದರೋಡೆ ಮಾಡುತ್ತಿದ್ದು, ಕಳ್ಳರು ಇರಲಿ ದರೋಡೆ ಮಾಡಿ ಸಿಕ್ಕಿಹಾಕಿಕೊಂಡು ಪರಾರಿಯಾಗಿರುವ ಪೊಲೀಸರನ್ನೇ ಹಿಡಿಯಲು ಸಾಧ್ಯವಾಗಿಲ್ಲ. ಗುಪ್ತಚಾರ ಇಲಾಖೆ ಇದೆಯೋ ಇಲ್ಲವೋ, ಇದಕ್ಕೆಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಶಾಸಕರು, ಸಂಸದರು, ಜನಪ್ರತಿನಿಧಿಳು ವಿಶೇಷ ಗಮಹರಿಸಿ, ಕ್ಲಬ್‌ಗಳು, ಜೂಜಾಟಕ್ಕೆ ಕಡಿವಾಣ ಹಾಕಲು ಸೂಚನೆ ನೀಡದಿದ್ದರೆ. ಮುಂದಿನ ಪರಿಸ್ಥಿತಿ ಕಷ್ಟವಾಗುತ್ತದೆ, ಗಡಿ ಭಾಗದಲ್ಲಿ ಗೊಬ್ಬರ ಕಳ್ಳಸಾಗಣೆಯಾಗುತ್ತದೆ, ಪಡಿತರ ಅಕ್ಕಿ. ಅಕ್ರಮವಾಗಿ ಸಾಗಣೆಯಾಗುತ್ತದೆ ಎಂದರು.

ಧಾರ್ಮಿಕ ಭಾವನೆಗೆ ಧಕ್ಕೆ:

ಜಿಲ್ಲಾ ಕೇಂದ್ರದಲ್ಲಿ ಹನುವ ಜಯಂತಿ ನಡೆದು ೯ ತಿಂಗಳಾಗಿದೆ, ಮಸೀದಿ ಮುಂದೆ ಪಟಾಕಿ ಹೊಡೆದು ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಈಗ ೧೦ ಜನರ ಮೇಲೆ ದೂರು ದಾಖಲಾಗಿದೆ. ದೂರನ್ನು ಯಾವ ಮುಸ್ಲಿಂ ಮುಖಂಡರು ನೀಡಿಲ್ಲ, ಪೊಲೀಸರೇ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿದ್ದಾರೆ. ಇದು ಧಾರ್ಮಿಕ ಭಾವನೆಗೆ ಹಾಗೂ ಭಾವೈಕ್ಯತೆಗೆ ಧಕ್ಕೆ ತರುವಂತಹ ಕೆಲಸವಾಗಿದೆ. ಈಗ ಅಣ್ಣ ತಮ್ಮಂದಿದರಂತೆ ಬಾಳುತ್ತಿದ್ದು, ಯಾವುದೇ ಪ್ರಚೋದನೆ ಕೆಲಸ ಮಾಡುತ್ತಿಲ್ಲ, ಪೊಲೀಸರೆ ಈ ಕೆಲಸ ಮಾಡುತ್ತಿದ್ದಾರೆ ಎಂದರು.

ಪೊಲೀಸ್ ಇಲಾಖೆ ತಮ್ಮ ಕೆಲಸದ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ, ದೊಡ್ಡ ಮಟ್ಡದ ಉಗ್ರ ಹೋರಾಟ ಮಾಡಬೇಕಾಗುತ್ತದ ಎಂದು ಎಚ್ಚರಿಸಿದರು.

ಪತ್ರಿಕಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವೃಷಬೇಂದ್ರಪ್ಪ, ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್, ಕಾರ್ಯದರ್ಶಿ ನಟರಾಜು, ಪರಶಿವಯ್ಯ, ಮಹೇಶ್, ಪೃಥ್ವಿರಾಜ್, ಮಧುಸೂದನ್ ಇದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ