ಕಾಡುಪ್ರಾಣಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ಆಗ್ರಹ

KannadaprabhaNewsNetwork |  
Published : Dec 13, 2024, 12:46 AM IST
ಸಾರ್ವಜನಿಕರು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿ.ಕೆ. ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕಾಡುಪ್ರಾಣಿಯ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳೆಹಾನಿಯಿಂದ ಕಂಗೆಟ್ಟಿದ್ದು, ರೈತರಿಗೆ ಇತ್ತೀಚಿನ ವರ್ಷದಲ್ಲಿ ಸಾಕುಪ್ರಾಣಿಯಾದ ನಾಯಿ, ಆಕಳುಗಳು ಪ್ರಾಣ ಕಳೆದುಕೊಳ್ಳುತ್ತಿದೆ.

ಹೊನ್ನಾವರ: ತಾಲೂಕಿನ ಹೊಸಾಕುಳಿ ಸುತ್ತಮುತ್ತಲಿನ ಭಾಗದಲ್ಲಿ ಚಿರತೆ ಮನುಷ್ಯರ ಮೇಲೆ ದಾಳಿ ಮಾಡುತ್ತಿದ್ದು, ಅಲ್ಲದೇ ಈ ಭಾಗದಲ್ಲಿ ಕಾಡುಪ್ರಾಣಿಗಳ ವಿಪರೀತವಾಗಿದ್ದು, ಬೆಳೆಹಾನಿ ಮಾಡುತ್ತಿದ್ದು, ಕೂಡಲೇ ಕಾಡುಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾರ್ವಜನಿಕರು ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿ.ಕೆ. ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಇತ್ತೀಚಿನ ವರ್ಷದಲ್ಲಿ ಕಾಡುಪ್ರಾಣಿಯ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳೆಹಾನಿಯಿಂದ ಕಂಗೆಟ್ಟಿದ್ದು, ರೈತರಿಗೆ ಇತ್ತೀಚಿನ ವರ್ಷದಲ್ಲಿ ಸಾಕುಪ್ರಾಣಿಯಾದ ನಾಯಿ, ಆಕಳುಗಳು ಪ್ರಾಣ ಕಳೆದುಕೊಳ್ಳುತ್ತಿದೆ. ಇದೀಗ ಮನುಷ್ಯರ ಮೇಲೂ ದಾಳಿ ಮಾಡುತ್ತಿದ್ದು, ಇಲಾಖೆಯ ಸಿಬ್ಬಂದಿ ಕಾಡುಪ್ರಾಣಿಗಳ ನಿಯಂತ್ರಣ ಮಾಡಿ ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸಲು ಅನೂಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯುವ ಜತೆ ಸಾರ್ವಜನಿಕರಿಗೆ ಭಯ ಹೋಗಲಾಡಿಸಬೇಕು. ತಾಲೂಕಿನ ಹೊಸಾಕುಳಿ, ಮುಗ್ವಾ, ಸಾಲ್ಕೋಡ್, ಕಡ್ಲೆ, ಕಡತೋಕಾ, ನವಿಲಗೋಣ, ಚಂದಾವರ, ಹಡಿನಬಾಳ, ಚಿಕ್ಕನಕೋಡ ಭಾಗದ ವಿವಿಧೆಡೆ ಚಿರತೆ ಹಾವಳಿಯ ಜತೆಗೆ ಕಾಡುಹಂದಿ, ಮಂಗಗಳ ಹಾವಳಿಯಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಹೊಸಾಕುಳಿ ಗ್ರಾಪಂ ಅಧ್ಯಕ್ಷ ಸುರೇಶ ಶೆಟ್ಟಿ, ಸದಸ್ಯ ಕಿರಣ ಹೆಗಡೆ, ಎಂ.ಆರ್. ಹೆಗಡೆ, ಡಿ.ಎಂ. ನಾಯ್ಕ, ವಿನಾಯಕ ಹೆಗಡೆ, ಪ್ರಸನ್ನ ಗೋಡಾಮಕ್ಕಿ, ಸತ್ಯನಾರಾಯಣ ಹೆಗಡೆ, ರವಿ ಹೆಗಡೆ ಮತ್ತಿತರರು ಇದ್ದರು.ಸಾಂಬ್ರಾಣಿ ಅರಣ್ಯ ವಲಯದಲ್ಲಿ ಆನೆಗಳ ಹಾವಳಿ

ಹಳಿಯಾಳ: ತಾಲೂಕಿನ ಸಾಂಬ್ರಾಣಿ ಅರಣ್ಯ ವಲಯದ ವ್ಯಾಪ್ತಿಯ ಕಾಡಂಚಿನ ಹೊಲಗದ್ದೆಗಳಿಗೆ ಆನೆಗಳ ಉಪಟಳ ಆರಂಭವಾಗಿದ್ದು, ಆನೆಗಳ ಹಾವಳಿಗೆ ಈ ಭಾಗದ ರೈತರು ಸುಸ್ತಾಗಿದ್ದಾರೆ.ಬುಧವಾರ ರಾತ್ರಿ ಅಜಮನಾಳ ತಾಂಡಾದ ವೆಂಕಟಾಪುರ ಎಂಬಲ್ಲಿ ನಾಲ್ಕೈದು ಆನೆಗಳ ಗುಂಪು ಕಬ್ಬಿನ ಗದ್ದೆಗಳಿಗೆ ಲಗ್ಗೆಯಿಟ್ಟು ಬಾಳೆಗಿಡಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ಕಬ್ಬು ನಾಶಪಡಿಸಿವೆ ಎಂದು ಸಂತ್ರಸ್ತ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ ಅವರು, ನಮಗೆ ಆನೆದಾಳಿಯ ಮಾಹಿತಿಯು ತಿಳಿಯುತ್ತಿದ್ದಂತೆ ಇಲಾಖೆಯ ತಂಡವು ರಾತ್ರಿಯೇ ಹೋಗಿ ಆನೆಗಳನ್ನು ಕಾಡಿಗೆ ಓಡಿಸಿದ್ದಾರೆ. ಕಾಡಂಚಿನ ಹೊಲಗದ್ದೆಗಳಲ್ಲಿ ರಾತ್ರಿ ಹೊತ್ತು ಬಿಡಾರ ಮಾಡುವ ರೈತರು ಆದಷ್ಟು ಜಾಗರೂಕರಾಗಿರಬೇಕು. ವನ್ಯಪ್ರಾಣಿಗಳು ಕಂಡುಬಂದರೆ ಹೆದರಬೇಡಿ. ಅವುಗಳನ್ನು ಬೆದರಿಸುವುದಾಗಲಿ, ನೋಯಿಸುವಂತಹ ಯಾವುದೇ ಕಾರ್ಯ ಮಾಡದೇ ಇಲಾಖೆಯ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.1

PREV

Recommended Stories

ನೌಕರರ ಮುಂಬಡ್ತಿಗೆ ತರಬೇತಿ ಕಡ್ಡಾಯ
ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ