ಮಾನವನ ಬದುಕಿಗೆ ಪ್ರಜಾಪ್ರಭುತ್ವ ದಾರಿದೀಪ

KannadaprabhaNewsNetwork |  
Published : Sep 17, 2024, 12:54 AM ISTUpdated : Sep 17, 2024, 12:55 AM IST
15ಐಎನ್‌ಡಿ2,ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಎಸಿ ಅಬೀದ್ ಗದ್ಯಾಳ ಮಾತನಾಡಿದರು. | Kannada Prabha

ಸಾರಾಂಶ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿವೆ. ಡಾ.ಬಿ.ಆರ್ ಅಂಬೇಡ್ಕರ್‌ ಬರೆದ ಸಂವಿಧಾನ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿದಿದ್ದು, ಪ್ರಜಾಪ್ರಭುತ್ವ ಮಾನವನ ಬದುಕಿಗೆ ದಾರಿದೀಪವಾಗಿದೆ ಎಂದು ಎಸಿ ಅಬೀದ್‌ ಗದ್ಯಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿವೆ. ಡಾ.ಬಿ.ಆರ್ ಅಂಬೇಡ್ಕರ್‌ ಬರೆದ ಸಂವಿಧಾನ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿದಿದ್ದು, ಪ್ರಜಾಪ್ರಭುತ್ವ ಮಾನವನ ಬದುಕಿಗೆ ದಾರಿದೀಪವಾಗಿದೆ ಎಂದು ಎಸಿ ಅಬೀದ್‌ ಗದ್ಯಾಳ ಹೇಳಿದರು.ಜಿಲ್ಲಾ ಪಂಚಾಯತಿ, ತಾಲೂಕಾಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆಗಳ ಸಹಭಾಗಿತ್ವದಲ್ಲಿ ಬಳ್ಳೊಳ್ಳಿ ಹೋಬಳಿ ವ್ಯಾಪ್ತಿಯ ಜೇವೂರ ಗ್ರಾಮದ ಸಾಲುಮರದ ತಿಮ್ಮಕ್ಕ ನರ್ಸರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ನಿಮಿತ್ತ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಪೀಠಿಕೆ ಪ್ರತಿ ವಿತರಣೆ, ಪ್ರತಿಜ್ಞೆ ಮಾಡಲಾಯಿತು. ಅರಣ್ಯ ಇಲಾಖೆಯಿಂದ ಸಾವಿರಾರು ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ದೇಶ ಭಾರತ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಸಂಕಲ್ಪದೊಂದಿಗೆ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶದೊಂದಿಗೆ ದೇಶ ಮುಂದುವರೆದಿದೆ. ಬೇರೆ, ಬೇರೆ ದೇಶಗಳಲ್ಲಿ ಸರ್ವಾಧಿಕಾರ ಆಡಳಿತ ಇರುವುದರಿಂದ ಮಾನವರ ಹಕ್ಕು ಬಾಧ್ಯತೆಗಳು ಕುಂಠಿತಗೊಂಡಿವೆ. ಭಾರತ ಸಂವಿಧಾನ ಪ್ರಜಾರಾಜ್ಯ ವ್ಯವಸ್ಥೆ ಮಾಡಿ ಪ್ರಜೆಗಳೆ ಪ್ರಭುಗಳು ಎಂದು ತೋರಿಸಿಕೊಟ್ಟಿದೆ ಎಂದರು.ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಸೆ.15 ಅನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತದೆ. ರಾಜ್ಯ ಸರ್ಕಾರ ಉತ್ತರತುದಿ ಬೀದರ ಜಿಲ್ಲೆಯಿಂದ ದಕ್ಷಿಣ ತುದಿ ಚಾಮರಾಜನಗರ ಜಿಲ್ಲೆಯವರೆಗೆ ಮಾನವ ಸರಪಳಿ ನಿರ್ಮಿಸಿ ಸಂವಿಧಾನ ಬಗ್ಗೆ ಅರಿವು ಮೂಡಿಸುವ, ಪ್ರಜಾಪ್ರಭುತ್ವ ತತ್ವಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದರು.

ತದ್ದೇವಾಡಿಯ ವೇ.ಮಹಾಂತಯ್ಯಸ್ವಾಮಿ ಹಿರೇಮಠ ಆಶೀರ್ವಚನ ನೀಡಿದರು. ಬುದ್ಧ, ಬಸವ, ಅಕ್ಕಮಹಾದೇವಿ, ಅಂಬೇಡ್ಕರವರ ಸಮಾನತೆಯ ಸಿದ್ಧಾಂತ, ತತ್ವ, ಆದರ್ಶಗಳು ಬದುಕಿಗೆ ದಾರಿ ದೀಪವಾಗಿವೆ. ಅಂಬೇಡ್ಕರ್‌ ಧ್ವನಿ ಇಲ್ಲದವರಿಗೆ, ಬಡವರಿಗೆ, ದೀನ- ದುರ್ಬಲರಿಗೆ ದೇವರ ಸ್ವರೂಪದಲ್ಲಿ ಭೂಮಿಗೆ ಬಂದು ಉದ್ದರಿಸಿದ ಪುಣ್ಯಾತ್ಮ. ಬಡವರು ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದರು.ಚಡಚಣ ತಾಪಂ ಇಒ ಸಂಜಯ್ ಖಡಗೆಕರ್ ಮಾತನಾಡಿದರು. ಇಂಡಿ ತಹಸೀಲ್ದಾರ್‌ ಬಿ.ಎಸ್‌.ಕಡಕಭಾವಿ, ತಾಪಂ ಇಒ ಬಾಬು ರಾಠೋಡ, ಪತ್ರಕರ್ತರಾದ ಉಮೇಶ ಕೊಳೆಕರ್, ಯಲಗೊಂಡ ಬೇವನೂರ, ಶಂಕರಲಿಂಗ ಜಮಾದಾರ, ರಾಮಚಂದ್ರ ಕಾಂಬಳೆ, ಅರಣ್ಯಾಧಿಕಾರಿ ಮಂಜುನಾಥ ಧುಳೆ, ಎಸ್.ಜಿ ಸಂಗಳಕರ್, ಅಕ್ಷರ ದಾಸೋಹ ಯೋಜನಾಧಿಕಾರಿ ಹೂಗಾರ, ಧನರಾಜ ಮುಜಗೊಂಡ, ಶೀಲವಂತ ಕೊಟ್ಟಲಗಿ, ಮಹಾಂತೇಶ ಹೂಗೂಡಿ, ಚಡಚಣ ಹೆಸ್ಕಾಂ ಎಇಇ ಹವಾಲ್ದಾರ ಸೇರಿ ಇತರರಿದ್ದರು. ಅರಣ್ಯಾಧಿಕಾರಿ ಧನರಾಜ ಮುಜಗೊಂಡ ನಿರೂಪಿಸಿದರು. ಆರ್‌ಎಫ್‌ಒ ಎಸ್.ಜಿ ಸಂಗಳಕರ್, ಸ್ವಾಗತಿಸಿ, ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ