ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ರಾಜಕೀಯ ನಾಯಕತ್ವದ ಕಾರ್ಯಗಾರದ ಭೀತ್ತಿ ಪತ್ರವನ್ನು ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು ಜನಸಾಮಾನ್ಯರು ಆಡಳಿತದ ಹತ್ತಿರ ಬರಲು ಇರುವ ಏಕೈಕ ಅವಕಾಶವೆಂದರೆ ಅದು ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆ, ಅದರಲ್ಲೂ ಗ್ರಾಮ ಪಂಚಾಯತಿ ಗಳು ಮತ್ತು ಗ್ರಾಮಸಭೆಗಳು ಜನರ ಭಾಗವಹಿಸುವಿಕೆಯನ್ನು ಖಾತರಿ ಪಡಿಸುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳ ಹೊಣೆಗಾರಿಕೆಯನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದ್ದು, ಗ್ರಾಮ ಪಂಚಾಯತಿಗಳನ್ನು ಗ್ರಾಮ ಸರ್ಕಾರ ಎಂದೇ ಕರೆಯಲಾಗುತ್ತದೆ ಎಂದರು.
ನಂತರ ಕರಿಯಪ್ಪ ಹಾಲಪೂರ, ಹನುಮಂತಪ್ಪ ಮುದ್ದಾಪುರು ಮಾತನಾಡಿ, ಮುಂದಿನ ವರ್ಷಾರಂಭದಲ್ಲಿ ಲೋಕಲ್ ಫೈಟ್‌ಗೆ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಜನ ಅಣಿಯಾಗುತ್ತಿದ್ದು, ಗ್ರಾಮ ಪಂಚಾಯತಿ ಎಲೆಕ್ಷನ್ ಮೂಲಕ ಸಾಲು ಸಾಲು ಚುನಾವಣೆ ನಡೆಯುವ ನೀರಿಕ್ಷೆ ಇರುವದರಿಂದ ಪ್ರಜಾಪ್ರಭುತ್ವ ವಿಕೇಂದ್ರಿಕರಣ ವ್ಯವಸ್ಥೆಯ ಆಶಯ ಸೊರಗದಂತೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರಾಗ ಬಯಸುವ ಆಕಾಂಕ್ಷಿಗಳಿಗೆ ತರಬೇತಿ ನೀಡಿ ಸಮರ್ಥರ ನ್ನಾಗಿಸಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿರುವ ಜ್ಞಾನಧಾಮ ಸಹಜ ಶಿಕ್ಷಣ ಯೋಜನಾ ವೇದಿಕೆಯಿಂದ ಕಾರ್ಯಗಾರದ ನಡೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯ ಕೆಡೆಗೆ ಎಂಬ ಪಂಚಾಯತಿ ಹಬ್ಬದ ಆರಂಭಿಕ ಹಂತದ ಪ್ರಕ್ರಿಯೆಗೆ ಚಾಲನೆ ನೀಡಿರುವುದು ಉತ್ತಮ ಬೆಳವಣಿಗೆಯಗಿದೆ ಎಂದರು.ಸತೀಶಗೌಡ ತುರವಿಹಾಳ ಮತ್ತು ಪ್ರಸನ್ನ ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಾಯ್ತಿ ಮಾಜಿ ಅಧ್ಯಕ್ಷ ಶಿವಪ್ಪ ನಾಯಕ, ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮೈಬುಬಸಾಬ್ ಮುದ್ದಾಪೂರ, ಗೋವಿಂದಪ್ಪ ರಂಗಾಪೂರು, ನಾಗರಾಜ ಗುಡಸಲಿ, ಗಂಗಯ್ಯಸ್ವಾಮಿ ಸೇರಿದಂತೆ ಇನ್ನಿತರರಿದ್ದರು.