ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಬಸವ ಭವನದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ೪೦೦ ಸೀಟು ಬೇಕು ಎಂದು ಬಿಜೆಪಿ ಹೇಳುತ್ತಿರುವುದು ಸಂವಿಧಾನ ಬದಲಿಸಲು ಹಾಗೂ ಪ್ರಜಾಪ್ರಭುತ್ವ ನಾಶಮಾಡುವ ಹುನ್ನಾರ ಎಂದು ಆಪಾದಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿಗಳನ್ನು ಪ್ರಧಾನಿ ಮೋದಿ ನಮ್ಮ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಮೋದಿ ಗ್ಯಾರಂಟಿ ಬೋಗಸ್ ಎಂದು ಟೀಕಿಸಿದರು. ಕಾಂಗ್ರೆಸ್ ಜನರ ಕೈಗೆ ಸೇರೋ ಗ್ಯಾರಂಟಿಯಾಗಿದ್ದು ಪಕ್ಷದ ಕಾರ್ಯಕರ್ತರು ಮತದಾರರನ್ನು ಭೇಟಿಯಾಗಿ ಮತ ಕೇಳಬೇಕು ಎಂದರು.
ಕಳೆದ ಬಿಜೆಪಿ ಸರ್ಕಾರ ೪೦ ಪರ್ಸೆಂಟ್ ಹೆಸರಲ್ಲಿ ಹಣ ಲೂಟಿ ಮಾಡಿದರೆ ಮೋದಿ ಸರ್ಕಾರ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇಡಿ, ಐಟಿ, ಸಿಬಿಐ ನಿಯಂತ್ರಣದಲ್ಲಿಟ್ಟುಕೊಂಡು ಆಡಳಿತ ನಡೆಸುತ್ತಿದೆ ಎಂದರು. ಬಿಜೆಪಿ ಚುನಾವಣಾ ಬಾಂಡ್ ನಲ್ಲಿ 6 ಸಾವಿರ ಕೋಟಿ ಹಣ ಪಡೆದಿದೆ. ಅದು ದೊಡ್ಡ ಕಂಪನಿಗಳ ಮೇಲೆ ದಾಳಿ ನಡೆಸಿ ಹೆದರಿಸಿ ಹಣ ಪಡೆದಿದ್ದು ಭ್ರಷ್ಟಾಚಾರದ ಬಗ್ಗೆ ಮಾತನಾಡೋ ನೈತಿಕತೆ ಇಲ್ಲ ಎಂದರು.ಚಾಮರಾಜನಗರ ಮೀಸಲು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಮಗ ಎಂದು ಟಿಕೆಟ್ ನೀಡಿಲ್ಲ. ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ನಂಜನಗೂಡು ಟಿಕೆಟ್ ಸಿಗಲಿಲ್ಲ ಈಗ ಟಿಕೆಟ್ ಪಕ್ಷ ನೀಡಿದೆ ಎಂದರು.
ಸಾಮಾಜಿಕ ನೆಲೆಗಟ್ಟಿನಲ್ಲಿ ಆಡಳಿತ ಹಾಗೂ ಸಂವಿಧಾನ ಉಳಿವಿಗಾಗಿ ಕಾಂಗ್ರೆಸ್ ಪಕ್ಷ ಮತ ಕೇಳಲಿದೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ಕಾಂಗ್ರೆಸ್ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿ, ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಕಾರ್ಯಕರ್ತರು ಮತ ಕೇಳಿ ಎಂದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ದಿ.ಎಚ್.ಎಸ್.ಮಹದೇವಪ್ರಸಾದ್ ಹಾಗೂ ಡಾ.ಗೀತಾ ಮಹದೇವಪ್ರಸಾದ್ ಅವರಂತೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಗಣೇಶ್ ಪ್ರಸಾದ್ ಅವರಿಗೆ ಲಕ್ಷ ಮತ ನೀಡಿದ್ದೀರಾ! ಸುನೀಲ್ ಬೋಸ್ ಗೂ ಹೆಚ್ಚಿನ ಮತ ನೀಡಬೇಕು ಎಂದರು.
ನಾನು ಸುಳ್ಳು ಹೇಳುವ ರಾಜಕಾರಣಿಯಲ್ಲ:
ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಎಚ್.ಸಿ.ಬಸವರಾಜು, ಮಾಜಿ ಸಂಸದ ಎ.ಸಿದ್ದರಾಜು, ಎಂ.ಶಿವಣ್ಣ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ಮುನಿರಾಜು, ಲತಾ ಸಿದ್ದಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮೊಳ್ಳಯ್ಯನಹುಂಡಿ ಬಸವರಾಜು, ಜಿಪಂ ಮಾಜಿ ಸದಸ್ಯ ಕೆ.ಬಿ.ಸ್ವಾಮಿ, ಕೆರಹಳ್ಳಿ ನವೀನ್, ಮುಖಂಡರಾದ ವೈ.ಎನ್.ಶಂಕರೇಗೌಡ, ಹೊಂಗನೂರು ಚಂದ್ರು, ಬಿ.ಕೆ.ರವಿಕುಮಾರ್, ಕಬ್ಬಳ್ಳಿ ಮಹೇಶ್, ಎಸ್.ಶಿವನಾಗಪ್ಪ, ಹಿರೀಕಾಟಿ ಕುಮಾರ್, ಮುಕ್ಕಡಹಳ್ಳಿ ರವಿಕುಮಾರ್, ರವಿಕುಮಾರ್, ಮೂಡ್ನಾಕೂಡು ಕುಮಾರ್, ಮಂಚಹಳ್ಳಿ ಲೋಕೇಶ್, ಕೆಂಪರಾಜು, ನಾಗರಾಜು, ಬಂಗಾರನಾಯಕ ಇದ್ದರು.ಕಾಂಗ್ರೆಸ್ ಗೆಲ್ಲಲೇ ಬೇಕು: ಎಚ್‌ಸಿಎಮ್
ಬಿಜೆಪಿ ಬಡವರ ಪಕ್ಷವಲ್ಲ, ಬಂಡವಾಳ ಶಾಹಿಗಳು, ಕೈಗಾರಿಕ್ಯೋದ್ಯಮಿಗಳ ಪಕ್ಷವಾಗಿದೆ. ಮಹದೇವಪ್ರಸಾದ್ ಒಳ್ಳೆ ಆಡಳಿತಗಾರ ಜೊತೆಗೆ ಶಿಸ್ತಿನ ಶಿಪಾಯಿ. ಬಹುಗ್ರಾಮ ಯೋಜನೆ ಜಾರಿಗೆ ತರದಿದ್ದರೆ ಕುಡಿವ ನೀರಿನ ಹಾಹಾಕಾರ ಮುಗಿಲು ಮುಟ್ಟುತ್ತಿತ್ತು ಅಲ್ಲದೆ ಕೆರೆಗಳಿಗೆ ನೀರು ತುಂಬಿಸುವಲ್ಲಿ ಮಹದೇವಪ್ರಸಾದ್ ಪಾತ್ರ ಅಪಾರ ಎಂದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಶಾಸಕ ಗಣೇಶ್ ಪ್ರಸಾದ್ ನಾಯಕತ್ವದಲ್ಲಿ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಿಜೆಪಿ ಮನೆಯ ದೋಸೆ ತೂತಾಗಿದೆ ಹಾಗೂ ಸುಡುವ ಮನೆಯಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ವ್ಯಂಗವಾಡಿದರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ರಾಜ್ಯದಲ್ಲಿ ಬೆಳಗಾಂ, ಮೈಸೂರು, ದಾವಣಗೆರೆ ಸೇರಿದಂತೆ ಹಲವೆಡೆ ಬಿಜೆಪಿ ಮನೆಗೆ ಬೆಂಕಿ ಬಿದ್ದಿದೆ ಎಂದು ಟೀಕಿಸಿದರು. ಸರ್ವಾಧಿಕಾರಿ ಪ್ರಧಾನಿ ಮೋದಿ ಸರ್ವಾಧಿಕಾರಿಯಾಗಿದ್ದಾರೆ. ಸರ್ವಾಧಿಕಾರಿ ಆಡಳಿತ ಮತ್ತೆ ಬಂದರೆ ಹಿಟ್ಲರ್ ನಂತೆ ಆಡಳಿತ ನಡೆಸುತ್ತಾರೆ. ಪ್ರಜಾ ಪ್ರಭುತ್ವ ನಾಶವಾಗಿ ಸಂವಿಧಾನಕ್ಕೂ ಅಪಾಯ ಎಂದು ಎಚ್ಚರಿಸಿದರು. ವಾಕ್ ಸ್ವಾತಂತ್ರ್ಯದ ಹಕ್ಕು ಕಸಿದರೆ ಮಾದ್ಯಮ ಕೂಡ ಉಳಿಯಲ್ಲ, ಮಾದ್ಯಮ ಉಳಿಯದಿದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಉಳಿಯಲು ಕೋಮವಾದ ಅಳಿಯಲೇಬೇಕು ಎಂದರು.