ಮುಂದಿನ ಮುಂಗಾರಿನಲ್ಲಿ ಹೊಸ ಬಿತ್ತನೆ ಬೀಜಗಳ ಪ್ರಾತ್ಯಕ್ಷಿಕೆ: ಡಾ.ಸಂತೋಷ್‌

KannadaprabhaNewsNetwork |  
Published : Oct 04, 2025, 01:00 AM IST
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ವಿಜ್ಞಾನಿ ಡಾ, ಸಂತೋಷ್ ಪಟ್ಟಣಶೆಟ್ಟಿ | Kannada Prabha

ಸಾರಾಂಶ

ಮೆಕ್ಕೆಜೋಳ ಬೆಳೆಯಲ್ಲಿ ರೋಗ ಹರಡುವ ಕೀಟಗಳ ಹಾವಳಿ, ಮುಳ್ಳುಸಜ್ಜೆ ಕಳೆ, ಅತಿವೃಷ್ಟಿ-ಅನಾವೃಷ್ಟಿ ಸಮಸ್ಯೆಗಳಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಸರಾಸರಿ ಉತ್ಪಾದಕತೆ ಹೆಚ್ಚಿಸುವಂತೆ ವೇ ಕ್ಯಾಮ್ಸ್‌ ಯೋಜನೆ ವತಿಯಿಂದ ಹೊಸದಾಗಿ ಸಂಸ್ಕರಣ ಮಾಡಿದ ಹೈಬ್ರಿಡ್ ಬೀಜಗಳನ್ನು ಪರಿಚಯಿಸುತ್ತಿದೆ ಎಂದು ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ವಿಜ್ಞಾನಿ ಡಾ.ಸಂತೋಷ್ ಪಟ್ಟಣ ಶೆಟ್ಟಿ ಹೇಳಿದ್ದಾರೆ.

- ಕತ್ತಲಗೆರೆ ತೋಟಗಾರಿಕೆ ಕೇಂದ್ರ ಆವರಣದಲ್ಲಿ ಪರಿಚಯ ಕಾರ್ಯಕ್ರಮ

- - -

ಚನ್ನಗಿರಿ: ಮೆಕ್ಕೆಜೋಳ ಬೆಳೆಯಲ್ಲಿ ರೋಗ ಹರಡುವ ಕೀಟಗಳ ಹಾವಳಿ, ಮುಳ್ಳುಸಜ್ಜೆ ಕಳೆ, ಅತಿವೃಷ್ಟಿ-ಅನಾವೃಷ್ಟಿ ಸಮಸ್ಯೆಗಳಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಸರಾಸರಿ ಉತ್ಪಾದಕತೆ ಹೆಚ್ಚಿಸುವಂತೆ ವೇ ಕ್ಯಾಮ್ಸ್‌ ಯೋಜನೆ ವತಿಯಿಂದ ಹೊಸದಾಗಿ ಸಂಸ್ಕರಣ ಮಾಡಿದ ಹೈಬ್ರಿಡ್ ಬೀಜಗಳನ್ನು ಪರಿಚಯಿಸುತ್ತಿದೆ ಎಂದು ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ವಿಜ್ಞಾನಿ ಡಾ.ಸಂತೋಷ್ ಪಟ್ಟಣ ಶೆಟ್ಟಿ ಹೇಳಿದರು.

ತಾಲೂಕಿನ ಕತ್ತಲಗೆರೆ ಗ್ರಾಮದಲ್ಲಿರುವ ತೋಟಗಾರಿಕೆ ಕೃಷಿ ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ವೇ ಕ್ಯಾಮ್ಸ್ ಯೋಜನೆ ವತಿಯಿಂದ ಆಯೋಜಿಸಿದ್ದ ಹೊಸ ತಳಿಯ ಸಂಸ್ಕರಣ ಹೈಬ್ರಿಡ್ ಬೀಜಗಳ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೆಕ್ಕೆಜೋಳ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಉತ್ತಮ ಇಳುವರಿಯಿಂದ ರೈತರಿಗೆ ಆರ್ಥಿಕ ಲಾಭ ತರುವಂತಹ ಬೆಳೆಯಾಗಿದೆ. ವಿವಿಧ ಕೀಟಬಾಧೆಗಳಿಂದ ಹಾಗೂ ಮುಳ್ಳು ಸಜ್ಜೆಯಂತಹ ಕಳೆಯಿಂದ ಸಾಕಷ್ಟು ರೈತರು ಬಳಲಿದ್ದಾರೆ. ಈ ಸಮಸ್ಯೆ ಅರಿತು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ತೋಟಗಾರಿಕೆ ಕೃಷಿ ಸಂಶೋಧನ ಕೇಂದ್ರ ವತಿಯಿಂದ ವೇ ಕ್ಯಾಮ್ಸ್ ಯೋಜನೆಯಡಿ ಹೊಸದಾಗಿ ಸಂಸ್ಕರಣೆ ಮಾಡಿದ ಹೈಬ್ರಿಡ್ ತಳಿಯ ಮೆಕ್ಕೆಜೋಳ ಬೀಜಗಳನ್ನು ಪರಿಚಯಿಸಲಾಗುತ್ತಿದೆ. ಮುಂದಿನ ಮುಂಗಾರಿನಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಕೃಷಿ ವಿಜ್ಞಾನಿ ಡಾ. ಗಂಗಪ್ಪಗೌಡ ಬಿರಾದಾರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಭಾಗವಹಿಸಿದ್ದರು.

- - -

-3ಕೆಸಿಎನ್ಜಿ1: ಸಮಾರಂಭ ಉದ್ಘಾಟನೆಯನ್ನು ಶಿವಮೊಗ್ಗದ ಕೃಷಿ ಮಹಾವಿದ್ಯಾಲಯ ವಿಜ್ಞಾನಿ ಡಾ. ಸಂತೋಷ್ ಪಟ್ಟಣಶೆಟ್ಟಿ ಉದ್ಘಾಟಿಸಿದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ