ಕನ್ನಡಪ್ರಭ ವಾರ್ತೆ ಹುಕ್ಕೇರಿ
ಪಟ್ಟಣದ ಬಿಇಒ ಕಚೇರಿಯಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೇ ತಿಂಗಳು 25 ರಿಂದ ಏಪ್ರಿಲ್ 6ರವರೆಗೆ ನಡೆಯಲಿದ್ದು, ತಾಲೂಕಿನಾದ್ಯಂತ ವಿದ್ಯಾರ್ಥಿಗಳು ಒತ್ತಡ ರಹಿತ ಹಾಗೂ ನಿರ್ಭೀತಿಯಿಂದ ಪರೀಕ್ಷೆ ಎದುರಿಸಲಿದ್ದಾರೆ ಎಂದು ತಿಳಿಸಿದರು.
ಒಟ್ಟು 19 ಪರೀಕ್ಷಾ ಕೇಂದ್ರಗಳಿದ್ದು, 3649 ಗಂಡು, 3231 ಹೆಣ್ಣು ಸೇರಿ ಒಟ್ಟು 6880 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷಾ ಕಾರ್ಯಕ್ಕೆ ಒಟ್ಟು 450 ಸಿಬ್ಬಂದಿ ನಿಯೋಜಿಸಲಾಗಿದೆ. 19 ಮುಖ್ಯ ಅಧೀಕ್ಷಕರು, 11 ಉಪಮುಖ್ಯ ಅಧೀಕ್ಷಕರು, 19 ಜನ ಪ್ರಶ್ನೆ ಪತ್ರಿಕೆ ಕಸ್ಟೋಡಿಯನ್ಸ್, 19 ಜನ ಮೊಬೈಲ್ ಸ್ವಾಧೀನಾಧಿಕಾರಿಗಳು, 19 ಜನ ಪೊಲೀಸ್ ಸಿಬ್ಬಂದಿ, ಜಾಗೃತ ದಳ, ಸ್ಥಾನಿಕ ಜಾಗೃತ ದಳ ನಿಯೋಜಿಸಲಾಗಿದೆ. 19 ಆರೋಗ್ಯ ಕೌಂಟರ್ ಸಹ ತೆರೆಯಲಾಗಿದೆ ಎಂದು ಪ್ರಭಾವತಿ ಮಾಹಿತಿ ನೀಡಿದರು.ಉತ್ತಮ ಫಲಿತಾಂಶ ಸುಧಾರಣೆಗೆ ಅಣಕು ಪರೀಕ್ಷೆ, ಮೇಸ್ಟ್ರು ಬಂದರು ಮಂಗಳವಾರ, ಸರಣಿ ಪರೀಕ್ಷೆ ಸೇರಿದಂತೆ ಹಲವು ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ನೇರಪ್ರಸಾರ (ವೆಬ್‌ಕಾಸ್ಟಿಂಗ್)ಕ್ಕೆ ಕ್ರಮವಹಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಮುತ್ತ 200 ಮೀ. ನಿಷೇಧಾಜ್ಞೆ ಹೇರಲಾಗಿದೆ ಎಂದು ತಿಳಿಸಿದರು.