- ಅಶ್ವಮೇಧ ಬಸ್‌ಗೆ ಹಸಿರು ನಿಶಾನೆ ನೀಡಿ ಶಾಸಕ ದೇವೇಂದ್ರಪ್ಪ ಭರವಸೆ - - - ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ. ಅಶ್ವಮೇಧ ಬಸ್ ಗೆ (ಜಗಳೂರು - ಬೆಂಗೂಳೂರು) ಹಸಿರು ನಿಶಾನೆ ತೋರಿಸುವ ಮೂಲಕ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಡಿ.ಪೋ ನಿರ್ಮಾಣ ಸೇರಿದಂತೆ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಸಾಕಷ್ಟು ಮನವಿಗಳು ಬಂದಿವೆ. ಆದ್ದರಿಂದ ಪ್ರಯಾಣಿಕರು ಬೆಳಿಗ್ಗೆ 5-20 ಗಂಟೆಗೆ ಜಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದರೆ ಮತ್ತೆ ಪುನಃ ರಾತ್ರಿ 10 ಗಂಟೆಯ ಸಮಯಕ್ಕೆ ಜಗಳೂರಿಗೆ ಬಸ್ ಆಗಮಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.ಕೆಪಿಸಿಸಿ ಎಸ್ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ತಾಲೂಕಿನಲ್ಲಿ ಮಧ್ಯರಾತ್ರಿಯ ವೇಳೆ ಬಸ್ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡುವಂತ ಸ್ಥಿತಿ ಇದೆ. ಇದನ್ನು ಮನಗಂಡ ಶಾಸಕರು ಬಸ್ ವ್ಯವಸ್ಥೆ ಕಲ್ಪಿಸಿರುವುದು ತುಸು ನೆಮ್ಮದಿ ತಂದಿದೆ. ಮುಂದಿನ ದಿನಗಳಲ್ಲಿ ಡಿಪೋ ನಿರ್ಮಾಣವಾದರೆ ಎಲ್ಲಾ ಸರ್ಕಾರಿ ಬಸ್‌ಗಳ ಸಂಚಾರ ಆಗುವುದರಿಂದ ನಾಗರಿಕರಿಗೆ ಅನುಕೂಲವಾಗಲಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್ ಅಹಮ್ಮದ್ , ಮಾಜಿ ಅಧ್ಯಕ್ಷ ಪಿ. ಸುರೇಶ್ ಗೌಡ, ವಿಭಾಗೀಯ ಸಂಚಾಲನ ಅಧಿಕಾರಿ ಫಕೃದ್ಧಿನ್, ಘಟಕದ ಅಧಿಕಾರಿ ಮರುಳಸಿದ್ದಪ್ಪ, ಮಹಿಳಾ ಘಟಕದ ಅಧ್ಯಕ್ಷ ಸಾವಿತ್ರಮ್ಮ, ಪ.ಪಂ. ಸದಸ್ಯರಾದ ರಮೇಶ್, ಶಕೀಲ್ ಅಹಮ್ಮದ್, ಮುಖಂಡರುಗಳಾದ ತಿಪ್ಪೇಸ್ವಾಮಿಗೌಡ, ರಾಮರೆಡ್ಡಿ, ಚಿತ್ತಪ್ಪ ಇತರರು ಇದ್ದರು.----
ಜಗಳೂರು ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಜಗಳೂರು- ಬೆಂಗೂಳೂರು ಮಾರ್ಗದ ಕೆಎಸ್‌ಆರ್‌ಟಿಸಿ ಅಶ್ವಮೇಧ ಬಸ್ ಸೇವೆಗೆ ಸೋಮವಾರ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.