ಡೆಪ್ಯೂಟಿ ಸ್ಪೀಕರ್ ಮಂಕಾಳ ವೈದ್ಯರಿಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Aug 20, 2026, 02:30 AM IST
ಪೊಟೋ ಪೈಲ್ : 19ಬಿಕೆಲ್1 | Kannada Prabha

ಸಾರಾಂಶ

ವಿಧಾನಸಭೆಯ ಉಪಸಭಾಧ್ಯಕ್ಷ ಹುದ್ದೆ ಸ್ವೀಕರಿಸಿದ ಬಳಿಕ ಭಟ್ಕಳಕ್ಕೆ ಮೊದಲ ಬಾರಿ ಆಗಮಿಸಿದ ಮಂಕಾಳ ಎಸ್. ವೈದ್ಯರನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಭಟ್ಕಳ

ವಿಧಾನಸಭೆಯ ಉಪಸಭಾಧ್ಯಕ್ಷ ಹುದ್ದೆ ಸ್ವೀಕರಿಸಿದ ಬಳಿಕ ಭಟ್ಕಳಕ್ಕೆ ಮೊದಲ ಬಾರಿ ಆಗಮಿಸಿದ ಮಂಕಾಳ ಎಸ್. ವೈದ್ಯರನ್ನು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡರು.

ಈ ಸಂದರ್ಭ ಮಾತನಾಡಿದ ಮಂಕಾಳ ವೈದ್ಯರು, ನನಗೆ ಸಿಕ್ಕ ಗೌರವದ ಹುದ್ದೆಯಿಂದ ಎಲ್ಲರೂ ಸಂತಸ ಪಟ್ಟಿದ್ದಾರೆ. ಪಕ್ಷಬೇಧ ಮರೆತು ನನಗೆ ಹಾರೈಸಿದ್ದಾರೆ. ನಾನು ಹಿಂದಿನ ಸರಕಾರದಲ್ಲಿ ಮೀನುಗಾರಿಕಾ ಸಚಿವನಾಗಿ ಮತ್ತು ಈಗ ವಿಧಾನಸಭೆ ಉಪಸಭಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಇದೆಲ್ಲದಕ್ಕೂ ಇಡಗುಂಜಿ ಮಹಾಗಣಪತಿಯ ಆಶೀರ್ವಾದ ಮತ್ತು ಕ್ಷೇತ್ರದ ಜನರ ಪ್ರೀತಿ ವಿಶ್ವಾಸವೇ ಕಾರಣವಾಗಿದೆ ಎಂದ ಅವರು, ನನಗೆ ನನ್ನ ಜನರೇ ಶಕ್ತಿ, ನನ್ನ ಅಭಿಮಾನಿಗಳೇ ಜೀವ ಮತ್ತು ನನ್ನ ಕಾರ್ಯಕರ್ತರೇ ನನ್ನ ಬೆಂಬಲ. ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ತಂಝೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಕಾಂಗ್ರೆಸ್ ಮುಖಂಡರು, ವಿವಿಧ ಸಂಘ ಸಂಸ್ಥೆ, ದೇವಸ್ಥಾನದ ಆಡಳಿತ ಮಂಡಳಿಯವರು ವಿಧಾನಸಭೆ ಉಪಸಭಾಧ್ಯಕ್ಷರನ್ನು ಸ್ವಾಗತಿಸಿ ಹೂವಿನ ಹಾರ ಹಾಕಿ ಗೌರವಿಸಿದರು.ಶ್ರೀ ಮುರುಡೇಶ್ವರನ ದರ್ಶನ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ಎಸ್. ವೈದ್ಯ ಬುಧವಾರ ಶ್ರೀ ಮುರುಡೇಶ್ವರ ದೇವಸ್ಥಾನಕ್ಕೆ ತೆರಳಿ ಶ್ರೀ ಮುರುಡೇಶ್ವರನ ದರ್ಶನ ಪಡೆದರು. ಈ ಸಂದರ್ಭ ಕುಟುಂಬದವರು, ಪ್ರಮುಖರು, ಅಭಿಮಾನಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡಿಮೆ ಶ್ರಮ, ಅಧಿಕ ಇಳುವರಿ ಪಡೆಯಲು ವೈಜ್ಞಾನಿಕ ಕೃಷಿ ಪದ್ಧತಿ ಪೂರಕ: ಬಿ.ಪುಂಡಲೀಕ ಮರಾಠೆ
ಎಸ್‌ಡಿಎಂಎ ಕಾಲೇಜಿನಿಂದ ಸ್ತನ್ಯಪಾನ ಜಾಗೃತಿ ಬೀದಿನಾಟಕ