ಮೆಡಿಸಿನ್, ಸರ್ಜರಿ, ಆರ್ಥೊ, ಪಿಡಿಯಾಟ್ರಿಕ್, ರೇಡಿಯೋಲಾಜಿ, ಸೇರಿದಂತೆ ಏಳು ವಿಭಾಗಗಳನ್ನು ಹೊಂದಿರುವ ಸಂಜೆ ಕ್ಲಿನಿಕ್ ನಲ್ಲಿ ನುರಿತ ವೈದ್ಯರು ಇರಲಿದ್ದು, ಕೇವಲ ರು. 50 ಪಾವತಿಸಿ ನೋಂದಣಿ ಮಾಡಿ ವೈದ್ಯರ ಸಲಹೆ ಪಡೆಯಬಹುದಾಗಿದೆ.
ಕನ್ನಡಪ್ರಭ ವಾರ್ತೆ ಉಳ್ಳಾಲಸ್ಥಳೀಯರ ಹಾಗೂ ಉದ್ಯೋಗಿಗಳ ಅನುಕೂಲಕ್ಕಾಗಿ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಆರಂಭಿಸಲಾಗಿದ್ದು, ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ) ಉಪಕುಲಾಧಿಪತಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ ಉಓದ್ಘಾಟಿಸಿದರು.
ಮೆಡಿಸಿನ್, ಸರ್ಜರಿ, ಆರ್ಥೊ, ಪಿಡಿಯಾಟ್ರಿಕ್, ರೇಡಿಯೋಲಾಜಿ, ಸೇರಿದಂತೆ ಏಳು ವಿಭಾಗಗಳನ್ನು ಹೊಂದಿರುವ ಸಂಜೆ ಕ್ಲಿನಿಕ್ ನಲ್ಲಿ ನುರಿತ ವೈದ್ಯರು ಇರಲಿದ್ದು, ಕೇವಲ ರು. 50 ಪಾವತಿಸಿ ನೋಂದಣಿ ಮಾಡಿ ವೈದ್ಯರ ಸಲಹೆ ಪಡೆಯಬಹುದಾಗಿದೆ.ಕಾರ್ಯಕ್ರಮ ಉದ್ಘಾಟಿಸಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, ಕೆ.ಎಸ್. ಹೆಗ್ಡೆ ಆಸ್ಪತ್ರೆ ಸ್ಥಳೀಯರ ಅನುಕೂಲಕ್ಕಾಗಿ ಸಂಜೆ 5ರಿಂದ ರಾತ್ರಿ 7.30ರ ವರೆಗೆ ‘ಈವ್ನಿಂಗ್ ಸ್ಪೆಷಲ್ ಕ್ಲಿನಿಕ್’ನ್ನು ಆಸ್ಪತ್ರೆಯ ನೆಲ ಮಹಡಿಯಲ್ಲಿ ಆರಂಭಿಸಿದೆ. ಕೇವಲ ರು.50 ನೋಂದಣಿ ಶುಲ್ಕ ಮಾತ್ರ ಪಡೆಯಲಾಗುತ್ತದೆ. ಈ ಕ್ಲಿನಿಕ್‌ನಲ್ಲಿ ಎಲ್ಲಾ ತಜ್ಞ ವೈದ್ಯರುಗಳ ಸೇವೆ ಲಭ್ಯವಿರುತ್ತದೆ ಎಂದರು.ಈಗಾಗಲೇ ಕೆ.ಎಸ್. ಹೆಗ್ಡೆ ಆಸ್ಪತ್ರೆ 1200 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯಾಗಿದ್ದು, ಬೆಡ್ ಸ್ಕ್ಯಾನ್, ಎಂ.ಆರ್.ಐ., ರೊಬೊಟಿಕ್ ಸರ್ಜರಿ, 17 ಸುಸಜ್ಜಿತ ಆಪರೇಷನ್ ಥಿಯೇಟರ್‌ಗಳ ವ್ಯವಸ್ಥೆ ಒಳಗೊಂಡಿದೆ. ಎಲ್ಲಾ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಹಿಂದೆ ಸ್ಪೆಷಲ್ ಕ್ಲಿನಿಕ್ ಬೆಳಗ್ಗೆ 9ರಿಂದ ಮಧ್ಯಾಹ್ನ 5ರವರೆಗೆ ಮಾತ್ರ ನಡೆಯುತ್ತಿತ್ತು. ಆದರೆ ಸುತ್ತಮುತ್ತಲಿನ ಜನರ ಅನುಕೂಲಕ್ಕಾಗಿ ಇದೀಗ ಸಂಜೆ ಸುಸಜ್ಜಿತ ಕ್ಲಿನಿಕ್ ಪ್ರಾರಂಭಿಸಲಾಗಿದೆ ಎಂದರು.ಒಟ್ಟು ರು.2 ಕೋಟಿ ವೆಚ್ಚದಲ್ಲಿ ಈ ಕ್ಲಿನಿಕ್ ನವೀಕರಿಸಲಾಗಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸಲು ಈ ನೂತನ ಕ್ಲಿನಿಕ್ ನೆರವಾಗಲಿ ಎನ್ನುವುದು ಸ್ಥಾಪಕರ ಆಶಯ ಎಂದರು.ಆಡಳಿತ ವಿಭಾಗದ ಸಹಕುಲಾಧಿಪತಿ ವಿಶಾಲ್ ಹೆಗ್ಡೆ , ಕುಲಸಚಿವ ಎಂ.ಎಸ್ ಮೂಡಿತ್ತಾಯ, ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್ ಶೆಟ್ಟಿ, ಎಲುಬು ಮತ್ತು ಕೀಲು ವಿಭಾಗ ಮುಖ್ಯಸ್ಥರು ಡಾ.ವಿಕ್ರಮ್ ಶೆಟ್ಟಿ, ಅಲೈಡ್ ಹೆಲ್ಸತ್ ಸೈನ್ಸ್ ಡೀನ್ ಡಾ.ಜೆ.ಪಿ ಶೆಟ್ಟಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.