ಕನಕಪುರ: ತಾಲೂಕಿನ ಬೂದಿಗುಪ್ಪೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ದೂರು ನೀಡಲಾಗಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಕುಮಾರಸ್ವಾಮಿ ತಿಳಿಸಿದರು
ಕನಕಪುರ: ತಾಲೂಕಿನ ಬೂದಿಗುಪ್ಪೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಕರ್ತವ್ಯಲೋಪ ಹಾಗೂ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ದೂರು ನೀಡಲಾಗಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಕುಮಾರಸ್ವಾಮಿ ತಿಳಿಸಿದರು.
ನಗರದ ತಾಪಂ ಇಒ ಕಚೇರಿಯಲ್ಲಿ ದೂರು ಸಲ್ಲಿಸಿ ಮಾತನಾಡಿದ ಅವರು, ಬೂದಿಗುಪ್ಪೆ ಪಿಡಿಒ ಪ್ರಸಾದ್ ತಮ್ಮ ಅಧಿಕಾರ ದುರ್ಬಳಸಿಕೊಂಡು ಅಕ್ರಮ, ಅವ್ಯವಹಾರ ಹಾಗೂ ಭ್ರಷ್ಟಾಚಾರದಲ್ಲಿ ಸಕ್ರಿಯವಾಗಿ ತೊಡಿಗಿಸಿಕೊಂಡಿರುವ ದೂರುಗಳು ಬಂದಿವೆ. ವಾರದಲ್ಲಿ ಮೂರು ದಿನ ಕರ್ತವ್ಯಕ್ಕೆ ಹಾಜರಾಗುವುದು, ಕಚೇರಿಯಲ್ಲಿ ಕೇವಲ ಮೂರ‍್ನಾಲ್ಕು ತಾಸು ಮಾತ್ರ ಲಭ್ಯವಿರುವುದು, ಸಾರ್ವಜನಿಕರ ಕೆಲಸಗಳಿಗೆ ಹಾಗು ಜೀ ರಾಮ್ ಜೀ ಕಾಮಗಾರಿ ಮಾಡಿದವರಿಗೆ ಬಿಲ್ ಮಾಡಲು ಲಂಚ ಬೇಡಿಕೆ ಇಡುವುದು. ಹೀಗೆ ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡುತ್ತಿರುವ ಅಧಿಕಾರಿ ವಿರುದ್ಧ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದರು.
ರೈತಸಂಘದ ಸಂಚಾಲಕ ಚೀಲೂರು ಮುನಿರಾಜು ಮಾತನಾಡಿ, ಸಾರ್ವಜನಿಕರ ಸೇವೆಗೆಂದು ಮೀಸಲಾಗಿರುವ ಅಧಿಕಾರಿ ನಿಷ್ಠೆಯಿಂದ ಸರ್ಕಾರ ನೀಡುವ ಸಂಬಳಕ್ಕೆ ದುಡಿಯುವುದು ಬಿಟ್ಟು ದುಡ್ಡಿನ ದುರಾಸೆಗೆ ಬಿದ್ದಿದ್ದಾರೆ. ಸ್ಥಳೀಯ ಕೂಲಿ ಕಾರ್ಮಿಕರಿಗೆ ಜೀ ರಾಮ್ ಜೀ ಯೋಜನೆಯಡಿ ಕೆಲಸ ನೀಡುವ ಬದಲು ಜೆಸಿಬಿ ಯಂತ್ರಗಳನ್ನು ಬಳಸಿ ಕೆಲಸ ಮಾಡಿಸುತ್ತಾರೆ. ಬೇರೆಡೆಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಹಾಜರಾತಿ ಹಾಕಿ ಕಳ್ಳತನದಲ್ಲಿ ಹಣ ಸಂಪಾದನೆಗೆ ಇಳಿದಿದ್ದಾರೆಂದು ದೂರಿದರು.
ರೈತಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಕಿರಣ್ ಕುಮಾರ್, ಸದಸ್ಯರಾದ ನಂಜೇಶ್, ಶಿವಕುಮಾರ್, ಬಿ.ಎಸ್.ನಾಗೇಶ್, ಬಸವರಾಜು, ಶ್ರೀನಿವಾಸ್, ಸಿ.ಎಂ.ಲಿಂಗೇಶ್, ಅರಸು, ಪುಟ್ಟಮಾದೇಗೌಡ, ಬಿ.ಕೆ.ಉಮೇಶ್, ಶಿವರಾಮು, ಶಿವಕುಮಾರ್, ರವಿಕುಮಾರ್ ಹಾಜರಿದ್ದರು.
ಕೆಕೆಪಿ ಸುದ್ದಿ ೧:
ಕನಕಪುರ ತಾಲೂಕು ಬೂದಿಗುಪ್ಪೆ ಪಿಡಿಒ ಪ್ರಸಾದ್ ಕರ್ತವ್ಯ ಲೋಪದ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಸರ್ಕಾರಕ್ಕೆ ದೂರು ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.