ಡೇರಿ ಚುನಾವಣೆ: ಶಾಸಕರ ವಿರೋಧಿ ಬಣದ ಮೇಲುಗೈ

KannadaprabhaNewsNetwork |  
Published : Jan 18, 2025, 12:46 AM IST

ಸಾರಾಂಶ

ಶ್ರೀನಿವಾಸರೆಡ್ಡಿ ತಮ್ಮ ಅಪ್ತರಿಗೆ ಟೂರ್‌ ಭಾಗ್ಯ ಕಲ್ಪಿಸಿದ್ದರು, ಆದರೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ, ೧೨ ಸ್ಥಾನಗಳ ಪೈಕಿ ೧೧ ಸ್ಥಾನಗಳನ್ನು ಶಾಸಕರ ವಿರೋಧ ಬಣದವರು ಗೆದ್ದುಕೊಂಡಿದ್ದಾರೆ. ಕರಡುಗೂರು ಗ್ರಾಮದಲ್ಲಿ ಯುವ ಮುಖಂಡನಾಗಿ ಗುರುತಿಸಿಕೊಂಡಿರುವ ಅಭಿಲಾಶ್ ರೈತರ ಮನವೂಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಕ್ಯಾಸಂಬಳ್ಳಿ ಹೋಬಳಿ ಕರಡುಗೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಳೆದ ೩೦ ವರ್ಷಗಳಿಂದ ಸೋಲಿನ ರುಚಿಯನ್ನ ಕಂಡಿರದ ಶಾಸಕಿ ರೂಪಕಲಾಶಶಿಧರ್‌ ಬಲಗೈ ಬಂಟ ಶ್ರೀನಿವಾಸರೆಡ್ಡಿ(ಎನ್ಟಿಆರ್) ಆಡಳಿತದ ವಿರುದ್ಧ ಬಂಡೆದ್ದ ರೈತರು ೧೨ ಸ್ಥಾನಗಳ ಪೈಕಿ ೧೧ ಸ್ಥಾನಗಳಲ್ಲಿ ಅಭಿಲಾಶ್ ಬಣವನ್ನು ಗೆಲ್ಲಿಸಿದ್ದಾರೆ.

ತಾಲೂಕು ಮಟ್ಟದಲ್ಲಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಹಲವು ಚುನಾವಣೆಯಲ್ಲಿ ಶಾಸಕಿ ರೂಪಕಲಾ ಜೊತೆ ಪ್ರಮುಖ ಪಾತ್ರವನ್ನು ವಹಿಸಿದ್ದ ಶ್ರೀನಿವಾಸರೆಡ್ಡಿ(ಎನ್.ಟಿ.ಆರ್) ತನ್ನ ಹುಟ್ಟೂರಿನಲ್ಲಿ ಸೋಲು ಕಂಡಿದ್ದು ಕೆಜಿಎಫ್ ತಾಲೂಕು ವ್ಯಾಪ್ತಿಯ ಕಾಂಗ್ರೆಸ್ ಮುಖಂಡರಿಗೆ ಹಾಗೂ ಶಾಸಕಿ ರೂಪಕಲಾಶಶಿಧರ್ ಅವರಿಗೆ ಶಾಕ್ ನೀಡಿದ್ದಾರೆ.

ಪ್ರವಾಸ ಕಲ್ಪಿಸಿದರೂ ಗೆಲ್ಲಲಿಲ್ಲ ಎನ್‌ಟಿಆರ್ ತಮ್ಮ ಅಪ್ತರಿಗೆ ಟೂರ್‌ ಭಾಗ್ಯ ಕಲ್ಪಿಸಿದ್ದರು, ಆದರೆ ಚುನಾವಣೆಯಲ್ಲಿ ಒಂದು ಸ್ಥಾನವನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ, ೧೨ ಸ್ಥಾನಗಳ ಪೈಕಿ ೧೧ ಸ್ಥಾನಗಳನ್ನು ಶಾಸಕರ ವಿರೋಧ ಬಣದವರು ಗೆದ್ದುಕೊಂಡಿದ್ದಾರೆ. ಕರಡುಗೂರು ಗ್ರಾಮದಲ್ಲಿ ಯುವ ಮುಖಂಡನಾಗಿ ಗುರುತಿಸಿಕೊಂಡಿರುವ ಅಭಿಲಾಶ್ ರೈತರ ಮನವೂಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲವು ಪಡೆದ ನಿರ್ದೇಶಕರು: ಚುನಾವಣೆಯಲ್ಲಿ ಆಶೋಕರೆಡ್ಡಿ ಕೆ.ಸಿ.ಮಂಜುನಾಥ್‌ರೆಡ್ಡಿ,ಕೆ.ವಿ,ಶ್ರೀರಾಮರೆಡ್ಡಿ ಪುಣ್ಯವತಿ,ಹಂಸವೇಣಿ, ಪ್ರಕಾಶ್ ಸಾಮಾನ್ಯ ಕ್ಷೇತ್ರದಿಂದ ವೆಂಕಟರಾಮಪ್ಪ ಹಿಂದುಳಿದ ವಗ್ ಪ್ರವರ್ಗ ( ಎ)ಜಯರಾಮರೆಡ್ಡಿ ಹಿಂದುಳಿದ ವರ್ಗ (ಬಿ)ಆಜಂಪ್ಪ ಪರಿಶಿಷ್ಠ ಜಾತಿ ಮೀಸಲು ಸ್ಥಾನ ನಾರಾಯಣಪ್ಪ ಪರಿಶಿಷ್ಟ ಪಂಗಡ ಮೀಸಲು ಸ್ಥಾನ ಆರ್,ಎನ್,ಅನುಸೂಯಮ್ಮ ,ಟಿ.ಎಂ.ಸುಹಾಸಿನಿ ಮಹಿಳಾ ಮೀಸಲು ಸ್ಥಾನದಿಂದ ನಿದೇರ್ಶಕರಾಗಿ ಆಯ್ಕೆಯಾದರು.ಸೌಲಭ್ಯ ಕಲ್ಪಿಸುವ ಭರವಸೆ

ವಿಜೇತ ಅಭ್ಯರ್ಥಿಗಳಿಗೆ ಸನ್ಮಾನಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಲಾಶ್, ಕಳೆದ ೩೦ ವರ್ಷಗಳಿಂದ ಶ್ರೀನಿವಾಸರೆಡ್ಡಿ ಹಾಲು ಉತ್ಪಾದಕರ ಸಂಘವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು, ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದಾಗ ರೈತರಿಗೆ ಸಿಗಬೇಕಾದ ಸೌಲತ್ತುಗಳನ್ನು ಸರ್ಮಪಕವಾಗಿ ತಲುಪಿಸಲು ಸಾಧ್ಯವಾಗಿರಲಿಲ್ಲ,ಇದರಿಂದ ಬೇಸತ್ತು ರೈತರು ನಮ್ಮ ಹೊಸ ತಂಡ ಬೆಂಬಲಿಸಿದ್ದಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''