ಕನ್ನಡಪ್ರಭ ವಾರ್ತೆ, ತರೀಕೆರೆ
ಪಟ್ಟಣದ ನ್ಯಾಷನಲ್ ಆಂಗ್ಲ ಮಾದ್ಯಮ ಶಾಲೆ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಶಾಲೆ 47ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಎಲ್ಲ ವರ್ಗದವರಿಗೂ ಆಂಗ್ಲ ಶಿಕ್ಷಣ ದೊರಕಬೇಕು ಎನ್ನುವ ಆಶಯ ದೊಂದಿಗೆ ಪಟ್ಟಣದಲ್ಲಿ ಅನೇಕ ಮಹನೀಯರ ಪ್ರಯತ್ನದಿಂದ ಈ ಶಾಲೆ ಸ್ಥಾಪಿಸಲಾಗಿದೆ, ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ಸಂತೋಷ ತಂದಿದೆ. ಶಾಲೆ ಸೇವಾ ಮನೋಭಾವ ಹೊಂದಿದೆ, ಬಡವರ್ಗ ದವರಿಗೂ ಉತ್ತಮ ಶಿಕ್ಷಣ ದೊರಕಬೇಕು ಎಂದು ಹೇಳಿದರು.
ಪುರಸಭೆ ಸದಸ್ಯೆ ಗಿರಿಜಾ ಪ್ರಕಾಶ್ ವರ್ಮ ಮಾತನಾಡಿ ಶಿಸ್ತು ಮತ್ತು ಸಂಯಮ ಕಾಪಾಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು.ಲೀಡರ್ ಶಿಪ್ ಬೌಲಿವಾರ್ಡ್ ಪ್ರೈ..ಲಿ.ನ ಏರಿಯಾ ಮ್ಯಾನೇಜರ್ ಕಾರ್ತಿಕ್ ಚಂದ್ರ ಎಸ್. ಮಾತನಾಡಿ ಮಕ್ಕಳು ಮಾದರಿ ಪ್ರಜೆಗಳಾಗಬೇಕು ಎಂದು ಪೋಷಕರಿಗೆ ಆಸೆ ಇರುತ್ತದೆ. ಶಾಲೆಗಳಿಂದ ಅದು ಶುರುವಾಗಬೇಕು, ಹೊಸ ಸವಾಲನ್ನು ಎದುರಿ, ತಾಂತ್ರಿಕತೆಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.ನ್ಯಾಷನಲ್ ಸ್ಕೂಲ್.ನ ಅಡಳಿತ ಮಂಡಳಿ ನಿರ್ದೇಶಕ ಟಿ.ವಿ.ರೇವಣ್ಣ ಮಾತನಾಡಿ ಬಹಳಷ್ಟು ಜನರು ಶ್ರಮಪಟ್ಟು ಆಸಕ್ತಿ ಯಿಂದ ಈ ಶಾಲೆ ಸ್ಥಾಪಿಸಿದ್ದಾರೆ ಎಂದರು.
19ಕೆಟಿಆರ್.ಕೆ.4ಃ
--------------------