ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಉಪಯುಕ್ತ ಮಾಹಿತಿ ನೀಡಿ

KannadaprabhaNewsNetwork |  
Published : Mar 31, 2024, 02:03 AM IST
45 | Kannada Prabha

ಸಾರಾಂಶ

ದೇಸಿ ಕಾರ್ಯಕ್ರಮವು ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕೃಷಿ ವಿವಿ ಹಾಗೂ ಮ್ಯಾನೇಜ್ ವತಿಯಿಂದ ರೂಪಿಸಿದಂತಹ ದೇಸಿ ಕಾರ್ಯಕ್ರಮದಲ್ಲಿ ಶಿಕ್ಷಣಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗಳಲ್ಲಿ ಹಾಜರಿದ್ದು, ಸದರಿ ತರಬೇತಿಯ ಉಪಯೋಗ ಪಡೆದು ರೈತರಿಗೆ ಸಮರ್ಪಕ ಹಾಗೂ ಗುಣಮಟ್ಟದ ತಂತ್ರಜ್ಞಾನ ವಿಧಾನಗಳನ್ನು ರೈತರಿಗೆ ವರ್ಗಾಯಿಸುವಲ್ಲಿ ಕೃಷಿ ಪರಿಕರ ಮಾರಾಟಗಾರರು ಗ್ರಾಮ ಸೇವಕರಂತೆ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಶ್ರಮಿಸಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಜೊತೆಗೆ ತಾವು ಕೂಡಾ ಉದ್ದಿಮೆದಾರರಾಗಿ ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೃಷಿ ವಿವಿ ಸಮೇತಿ (ದಕ್ಷಿಣ) ರಾಜ್ಯ ನೋಡಲ್ ಅಧಿಕಾರಿ (ದೇಸಿ) ಡಾ.ಆರ್. ನಾರಾಯಣ ರೆಡ್ಡಿ ಕರೆ ನೀಡಿದರು.

ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿಸ್ತರಣಾ ನಿರ್ವಹಣಾ ರಾಷ್ಟ್ರೀಯ ಸಂಸ್ಥೆ, ಸಮೇತಿ (ದಕ್ಷಿಣ), ಕೃಷಿ ವಿಶ್ವವಿದ್ಯಾನಿಲಯ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ಇಲಾಖೆ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ 5ನೇ ತಂಡದ ದೇಸಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕೃಷಿ ಪರಿಕರ ಮಾರಾಟಗಾರರು ದೇಸಿ ತರಬೇತಿ ಕಾರ್ಯಕ್ರಮದಲ್ಲಿ ಕಲಿತ ತಾಂತ್ರಿಕತೆಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ತಿಳಿಸಿ, ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ.ಸಿ. ರಾಮಚಂದ್ರ ಮಾತನಾಡಿ, ದೇಸಿ ಕಾರ್ಯಕ್ರಮವು ಇತ್ತೀಚಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಕೃಷಿ ವಿವಿ ಹಾಗೂ ಮ್ಯಾನೇಜ್ ವತಿಯಿಂದ ರೂಪಿಸಿದಂತಹ ದೇಸಿ ಕಾರ್ಯಕ್ರಮದಲ್ಲಿ ಶಿಕ್ಷಣಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗಳಲ್ಲಿ ಹಾಜರಿದ್ದು, ಸದರಿ ತರಬೇತಿಯ ಉಪಯೋಗ ಪಡೆದು ರೈತರಿಗೆ ಸಮರ್ಪಕ ಹಾಗೂ ಗುಣಮಟ್ಟದ ತಂತ್ರಜ್ಞಾನ ವಿಧಾನಗಳನ್ನು ರೈತರಿಗೆ ವರ್ಗಾಯಿಸುವಲ್ಲಿ ಕೃಷಿ ಪರಿಕರ ಮಾರಾಟಗಾರರು ಗ್ರಾಮ ಸೇವಕರಂತೆ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಶ್ರಮಿಸಬೇಕು ಎಂದರು.

ಆಹಾರ ಭದ್ರತೆ, ಪೋಷಕಾಂಶಗಳ ಭದ್ರತೆ ಕಾಪಾಡುವಲ್ಲಿ ರೈತರ ಆದಾಯ ಹೆಚ್ಚಳ ಮಾಡುವಂತಹ ಕೆಲಸ ನಿರ್ವಹಿಸಬೇಕು. ಒಂದು ವರ್ಷದ ಡಿಪ್ಲೊಮಾವನ್ನು ಶಿಸ್ತುಬದ್ಧವಾಗಿ ಕಲಿತು, ಕಲಿತ ವಿಷಯವನ್ನು ರೈತರಿಗೆ ವರ್ಗಾಹಿಸುವಲ್ಲಿ ತಮ್ಮ ಪಾತ್ರ ಬಹಳ ಮುಖ್ಯ ಎಂದು ಅವರು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕಿ ಎಸ್.ಬಿ. ಮಮತಾ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಬಿ.ಪಿ. ಶಿವಪ್ರಕಾಶ್ ಇದ್ದರು. ಎಸ್.ಎನ್. ಅರ್ಪಿತಾ ಸ್ವಾಗತಿಸಿದರು. ಡಾ.ಎ. ನಾಗಮಣಿ ನಿರೂಪಿಸಿದರು. ಡಾ.ಆರ್.ಎನ್. ಪುಷ್ಪಾ ವಂದಿಸಿದರು.

PREV