ಹಳೇಬೀಡು ದೇವರ ಕೆರೆ ಹೂಳೆತ್ತುವ ಕಾರ್ಯ ಶೀಘ್ರ ಶುರು: ಶ್ರೀ ಸೋಮಶೇಖರ ಶಿವಾಚಾರ್ಯರು

KannadaprabhaNewsNetwork |  
Published : Sep 23, 2026, 01:45 AM IST
22ಎಚ್ಎಸ್ಎನ್3 :  ಸಮೀಪದ ಪುಷ್ಪಗಿರಿ ಸಂಸ್ಥಾನದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಇಲ್ಲಿನ   ದೇವರಕೆರೆಯ   ಹೂಳೆತ್ತುವ ಕಾರ್ಯಕ್ರಮದ ಪೂರ್ವಬಾವಿ  ಸಭೆ. | Kannada Prabha

ಸಾರಾಂಶ

ಈ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಕೆರೆಯ ವೀಕ್ಷಣೆ ಮಾಡಿ ಹೂಳು ತೆಗೆಯಲು ಅಂದಾಜು ಪಟ್ಟಿಯನ್ನು ನೀಡಲಾಗುವುದು. ಸದ್ಯದಲ್ಲೇ ನಾವು ಕೆಲಸವನ್ನು ಪ್ರಾರಂಭಿಸುತ್ತೇವೆ. ಇಂದೇ ಸ್ಥಳೀಯ ಸಮಿತಿಯನ್ನು ರಚಿಸಿ ಸಮಿತಿಯಲ್ಲಿ ಗೌರವ ಅಧ್ಯಕ್ಷರಾಗಿ ಪರಮಪೂಜ್ಯ ಶ್ರೀಗಳು ಇರುತ್ತಾರೆ. ಕಾರ್ಯದರ್ಶಿಯಾಗಿ ಯೋಜನಾಧಿಕಾರಿ ಮಂಜುಳಾ, ಅಧ್ಯಕ್ಷರಾಗಿ ನಂಜೇಶ್, ಉಪಾಧ್ಯಕ್ಷರಾಗಿ ಮಹೇಶ್, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜನ್, ಕೋಶಾಧಿಕಾರಿ ಯೋಗೀಶ್ ೨೦ ಸದಸ್ಯರು ಇರುತ್ತಾರೆ.

ಕನ್ನಡಪ್ರಭವಾರ್ತೆ, ಹಳೇಬೀಡು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರಕಾರದ ಅವಿಭಾಜ್ಯ ಅಂಗವಾಗಿ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಶ್ರೀಪುಷ್ಪಗಿರಿ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.

ಇಲ್ಲಿನ ದೇವರಕೆರೆಯ ೪ ಎಕರೆ ೩೮ ಗುಂಟೆ ಕೆರೆಯ ಹೂಳೆತ್ತುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ನಿರಂತರವಾದ ಕೆಲಸ ರೂಪಿಸುತ್ತಾ ಕರ್ನಾಟಕ ರಾಜ್ಯಕ್ಕೆ ಮಾದಿರಿ ಕ್ಷೇತ್ರವಾಗಿರುವುದು ಅಚ್ಚರಿ ವಿಷಯವಾಗಿದೆ. ನಾವು ಒಂದು ತಿಂಗಳ ಹಿಂದೆ ಅವರನ್ನು ಭೇಟಿ ಮಾಡಿದಾಗ ನಮ್ಮನ್ನು ತುಂಬಾ ವಿಶ್ವಾಸದಿಂದ ಸ್ವಾಗತಿಸಿ ತಮ್ಮ ನಿವಾಸದಲ್ಲಿ ೩೦ ನಿಮಿಷಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮಾಭಿವೃದ್ಧಿ ಯೋಜನೆಗಳ ಚರ್ಚೆ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡಿದರು. ಶ್ರೀಕ್ಷೇತ್ರದ ದಾಸೋಹ ಭವನ, ವಸ್ತು ಸಂಗ್ರಹಾಲಯ, ದೇವಾಲಯಕ್ಕೆ ಭೇಟಿ ನೀಡಿದೆವು. ಅವರಿಗೆ ಬಿಡುವಿಲ್ಲದ್ದರೂ ಸಹ ನಮ್ಮೊಂದಿಗೆ ಇದ್ದು ಕ್ಷೇತ್ರದ ಬಗ್ಗೆ ವಿವರ ನೀಡಿದರು ಎಂದು ತಿಳಿಸಿದರು.

ಬೇಲೂರು ಯೋಜನಾಧಿಕಾರಿ ಮಂಜುಳಾ ಮಾತನಾಡುತ್ತಾ, ಈ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಕೆರೆಯ ವೀಕ್ಷಣೆ ಮಾಡಿ ಹೂಳು ತೆಗೆಯಲು ಅಂದಾಜು ಪಟ್ಟಿಯನ್ನು ನೀಡಲಾಗುವುದು. ಸದ್ಯದಲ್ಲೇ ನಾವು ಕೆಲಸವನ್ನು ಪ್ರಾರಂಭಿಸುತ್ತೇವೆ. ಇಂದೇ ಸ್ಥಳೀಯ ಸಮಿತಿಯನ್ನು ರಚಿಸಿ ಸಮಿತಿಯಲ್ಲಿ ಗೌರವ ಅಧ್ಯಕ್ಷರಾಗಿ ಪರಮಪೂಜ್ಯ ಶ್ರೀಗಳು ಇರುತ್ತಾರೆ. ಕಾರ್ಯದರ್ಶಿಯಾಗಿ ಯೋಜನಾಧಿಕಾರಿ ಮಂಜುಳಾ, ಅಧ್ಯಕ್ಷರಾಗಿ ನಂಜೇಶ್, ಉಪಾಧ್ಯಕ್ಷರಾಗಿ ಮಹೇಶ್, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜನ್, ಕೋಶಾಧಿಕಾರಿ ಯೋಗೀಶ್ ೨೦ ಸದಸ್ಯರು ಇರುತ್ತಾರೆ ಎಂದು ತಿಳಿಸಿದರು.

ಕೃಷಿ ಅಧಿಕಾರಿ ನಾಗರಾಜ ಮಾತನಾಡುತ್ತಾ ಪುಷ್ಪಗಿರಿಗೆ ಹಲವಾರು ಬಾರಿ ಭೇಟಿ ಮಾಡಿದ್ದೇನೆ. ಶ್ರೀಗಳು ನಮ್ಮ ಕಾರ್ಯಕ್ರಮಕ್ಕೆ ಸದಾ ಬೆಂಬಲ ನೀಡುತ್ತಾರೆ. ದೇವರ ಕೆರೆ ಅಭಿವೃದ್ಧಿ ತುಂಬಾ ಪುಣ್ಯದ ಕೆಲಸವಾಗಿದೆ ಎಂದು ತಿಳಿಸಿದು.

ಮೈಸೂರು ವಿಭಾಗದ ಇಂಜಿನಿಯರ್ ಪುಷ್ಪರಾಜು, ಹೋಬಳಿ ಮೇಲ್ವಚಾರಕಿ ರಜಿನಿ ಹಾಗೂ ಮಠದ ಎಲ್ಲಾ ಭಕ್ತರು, ಸ್ಥಳೀಯ ಸಹಕಾರ ಸಂಘಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆ ಆದಷ್ಟು ಬೇಗ ಪೂರ್ಣಗೊಳಿಸಿ
ಪಡಿತರ ಪದಾರ್ಥ ಪಡೆಯಲು ದೂರದ ಊರಿಗೆ ಹೋಗಬೇಕಿಲ್ಲ: ಸಚ್ಚಿನ್ ಚಲುವರಾಯಸ್ವಾಮಿ