
ಕನ್ನಡಪ್ರಭ ವಾರ್ತೆ ಚಿಂಚೋಳಿ
ಚೊಂಚೋಳಿ ಪಟ್ಟಣದಲ್ಲಿರುವ "ಪ್ರಜಾಸೌಧ " ತಾಲೂಕಿನ ಜನರ ಹಾಗೂ ಆಡಳಿತ ಯಂತ್ರದ ಪ್ರಮುಖ ಸಂಪರ್ಕ ಕೊಂಡಿ. ಒಂದೇ ಸೂರಿನಡಿ ತಹಸೀಲ್ದಾರ್ ಕಚೇರಿ, ಭೂದಾಖಲೆಗಳ ಕಚೇರಿ, ತಾಲೂಕು ಪಂಚಾಯಿತಿ ಹಾಗೂ ಕಂದಾಯ ಕಚೇರಿಗಳ ಸಹಿತ ವಿವಿಧ ಇಲಾಖೆಗಳ ಸೇವೆ ಒಂದೇ ಸೂರಿನಡಿ ಲಭ್ಯವಾಗಬೇಕೆಂಬ ಉದ್ದೇಶವಿದ್ದರೂ ಪ್ರಸ್ತುತ ಪ್ರಜಾಸೌಧದಲ್ಲಿ ಕಂದಾಯ, ಉಪ ಉಪನೋಂದಣಿ ಇಲಾಖೆ, ಭೂಮಾಪನ ಇಲಾಖೆ, ಆಹಾರ ಇಲಾಖೆ ಹೊರತುಪಡಿಸಿ ಇತರ ಎಲ್ಲ ಇಲಾಖೆಗಳೂ ಇನ್ನೂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳದೆ ಹಳೇ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಕುಂಚಾವರಂ, ಸುಲೇಪೇಟ್, ಗಡಿಕೇಶ್ವರ ಐನಾಪುರ ಚಿಮ್ಮನಚೋಡ್ ನಿಡಗುಂದ, ಮಿರಿಯಾಣ, ಚಂದನಕೇರಾ ಗ್ರಾಮಗಳಿಂದ ತಾಲೂಕುಗಳಿಂದ ಸರ್ಕಾರಿ ಸೇವೆ ಪಡೆಯಲು ಬರುವ ಜನರಿಗೆ ಒಂದೊಂದು ಕೆಲಸಕ್ಕೆ ಹೊಸ ಕಟ್ಟಡ, ಹಳೆಕಟ್ಟಡವೆಂದು ಅಲೆಯುವ ದುಸ್ಥಿತಿ ಎದುರಾಗಿದೆ.
ಪ್ರಜಾಸೌಧದಲ್ಲೂ ಸೌಕರ್ಯಗಳ ಕೊರತೆ: ಚಿಂಚೋಳಿಯು ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಹಿಂದುಳಿದ ತಾಲೂಕಾಗಿದ್ದು, ಇಲ್ಲಿ ಪ್ರಜಾಸೌಧ ನಿರ್ಮಾಣವಾಗಿರುವುದು ತಾಲೂಕಿನ ಆಡಳಿತಾತ್ಮಕ ಸಬಲೀಕರಣಕ್ಕೆ ಮತ್ತು ಮೂಲಸೌಕರ್ಯ ವಿಕಸನಕ್ಕೆ ದೊಡ್ಡ ಕೊಡುಗೆಯಾಗಿದೆ. ಆದರೆ ಇದೇ ಪ್ರಜಾಸೌಧದಲ್ಲಿ ಮೂಲಸೌಕರ್ಯಗಳೇ ಇಲ್ಲವಾಗಿರುವುದು ವಿಪರ್ಯಾಸ. ಇಲ್ಲಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನಗಳಿಲ್ಲ. ಕುಡಿಯಲು ನೀರು, ಶೌಚಾಲಯವಂತೂ ಇಲ್ಲ. ಕೋಟ್ಯಂತರ ರು.ವ್ಯಯಿಸಿ ನಿರ್ಮಿಸಿದ ಪ್ರಜಾಸೌಧದಲ್ಲಿ ಸೇವೆಯೂ ಸಮರ್ಪಕವಿಲ್ಲ, ಜತೆಗೆ ಮೂಲಸೌಕರ್ಯಗ ಕೊರತೆಯೂ ಇವೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.---ಕೋಟ್ಸ್-----
- ಅವಿನಾಶ್ ಜಾಧವ್, ಶಾಸಕ
ಚಿಂಚೋಳಿ ತಾಲೂಕಿನಲ್ಲಿ ಶಾಸಕ ಡ ಉಮೇಶ್ ಜಾಧವ್ ಅವರು 2015-16ರಲ್ಲಿ 10 ಕೋಟಿ ರು. ಅನುದಾನ ತರಿಸಿ ಪ್ರಜಾಸೌಧ ನಿರ್ಮಿಸಿಕೊಟ್ಟಿದ್ದಾರೆ. ಆದರೆ ಅಧಿಕಾರಿಗಳು ತಮ್ಮ ಇಲಾಖೆಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಿಸಿಕೊಂಡಿಲ್ಲ. ಜನರು ತಮ್ಮ ಕೆಲಸಗಳಿಗಾಗಿ ತೊಂದರೆ ಅನುಭವಿಸಬೇಕಿದೆ.
-----ಕೋಟ್ಸ್-----
-ಅಬ್ದುಲ್ ರವೂಫ್ ಮಿರಿಯಾಣ, ಉದ್ಯಮಿ
23ಜಿಯು.ಸಿಎಚ2 ಚಿಂಚೋಳಿ: ಪಟ್ಟಣದ ಚಂದಾಪುರ ಚಿಂಚೋಳಿ ಮುಖ್ಯರಸ್ತೆಯಲ್ಲಿ ನಿರ್ಮಿಸಿದ ಪ್ರಜಾಸೌಧ ಕಟ್ಟಡ.