ಜಿಲ್ಲೆಯ ಎಲ್ಲ 11 ತಾಲೂಕು ತೀವ್ರ ಬರಪೀಡಿತ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು, ಬೆಳೆಹಾನಿ ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳಿಸಿ ಅರ್ಹ ರೈತರಿಗೆ ನಿಯಮಾನುಸಾರ ಪರಿಹಾರ ಮತ್ತು ಅಗತ್ಯ ನೆರವು ತಲುಪಿಸಲು ಈ ಘೋಷಣೆ ನೆರವಾಗಲಿದೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು.
ಕಲಬುರಗಿ: ಜಿಲ್ಲೆಯ ಎಲ್ಲ 11 ತಾಲೂಕು ತೀವ್ರ ಬರಪೀಡಿತ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಿಸಿದ್ದು, ಬೆಳೆಹಾನಿ ಸಮೀಕ್ಷೆ ತ್ವರಿತವಾಗಿ ಪೂರ್ಣಗೊಳಿಸಿ ಅರ್ಹ ರೈತರಿಗೆ ನಿಯಮಾನುಸಾರ ಪರಿಹಾರ ಮತ್ತು ಅಗತ್ಯ ನೆರವು ತಲುಪಿಸಲು ಈ ಘೋಷಣೆ ನೆರವಾಗಲಿದೆ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಸರ್ಕಾರದ ಕ್ರಮವನ್ನು ಸ್ವಾಗತಿಸಿದರು.
ಜಿಲ್ಲೆಯ ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸುವಲ್ಲಿ ಶ್ರಮಿಸಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ಡಾ. ಅಜಯ್ ಧರ್ಮಸಿಂಗ್ ಅವರ ಶ್ರಮವನ್ನು ಅವರು ಶ್ಲಾಘಿಸಿದರು.ಕಲಬುರಗಿ ದಕ್ಷಿಣದಲ್ಲಿಯೂ ಮಳೆಯ ತೀವ್ರ ಕೊರತೆ ಕಾಡುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ ಬರ ಘೋಷಣೆಯಾಗಿದೆ. ನೆರವು ಬರಲಿದೆ. ಮಳೆ ಕೊರತೆ ಮತ್ತು ಬೆಳೆಹಾನಿಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರೌಂಡ್ ಟ್ರೂಥಿಂಗ್ ಮೂಲಕ ನೆಲಮಟ್ಟದ ಸ್ಥಿತಿಯನ್ನು ದಾಖಲಿಸಿದ ಬಳಿಕ ಸರ್ಕಾರ ತೀವ್ರ ಬರಪೀಡಿತ ತಾಲೂಕಾಗಿ ಘೋಷಿಸಿದೆ. ಈಗ ಬೆಳೆಹಾನಿ ಸಮೀಕ್ಷೆಯಿಂದ ಪರಿಹಾರ ವಿತರಣೆಯವರೆಗೆ ಪ್ರಕ್ರಿಯೆ ವೇಗವಾಗಿ ನಡೆಯಬೇಕಿದೆ. ಆ ಕೆಲಸವೂ ನಡೆಯಲಿದೆ. ರೈತರು ಸಹಕಾರ ನೀಡುವಂತೆ ಶಾಸಕರು ಕೋರಿದರು..ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಬೇಕು. ಹಾನಿಯ ವಾಸ್ತವ ಪ್ರಮಾಣ ಸಮರ್ಪಕವಾಗಿ ದಾಖಲಾಗುವಂತೆ ಹಾಗೂ ಅರ್ಹ ರೈತರಿಗೆ ನೆರವು ದೊರೆಯುವಂತೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಶಾಸಕರು ಸೂಚಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.