ಹೊಸಕೋಟೆ: ಬಿಜೆಪಿಗೆ ಮತ ಹಾಕಿದರೆಂಬ ಕಾರಣಕ್ಕೆ ರೈತರೊಬ್ಬರ ತೋಟದಲ್ಲಿನ ಪೈಪ್ ಲೈನ್‌ಗಳನ್ನು, ಕೃಷಿ ಹೊಂಡದ ಟಾರ್ಪಲ್ ಅನ್ನು ಕತ್ತರಿಸಿ ನಾಶ ಮಾಡಲಾಗಿದೆ.
ಹೊಸಕೋಟೆ: ಬಿಜೆಪಿಗೆ ಮತ ಹಾಕಿದರೆಂಬ ಕಾರಣಕ್ಕೆ ರೈತರೊಬ್ಬರ ತೋಟದಲ್ಲಿನ ಪೈಪ್ ಲೈನ್‌ಗಳನ್ನು, ಕೃಷಿ ಹೊಂಡದ ಟಾರ್ಪಲ್ ಅನ್ನು ಕತ್ತರಿಸಿ ನಾಶ ಮಾಡಲಾಗಿದೆ. ತಾಲೂಕಿನ ಬೆಟ್ಟಹಳ್ಳಿ ರೈತ ರಾಜಣ್ಣ ಕಳೆದ ವಿಧಾನಸಬಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದು, ಅವರ ಮಗ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದರೆಂದು ಕಾಂಗ್ರೆಸ್ ನ ಕೆಲವರು ಕಿರುಕುಳ ಕೊಡುತ್ತಿದ್ದಾರೆಂದು ರೈತ ರಾಜಣ್ಣ ಅಳಲನ್ನು ತೋಡಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ನಂತರ ದಿನಗಳಲ್ಲಿ 4ನೇ ಬಾರಿ ಈ ರೀತಿ ತೋಟದಲ್ಲಿನ ಪೈಪ್ ಲೈನ್ ಕತ್ತರಿಸಿದ್ದಾರೆ. ಈ ಕುರಿತು 2 ಬಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆಂದರು.