ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಶೀರ್ಷಿಕೆಯ ಜಾನಪದ ಉತ್ಸವದಲ್ಲಿ ಅವರು ಮಾತನಾಡಿ, ಭಾರತೀಯ ಸಂಸ್ಕೃತಿ ಪ್ರಪಂಚದಲ್ಲಿಯೇ ಅತ್ಯದ್ಭುತ ಸಂಸ್ಕೃತಿ ಎಂದು ಬಣ್ಣಿಸಿದರು.ಗ್ರಾಮೀಣ ಸೊಗಡು ಉಳಿಸಿ
ಭಾರತೀಯ ಗ್ರಾಮೀಣ ಭಾಗದ ಸಾಮಾಜಿಕ ಸಂಸ್ಕೃತಿಯಲ್ಲಿ ಜಾನಪದ ಕಲೆ, ನೃತ್ಯ, ಸಂಗೀತ ಮತ್ತು ಸಾಮಾಜಿಕ ಸಂಬಂಧಗಳು ಹಿಂದಿನಿಂದಲೂ ಮಾನವನ ಜೀವನದೊಂದಿಗೆ ಹೊಂದಿಕೊಂಡು ಬಂದಿರುವುದನ್ನು ನಂತರದ ಪೀಳಿಗೆಗೆ ತಲುಪಿಸಿ ಯುವ ಸಮೂಹವು ಹಿಂದಿನ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ಮೂಲಕ ಮರೆಯಾಗುತ್ತಿರುವ ಭಾರತೀಯ ಗ್ರಾಮೀಣ ಸೊಗಡನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು,ಗ್ರಾಮೀಣ ಉಡುಗೆ ಧರಿಸಿ ಮೆರವಣಿಗೆ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕ ವರ್ಗ ಗ್ರಾಮೀಣ ಉಡುಪುಗಳನ್ನು ಧರಿಸಿ ಗ್ರಾಮೀಣ ಸಾಂಸ್ಕೃತಿಕ ಕಲಾ ತಂಡಗಳ ಜೊತೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಮುರಳಿ ಆನಂದ್, ಡಾ. ಶಫಿ ಅಹಮದ್, ಡಾ. ವಿಜಯೇಂದ್ರ ಕುಮಾರ್, ಡಾ. ರವಿಕುಮಾರ್, ಡಾ. ಸುನಿತಾ, ಪ್ರೊ. ಸುಗುಣ ಪ್ರೊ. ಜ್ಯೋತಿ ಡಾ. ರವಿಕುಮಾರ್ ಪ್ರೊ. ಶಿವಶಂಕರಿ ಪ್ರೊ. ವೆಂಕಟೇಶ್, ಗಿರಿಜಾ, ಪ್ರತಿಮಾ, ಕುಮಾರಿ ಶ್ವೇತಾ ಮತ್ತಿತರರು ಇದ್ದರು.