ನ್ಯಾಮತಿ: ಜನಸಂಖ್ಯಾ ಸ್ಫೋಟದಿಂದಾಗಿ ನೈಸರ್ಗಿಕ ಸಂಪನ್ಮೂಲಗಳು ಶೀಘ್ರ ಕ್ಷೀಣಿಸುತ್ತಿವೆ. ಪಳೆಯುಳಿಕೆ ಇಂಧನದಂತಹ ಕೆಲವು ಸಂಪನ್ಮೂಲಗಳು ನವೀಕರಿಸಲು ಸಾಧ್ಯವಿಲ್ಲ. ಇದರಿಂದಾಗಿ ಈಗಾಗಲೇ ಪ್ರಮುಖ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇಂತಹ ಸವಕಳಿ, ಕೊರತೆಯು ಜನರ ಜೀವನೋಪಾಯ ಮತ್ತು ದೈನಂದಿನ ಜೀವನವನ್ನು ಹಾಳು ಮಾಡುತ್ತಿವೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಿ.ನಿಂಗಪ್ಪ ಹೇಳಿದರು.
ಜನಸಂಖ್ಯೆ ಸ್ಫೋಟದಿಂದ ಈಗಾಗಲೇ ಮೂಲ ಸೌಕರ್ಯಗಳ ಕೊರತೆ, ನೈಸರ್ಗಿಕ ಸಂಪನ್ಮೂಲಗಳ ನಾಶ, ಸಸ್ಯ-ಪ್ರಾಣಿ ಸಂಕುಲಗಳ ನಿರ್ನಾಮ, ಜೀವಭೀತಿಯ ಮಾಲಿನ್ಯ, ಶಿಶುಮರಣ, ಹಸಿವು, ಕಡುಬಡತನದಂಥ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದರು.
ಜನಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ತಾಜ್ಯವಸ್ತು, ತಾಜ್ಯ ನೀರಿನ ನಿರ್ವಹಣೆ ಕಷ್ಟವಾಗುತ್ತಿದೆ. ವಾಸಕ್ಕೆ ಒದಗುವ ಭೂಮಿ ಕಿರಿದಾಗುತ್ತಿದೆ. ಹೀಗೆ ಹತ್ತು ಹಲವಾರು ಸಮಸ್ಯೆಗಳು ಉಲ್ಬಣಿಸುತ್ತಿವೆ ಎಂದ ಅವರು, ಜನಸಂಖ್ಯಾ ಸ್ಫೋಟ ತಡೆಗೆ ಕುಟುಂಬ ಕಲ್ಯಾಣ ಇಲಾಖೆಯಡಿ ತಾತ್ಕಾಲಿಕ ಹಾಗೂ ಶಾಶ್ವತ ವಿಧಾನಗಳ ಕ್ರಮ ಕೈಗೊಳ್ಳುವ ಅಗತ್ಯ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಕುಸುಮ, ಶಿಲ್ಪಾ, ಆರೋಗ್ಯ ನಿರೀಕ್ಷಣಾಧಿಕಾರಿ ನವೀನ ಮತ್ತು ಆಶಾ ಕಾರ್ಯಕರ್ತರು ಇದ್ದರು.
- - - (-ಫೋಟೋ:)