ದೃಢ ನಿರ್ಧಾರ, ಕಠಿಣ ಪರಿಶ್ರಮ ಯಶಸ್ಸಿನ ಹಾದಿ: ಪ್ರೊ.ಸುರೇಂದ್ರನಾಥ ಶೆಟ್ಟಿ

KannadaprabhaNewsNetwork |  
Published : Mar 22, 2024, 01:00 AM IST
ಬಂಟ21 | Kannada Prabha

ಸಾರಾಂಶ

ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಆಶ್ರಯದಲ್ಲಿ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಕ್ರಮ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖವಾಗಿ ಮೈಗೂಡಿಸಿ ಕೊಳ್ಳಬೇಕಾದ ಎರಡು ಗುಣಗಳೆಂದರೆ ತಮ್ಮ ಗುರಿಯ ಬಗ್ಗೆ ದೃಢ ನಿರ್ಧಾರ ಮತ್ತು ಕಠಿಣ ಪರಿಶ್ರಮ. ಕಲಿಕೆಯ ದಾರಿಯಲ್ಲಿ ತಮ್ಮ ಅಭಿರುಚಿಯ ವಿಷಯದ ಅಧ್ಯಯನದಲ್ಲಿ ನಿರಂತರತೆ ಪಾಲಿಸಲೇಬೇಕು ಎಂದು ಉಡುಪಿ ಎಂಜಿಎಂ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಪಟ್ಟರು.ಅವರು ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಆಶ್ರಯದಲ್ಲಿ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿನ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.ಇಂದಿನ ಸಿ.ಇ.ಟಿ., ಎನ್.ಇ.ಇ.ಟಿ. ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಗಮವಾಗಿ ಎದುರಿಸಿ ಗೆಲ್ಲ ಬೇಕಾದರೆ ತಾವು ಕಲಿತು ಪರಿಣಿತಿಗೊಳ್ಳಲಿಚ್ಛಿಸುವ ವಿಷಯಗಳಲ್ಲಿ ಹೆಚ್ಚಿನ ತರಬೇತಿ ಅನಿವಾರ್ಯತೆ ಇದೆ. ಬಹುಮುಖ್ಯವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಲ್ಲಿ ಹೆಚ್ಚಿನ ಸಹಾಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಂಟರ ಸಂಘ ಹೆಚ್ಚಿನ ಆಸಕ್ತಿ ವಹಿಸಿ ಉಚಿತ ತರಬೇತಿಯನ್ನು ಉಡುಪಿಯ ವಿನಯ ಅಕಾಡೆಮಿಯ ಮೂಲಕ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಸಭೆಯ ಅಧ್ಯಕ್ಷತೆಯನ್ನು ಉಡುಪಿ ಬಂಟರ ಸಂಘದ ಸಂಚಾಲಕ ಶಿವಪ್ರಸಾದ್ ಹೆಗ್ಡೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಜಯರಾಜ್ ಹೆಗ್ಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಬಂಟರ ಸಂಘದ ಹಿರಿಯ ಸದಸ್ಯರಾದ ಪ್ರಸಾದ್ ಹೆಗ್ಡೆ ಮಾರಾಳಿ, ಚೇರ್ಕಾಡಿ ಹರೀಶ್ ಶೆಟ್ಟಿ, ಕಿಶೋರ್ ಶೆಟ್ಟಿ, ಮಿಥುನ್ ಹೆಗ್ಡೆ, ಇಂದಿರಾ ಎಸ್. ಹೆಗ್ಡೆ, ಅನುಪಮ ಪ್ರಸಾದ್ ಶೆಟ್ಟಿ, ತಾರಾನಾಥ್ ಹೆಗ್ಡೆ ಮಣಿಪಾಲ್, ವಿನಯ ಅಕಾಡೆಮಿಯ ತರಬೇತುದಾರ ಪ್ರಶಾಂತ ಉಪಸ್ಥಿತರಿದ್ದರು.ಬಂಟರ ಸಂಘದ ಉಪ ಸಂಚಾಲಕ ದಿನೇಶ್ ಹೆಗ್ಡೆ ವಂದಿಸಿದರು. ಹಿರಿಯ ಸದಸ್ಯ ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌