ದೇವದುರ್ಗ: ಜಿಲ್ಲೆಯಲ್ಲಿ ಅತಿ ಕಡಿಮೆ ಶೇ.13 ಕಡಿತ

KannadaprabhaNewsNetwork |  
Published : Aug 25, 2026, 01:30 AM IST
 | Kannada Prabha

ಸಾರಾಂಶ

ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ವಿಶೇಷ ಪರಿಷ್ಕರಣಾ ಕಾರ್ಯಕ್ರಮ ಪೂರ್ಣಗೊಂಡಿದ್ದು, ಅಂತಿಮ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವದು ಎಂದು ನೋಡಲ್ ಅಧಿಕಾರಿ ಈರಣ್ಣ ಬಿರಾದಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ವಿಶೇಷ ಪರಿಷ್ಕರಣಾ ಕಾರ್ಯಕ್ರಮ ಪೂರ್ಣಗೊಂಡಿದ್ದು, ಅಂತಿಮ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವದು ಎಂದು ನೋಡಲ್ ಅಧಿಕಾರಿ ಈರಣ್ಣ ಬಿರಾದಾರ ತಿಳಿಸಿದರು.

ಸ್ಥಳೀಯ ವಿಧಾನಸಭಾ ಸಭಾಂಗಣದಲ್ಲಿ ಸೋಮವಾರ ವಿವಿಧ ಪಕ್ಷಗಳ ಮುಖಂಡರ ಸಭೆ ಬಳಿಕ,ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಧಾನಸಭಾ ಕ್ಷೇತ್ರದಲ್ಲಿ 2.44.610 ಮತದಾರರಲ್ಲಿ 2.11.016 ಮತದಾರರನ್ನು ಖಚಿತಪಡಿಸಿಕೊಳ್ಳಲಾಗಿದೆ. ಮ್ಯಾಪಿಂಗ್ ಆಗದೇ ಇರುವ 75 ಗುಂಪುಗಳಲ್ಲಿ 2504 ಮತದಾರರಿದ್ದಾರೆ.ದೇವದುರ್ಗ,ಅರಕೇರಾ,ಜಾಲಹಳ್ಳಿ ಮತ್ತು ಗಬ್ಬೂರ ಕೇಂದ್ರಗಳಲ್ಲಿ ಕೈಬಿಡುವ ಶಂಕೆ ಇರುವ ಮತದಾರರ ವಿಚಾರಣೆ ನಡೆಯಲಿದೆ.ಸೂಕ್ತ ದಾಖಲೆಗಳನ್ನು ಒದಗಿಸಿದಲ್ಲಿ ಪುನಃ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸದಾವಕಾಶವಿದೆ.ಅರ್ಹರು ಯಾರೂ ಮತದಾರರ ಪಟ್ಟಿಯಿಂದ ಹೊರಗೊಳಿ ಯಬಾರದು ಎಂಬ ಉದ್ದೇಶ ಹೊಂದಲಾಗಿದೆ.

ಈ ಕ್ಷೇತ್ರದಲ್ಲಿ 6322 ಮತದಾರರು ಮೃತಪಟ್ಟಿದ್ದು,21.803 ಮತದಾರರು ಶಾಶ್ವತವಾಗಿ ಸ್ಥಳಾಂತರಗೊAಡಿದ್ದಾರೆ.4.342 ಮತದಾರರ ಹೆಸರು ಎರಡು ಸ್ಥಳದಲ್ಲಿರುವದರಿಂದ ಅಂಥ ಮತದಾರರನ್ನು ಪಟ್ಟಿಯಿಂದ ಹೊರತೆಗೆಯಲಾಗಿದೆ.1.101 ಮತದಾರರ ಮಾಹಿತಿ ಲಭ್ಯವಾಗಿಲ್ಲ.26ಮತದಾರರ ವಿಳಾಸ,ಹೆಸರುಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಎಲ್ಲಾ ಅಂಶಗಳನ್ನು ಪರಿಗಣಿಸಿ ಕ್ಷೇತ್ರದಲ್ಲಿ 33.594 ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಡಲಾಗಿದ್ದು, ಜಿಲ್ಲೆಯಲ್ಲಿಯೇ ಅತಿ ಕಡಿಮೆ ಶೇ.13,75 ಮತದಾರರು ಈ ಕ್ಷೇತ್ರದಲ್ಲಿ ಕೈಬಿಡಲಾಗಿದೆ.

ಅ,22ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದೆ.ಲೋಪ-ದೋಶಗಳ ಸರಿಪಡಿಸಲು, ಹೊಸದಾಗಿ ಅರ್ಜಿ ಸಲ್ಲಿಸಲು ಫಾ.ನಂ.6 ಮೂಲಕ ಪಟ್ಟಿಗೆ ಸೇರ್ಪಡೆಗೊಳಿಸಲು ಕಾಲಾವಕಾಶ ನೀಡಲಾಗುತ್ತಿದೆ. 4 ಹೋಬಳಿ ಕೇಂದ್ರಗಳ ವ್ಯಾಪ್ತಿಯ ಮತದರಾರರು ತಿದ್ದುಪಡಿ ಸೇರಿದಂತೆ ಇತರೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವದು.

ಕ್ಷೇತ್ರದಲ್ಲಿ ಇಲ್ಲಿಯವರೆಗೆ 267 ಮತಗಟ್ಟೆಗಳಿದ್ದು ಇದೀಗ ಮತದಾರರ ಪರಿಷ್ಕರಣೆ ಬಳಿಕ 275 ಮತಗಟ್ಟೆಗಳು ಸ್ಥಾಪನೆಗೊಳ್ಳಲಿವೆ.ಚಿಂಚೋಡಿ,ಇರಬಗೇರಾ,ಬಿ.ಆರ್.ಗುAಡ,ಊಟಿ, ಬಂಡೇಗುಡ್ಡ, ಪಲಕನಮರಡಿ, ಶಾವಂತಗಲ್, ಚಡಕಲಗುಡ್ಡ ಗ್ರಾಮಗಳಲ್ಲಿ ಹೊಸ ಮತಗಟ್ಟೆಗಳು ಸೇರ್ಪಡೆಗೊಳ್ಳಲಿವೆ. ಕ್ಷೇತ್ರದ ಮತದಾರರು ಬಿಎಲ್‌ಓ ಮತ್ತು ಬಿಎಲ್‌ಎಗಳಲ್ಲಿ ಮತದಾರರ ಕರಡು ಪ್ರತಿ ಲಭ್ಯವಿದ್ದು,ಪರಿಶೀಲಿಸಿಕೊಳ್ಳಬೇಕೆಂದು ನೋಡಲ್ ಅಧಿಕಾರಿ ಈರಣ್ಣ ಬಿರಾದಾರ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್‌ ನಾಗಮ್ಮ ಎಂ. ಕಟ್ಟೀಮನಿ, ಚುನಾವಣಾ ವಿಭಾಗದ ಉಮೇಶ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲಿನ ಪ್ರೋತ್ಸಾಹ ಧನ 5ರಿಂದ 7ರುಗೆ ಹೆಚ್ಚಳ ಸಾಧ್ಯತೆ
ಬೇಸಿಗೆಗೆ ಸತತ 120 ದಿನ ಭದ್ರಾ ನೀರು ಹರಿಸಿ